ಮಂಗಳೂರು:  ರಾಮನಗರ ಜಿಲ್ಲೆ, ಕನಕಪುರ ತಾಲೂಕು, ಉಯ್ಯಂಬಳ್ಳಿ ಹೋಬಳಿ, ನಲ್ಲಹಳ್ಳಿ ಗ್ರಾಮದ ಸ.ನಂ.283 ರಲ್ಲಿ 10.00 ಎಕರೆ ಜಮೀನನ್ನು ಧಾರ್ಮಿಕ ಮತ್ತು ಸಾಮಾಜಿಕ ಚಟುವಟಿಕೆಗಳ ಉದ್ದೇಶಕ್ಕಾಗಿ ಹಾರೋಬೆಲೆ ಕಪಾಲಬೆಟ್ಟ ಅಭಿವೃದ್ಧಿ ಟ್ರಸ್ಟ್ (ರಿ), ಹಾರೋಬೆಲೆ ಕನಕಪುರ ತಾಲೂಕು ಇವರಿಗೆ ಮಂಜೂರು ಮಾಡಿದ ಸ್ಥಳದಲ್ಲಿ ಏಸುಕ್ರಿಸ್ತರ ಪ್ರತಿಮೆಯನ್ನು ಸ್ಥಾಪಿಸುವ ಬಗ್ಗೆ. ಈ ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲಿ ಅನೇಕ ದಿನಗಳಿಂದ ಚರ್ಚಿತವಾಗುವ ವಿಷಯದಲ್ಲಿ ಅಂದರೆ ಕನಕಪುರ ತಾಲೂಕು ಹಾರೋಬೆಲೆ ಎಂಬ ಪುಟ್ಟ ಗ್ರಾಮವೊಂದರ ಪುಟ್ಟ ಗುಡ್ಡದಲ್ಲಿ ಅಲ್ಲಿ ವಾಸಿಸುವ ಕ್ರಿಶ್ಚಿಯನ್ ಬಂಧುಗಳು ಸ್ಥಾಪಿಸಲು ಹೊರಟಿರುವ ಕ್ರಿಸ್ತನ ಪ್ರತಿಮೆ ಬಗ್ಗೆ ಸರಿಯಾದ ಮಾಹಿತಿಯನ್ನೇ ತಿಳಿಯದೆ ಕೆಲವು ಮಹಾನುಭಾವರು ಅಡ್ಡಿಪಡಿಸುವ ಪ್ರಯತ್ನ ನಡೆಯುತ್ತ ಇರುವುದು ಕಂಡುಬರುತ್ತಿದೆ. 1662ನೇ ಇಸವಿಯಿಂದಲೇ ಇಲ್ಲಿ ಕ್ರಿಶ್ಚಿಯನ್ ಧರ್ಮವು ಇರುವುದು ದಾಖಲೆ ಇದೆ. ಯೇಸು ಕ್ರಿಸ್ತನನ್ನು ಶಿಲುಬೆಗೆ ಜೆರೊಸೆಲ್ಯೂಮ್ಮಲ್ಲಿ ಏರಿಸಿದ ಸ್ಥಳದ ಹೆಸರನ್ನೇ ಈ ಸ್ಥಳಕ್ಕೂ ಇರಿಸಲಾಗಿದೆ. 

