ನೈರ್ಮಲ್ಯ, ಆರೋಗ್ಯ ವಿಷಯದಲ್ಲಿ ಶೌಚಾಲಯವು ಅತೀ ಅಗತ್ಯ. ಕರ್ನಾಟಕ ಸರಕಾರ ಆರಂಭಿಸಿದ ಶೌಚಗೃಹ ಅಭಿಯಾನದಂಗವಾಗಿ ಇಲ್ಲಿನ ಸ್ಥಿತಿ ಬದಲಾಗಿದೆ. 2015 ರ ಮೊದಲು ಶೌಚಲಯ ಬಳಕೆ ಬಗ್ಗೆ  ಬಳಕೆಗೆ ಜನ ನಿರುತ್ಸಾಹ ತೋರಿಸುತ್ತಿದ್ದರು. ಈ ಪ್ರದೇಶದ ತುಂಬೆಲ್ಲ ಹೊರ ಶೌಚ ಮಾಡುತ್ತಿದ್ದರು. 2012 ರ ಬೇಸ್‍ಲೈನ್ ಗುರುತಿಸಲಾದ ಶೌಚಾಲಯಗಳು ಇವರ ಮನೋಭಾವ ಬದಲಾವಣೆಗೆ ಕಾರಣವಾಯಿತು. ಇದರ ಫಲವಾಗಿ 2016 ಅಕೋಬರ್ 2 ರಂದು ಬಯಲು ಬರ್ಹಿದೆಸೆ ಮುಕ್ತ ಗ್ರಾಮ ಪಂಚಾಯತ್ ಎಂಬ ಬಿರುದು ಪಡೆಯಿತು. 2007-08ನೇ ಸಾಲಿನಲ್ಲಿ ರಾಷ್ಟ್ರೀಯ ನಿರ್ಮಲ ಗ್ರಾಮ ಪುರಸ್ಕಾರ ಪಡೆಯಿತು.

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅಂಡಿಂಜೆ ಗ್ರಾಮದ ಪರಿಸರದ ತುಂಬೆಲ್ಲಾ ದಿನ ನಿತ್ಯದ ವಿವಿಧ ಕಾರಣಗಳಿಗೆ ಸಂಚರಿಸುವ ಜನರು. ವ್ಯಾಪಾರ ಮಳಿಗೆಗಳು, ಬಾರ್ ಹಾಗೂ ಹೊಟೇಲ್ ಇವೆಲ್ಲವುಗಳು ಈ ಪರಿಸರವನ್ನು ಕಾರ್ಯನಿರತ ಸ್ಥಳವಾಗಿಸಿ ಬಿಟ್ಟಿತ್ತು. ಹತ್ತಿರದಲ್ಲಿ ಬಾರ್ ಇದ್ದು ಇಲ್ಲಿ ಮದ್ಯಪಾನ ಮಾಡುವವರು  ಇಲ್ಲಿನ ಸ್ಥಳವನ್ನು ಮಲೀನವಾಗಿ ಇಟ್ಟುಕೊಳ್ಳುತ್ತಿದ್ದರು. ದಾರಿಹೋಕರಿಗೆ ಸರಿಯಾದ ಶೌಚಾಗೃಹ ಇಲ್ಲದೆ ಹಾದಿಬೀದಿಗಳು ಸೇರಿದಂತೆ ಬಯಲೆ ಶೌಚಕ್ಕೆ ಆಶ್ರಯವನ್ನಾಗಿಸಿತ್ತು.

ಇತರೆ ವ್ಯಾಪಾರಿ ಅಂಗಂಡಿಗಳು ಬಸ್ಸು ತಂಗುದಾಣ, ಬಾರ್ ರೆಸ್ಟೋರೆಂಟ್ ಮೀನು ಮಾರುಕಟ್ಟೆ, ದಿನಸಿ ವ್ಯಾಪಾರ ,ಸೆಲೂನು ,ಬೇಕರಿ, ಹಾರ್ಡ್‍ವೇರ್, ಕೋಳಿ ಮಾಂಸದ ಅಂಗಡಿ ಮುಂತಾದ ಅಂಗಡಿಗಳು ಇಲ್ಲಿನ ಜನ ಸಂದಣಿಯನ್ನು ಇನ್ನು ಹೆಚ್ಚಿಸಿತ್ತು. ಸಾರ್ವಜನಿಕರಿಗೆ ಶೌಚಾಲಯದ ಅಗತ್ಯ ಹೆಚ್ಚು ಇರುವಂತೆ ಮಾಡಿತ್ತು.

