ಕಾರ್ಕಳ:- ಕೋಲಾರ ಜಿಲ್ಲೆ ಬಂಗಾರಪೇಟೆ ತಹಶೀಲ್ದಾರ್ ಆಗಿದ್ದ .ಬಿ.ಕೆ.ಚಂದ್ರಮೌಳೀಶ್ವರ್ ಅವರು ಕರ್ತವ್ಯದಲ್ಲಿರುವಾಗ ಹತ್ಯೆಗೊಳಗಾದದ್ದನ್ನು ಖಂಡಿಸಿ ತಾಲೂಕು ಸರಕಾರಿ ನೌಕರರ ಸಂಘದ ವತಿಯಿಂದ ಕಾರ್ಕಳ ತಹಶಿಲ್ದಾರ್ ಆಗಿರುವ  ಪುರಂದರ ಹೆಗ್ಡೆ ಇವರಿಗೆ ಕಾರ್ಕಳ ತಾಲೂಕು ಕಛೇರಿಯಲ್ಲಿ ಮನವಿ ಸಲ್ಲಿಸಲಾಯಿತು.

ಸರಕಾರಿ ನೌಕರರ ಸಂಘದ ಅಧ್ಯಕ್ಷರಾದ ಶ್ರಿ ಜೋಕಿಂ ಮೈಕೆಲ್ ಎಚ್ ಪಿಂಟೋ, ರಾಜ್ಯ ಪರಿಷತ್ ಸದಸ್ಯ  ಬಾಲಕೃಷ್ಣ ಎನ್ ಹಾಗೂ ಕೋಶಾಧಿಕಾರಿ. ಬಿವಿ ಶಿವರಾಮ ರಾವ್ ಅವರ ನೇತೃತ್ವದಲ್ಲಿ ತಾಲುಕಿನ ಎಲ್ಲಾ ಇಲಾಖೆಗಳ ಪ್ರತಿನಿಧಿಗಳು ಹಾಗೂ ಸದಸ್ಯರು ಈ ಸಮಯದಲ್ಲಿ ಹಾಜರಿದ್ದರು.

ಕರ್ತವ್ಯನಿರತ ತಹಶೀಲ್ದಾರ್ ಅವರ ಹತ್ಯೆಯನ್ನು ಖಂಡಿಸಿ ಸಲ್ಲಿಸಿರುವ ಪತ್ರವನ್ನು ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ತಲುಪಿಸುವ ಭರವಸೆಯನ್ನು ಮಾನ್ಯ ತಹಶಿಲ್ದಾರ್  ಪುರಂದರ ಹೆಗ್ಡೆಯವರು ನೀಡಿದರು.

ಪ್ರಾರಂಭದಲ್ಲಿ ರಾಜಾರಾಮ್‌ ಸೇವೇ೯ಗಾರ್‌ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದ ಈ ಕಾಯ೯ಕ್ರಮದಲ್ಲಿ ಬಿ.ವಿ.ಶಿವರಾಮ್‌ ರಾವ್‌ ಧನ್ಯವಾದ ನೀಡಿದರು.