ಇಂದಿಗೂ ಆ ಸ್ಥಳವನ್ನು ಕಪಾಲ ಬೆಟ್ಟ ಎಂದು ಕರೆಯುತ್ತಾರೆ. ಹಾರೋಬಲೆ ಗ್ರಾಮಸ್ಥರು 1906ನೇ ವರ್ಷದಲ್ಲೇ ತಮ್ಮ ಗ್ರಾಮದ ಗುಡ್ಡದ ಮೇಲೆ ಯೇಸುವಿನ ಪ್ರತಿಮೆ ಸ್ಥಾಪಿಸಿ ಮೆಟ್ಟಿಲುಗಳನ್ನು ನಿರ್ಮಿಸಿ ಗುಡ್ಡ ಹತ್ತುವ ಮಾರ್ಗದಲ್ಲಿ ಗೂಡುಗಳನ್ನು ಸ್ಥಾಪಿಸಿ ಶಿಲುಬೆಗಳನ್ನು ಇರಿಸಿ ಕ್ರಿಸ್ಮಸ್ ಗುಡ್ ಪ್ರೆಡೆ ಈಸ್ಟರ್ ನಂಥ ಹಬ್ಬದ ದಿನಗಳಲ್ಲಿ ಕಪಾಲ ಬೆಟ್ಟ ಎಂದು ಸ್ಥಳೀಯ ಕ್ರಿಸ್ತರಿಂದ ಹಾಗೂ ಯೇಸು ಬೆಟ್ಟ ಎಂದು ಸುತ್ತಲಿನ ಗ್ರಾಮಸ್ಥರಿಂದ ಕರೆಯುವ ಈ ಸ್ಥಳದಲ್ಲಿ ದಶಕಗಳಿಂದ ನಡೆಯುತ್ತ ಬಂದಿರುವ ಪದ್ಧತಿ ಎಂದಿಗೂ ಬೇಧ ಭಾವವಿಲ್ಲದೆ ಸಹೋದರಂತೆ ಬಾಳುತಿರುವವರ ಮಧ್ಯ ಬೆಂಕಿ ಹಚ್ಚುವ ಕೆಲಸಬೇಡ, ಕಪಾಲ ಬೆಟ್ಟವೇ ಹೊರತು ಕಪಾಲಿ ಬೆಟ್ಟವಲ್ಲ ಎಂಬ ಸತ್ಯ ಅರಿತು ಕಾನೂನಿನ ಪ್ರಕಾರ ಎಲ್ಲಾ ನಿಯಮಾವಳಿಗಳಂತೆ ತಮ್ಮ ಆರಾಧ್ಯ ದೇವ ಶಾಂತಿ ಕರುಣೆಯ ಪ್ರತೀಕ ದೇವದೂತ ಕ್ರಿಸ್ತನ ಪ್ರತಿಮೆ ಸ್ಥಾಪಿಸಲು ಅಡ್ಡಿ ಪಡಿಸದೇ ಭಾರತ ದೇಶ ಸರ್ವಧರ್ಮಗಳ ಶಾಂತಿಯ ತೋಟ ಗಾಂಧೀಜಿ ಅಂಬೇಡ್ಕರ್ ನೆಹರು ಪಟೇಲ್ ಸ್ವಾಮಿ ವಿವೇಕಾನಂದರಂಥ ಮಹಾನುಭಾವರ ಆಶಯಗಳಿಗೆ ಧಕ್ಕೆ ಬರದಂತೆ ಕಾಯುವ ಜವಾಬ್ದಾರಿ ನಮ್ಮೆಲರ ಮೇಲೆ ಇದೆ.


ಆದ್ದರಿಂದ ರಾಜ್ಯದ ಮುಖ್ಯಮಂತ್ರಿಗಳಿಗೆ ತಾವು ಸದ್ರಿ ಪ್ರತಿಮೆಯನ್ನು ಪ್ರತಿಷ್ಠಾಪಿಸುವಲ್ಲಿ ಸಂವಿಧಾನಾತ್ಮಕ ರಕ್ಷಣೆಯನ್ನು ನೀಡಬೇಕೆಂದು ಈಗಾಗಲೇ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರ ಮುಖಾಂತರ ಮನವಿಯನ್ನು ಸಲ್ಲಿಸಿರುತ್ತೇವೆ.

ಪತ್ರಿಕಾ ಗೋಷ್ಠಿಯಲ್ಲಿ ಕಥೋಲಿಕ್ ಸಭಾ ಮಂಗಳೂರು ಪ್ರದೇಶ (ರಿ) ಇದರ ಅಧ್ಯಕ್ಷರಾದ , ಪಾವ್ಲ್ ರೋಲ್ಫಿ ಡಿಕೋಸ್ತಾ, ನವೀನ್‌ ಆರ್. ಡಿಸೋಜಾ,ಮಾರ್ಸೆಲ್ ಮೊಂತೇರೊ , ಸುಶೀಲ್ ನೊರೊನ್ಹಾ, ಎ.ಸಿ. ವಿನಯಾ ರಾಜ್, ವಿಜಯ ಆಲ್ಫ್ರೆಡ್, ಲ್ಯಾನ್ಸಿಲೋಟ್ ಪಿಂಟೊ, ಐ.ಸಿ.ವೈ.ಮ್  ಅಧ್ಯಕ್ಷ  ಲಿಯೋನ್ ಉಪಸ್ಥಿತರಿದ್ದರು.