ಈ ನಿಮಿತ್ತ ಆಗಿನ ಪಂಚಾಯತ್ ಆಡಳಿತ ತೀರ್ಮಾನಿಸಿದಂತೆ ಸ್ವಚ್ಛ ಭಾರತ್ ಮಿಷನ್ (ಗ್ರಾ) ಯೋಜನೆಯಡಿ ಸಾರ್ವಜನಿಕ ಶೌಚಾಲಯ ಅನುದಾನವನ್ನು ಬಳಸಿಕೊಂಡು ಪ್ರಸ್ತಾವನೆ ಸಲ್ಲಿಸಿ ಈ ಪ್ರದೇಶದಲ್ಲಿ ಶೌಚಾಲಯ ಆರಂಭಿಸಿತ್ತು.   ರೂ.4 ಲಕ್ಷದ( 0.40 ಸಾವಿರ ವಂತಿಗೆ ಹಣ) ಘಟಕ ವೆಚ್ಚದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣವಾಗಿ ಬಹುತೇಕ ಜನರ ಬೇಡಿಕೆ ಹಾಗೂ ಸಮಸ್ಯೆಗೆ ಅಂತ್ಯ ತರಿಸಿತು.

ಪ್ರಸ್ತುತ ದಿವಸ ನೂರಾರು ಜನ ಈ ಸಮುದಾಯ ಶೌಚಾಲಯ ಬಳಸಿಕೊಳ್ಳುತ್ತಿದ್ದಾರೆ.  ಸಾರ್ವಜನಿಕರು, ಮದ್ಯವ್ಯಸನಿಗಳು ಈ ಶೌಚಾಲಯ ಬಳಸಿಕೊಳ್ಳುತ್ತಿದ್ದಾರೆ. ಇದರ ನಿರ್ವಹಣೆಯನ್ನು ಗ್ರಾಮ ಪಂಚಾಯತ್ ನೇಮಿಸಿದ ವ್ಯಕ್ತಿ ಅಲ್ಲದೇ  ಅಂಡಿಂಜೆ ಯುವಕ ಮಂಡಲದ ಸದಸ್ಯರು  ಶುಚಿತ್ವನ್ನು ಕಾಪಾಡಿಕೊಳ್ಳುತ್ತಿದ್ದಾರೆ.  ಯಾರೇ ಆದರೂ ಶೌಚಾಲಯದ ಸೌಂದರ್ಯ ಹಾಗೂ ಶುಚಿತ್ವಕ್ಕೆ ಧಕ್ಕೆ ತಂದರೆ ಪ್ರಶ್ನಿಸುತ್ತಾರೆ.

ಅಂಡಿಂಜೆ ಗ್ರಾಮ ಪಂಚಾಯತ್ ಅಭಿವೃಧ್ಧಿಯ ಪಥದಲ್ಲಿ ಸಾಗುತ್ತಿದ್ದು ಅಂಡಿಂಜೆ, ಕೊಕ್ರಾಡಿ,ಸಾವ್ಯ ಎಂಬ ಮೂರು ಗ್ರಾಮಗಳನ್ನು ಹೊಂದಿದೆ. ವ್ಯಾಪ್ತಿಯಲ್ಲಿ ಒಟ್ಟು 1027 ಕುಟುಂಬಗಳಿದ್ದು ಅದರಲ್ಲಿ ಪ.ಜಾತಿ ಕುಟುಂಬ 37,ಪ.ಪಂಗಡ ಕುಟುಂಬ 33 ಇತರೆ 857 ಕುಟುಂಬಗಳಿರುತ್ತದೆ. ಒಟ್ಟು 4729 ಜನಸಂಖ್ಯೆಇರುವ ಈ ಗ್ರಾಮ ಪಂಚಾಯತ್ 13 ಸದಸ್ಯ ಬಲವನ್ನು ಹೊಂದಿದೆ.

ಈ ಗ್ರಾಮ ಪಂಚಾಯತು ವ್ಯಾಪ್ತಿಯಲ್ಲಿ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್  ಸಮುದಾಯದವರು ಸೇರಿದಂತೆ ವಿವಿಧ ಧರ್ಮದ ಜನರು ಸಹಬಾಳ್ವೆಯಿಂದ ಬಾಳುತ್ತಿದ್ದಾರೆ.ಇಲ್ಲಿನ ಜನರ ಮುಖ್ಯ ಕಸುಬು ಕೃಷಿಯಾಗಿದ್ದು, ಉದ್ಯಮ, ಬೀಡಿ, ಕೂಲಿ,ಗುಡಿಕೈಗಾರಿಕೆ ಇತ್ಯಾದಿ ಚಟುವಟಿಕೆಗಳನ್ನು ಮಾಡುತ್ತಿದ್ದಾರೆ.

ಅಂಡಿಂಜೆ ಗ್ರಾಮ ಪಂಚಾಯತ್ ವ್ಯಾಪ್ತಿಗೆ ಸಂಬಂಧಿಸಿದಂತೆ ಅಂಡಿಂಜೆ ಕಿಲಾರ ಮಾರಿಕಾಂಬ ದೇವಾಲಯವು ಪ್ರಸಿದ್ದ ಧಾರ್ಮಿಕ ದೇವಾಲಯವಾಗಿದ್ದು. ಇತರ ಧಾರ್ಮಿಕ  ಶಕ್ತಿ ಕೇಂದ್ರಗಳಾಗಿದೆ.

By ಡೊಂಬಯ್ಯ ಇಡ್ಕಿದು