ಸಾಂದರ್ಭಿಕ ಚಿತ್ರ

ಮಂಗಳೂರು (ಜು 11): ದ.ಕ ಜಿಲ್ಲೆಯಲ್ಲಿ ದಿನದಿಂದ ದಿನಕ್ಕೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿದ್ದು, ಕೊರೊನಾ ಭೀತಿ ಹಿನ್ನೆಲೆ ಬ್ಯೂಟಿ ಪಾರ್ಲರ್‌‌ಗಳ ಸ್ವಯಂ ಪ್ರೇರಿತ ಬಂದ್‌‌ಗೆ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ನಿರ್ಧಾರ ಕೈಗೊಂಡಿದೆ.

ಗ್ರಾಹಕರು ಹಾಗೂ ಸೌಂದರ್ಯ ತಜ್ಞರ ಆರೋಗ್ಯದ ಹಿತದೃಷ್ಟಿಯಿಂದ ದ.ಕ ಜಿಲ್ಲೆಯಾದ್ಯಂತ ಬ್ಯೂಟಿ ಪಾರ್ಲರ್ ಗಳ ಸ್ವಯಂ ಪ್ರೇರಿತ ಬಂದ್‌‌ಗೆ ನಿರ್ಧಾರ ಮಾಡಿದ್ದು, ಮುಂದಿನ ಸೂಚನೆಯವರೆಗೆ ಸ್ವಯಂ ಪ್ರೇರಿತ ಬಂದ್‌‌ ಮಾಡಲು ತೀರ್ಮಾನಿಸಿದ್ದಾರೆ.

ಕೊರೊನಾ ಭೀತಿ ಹಿನ್ನೆಲೆ ಜಿಲ್ಲಾಯಾದ್ಯಂತ ಬ್ಯೂಟಿ ಪಾರ್ಲರ್‌‌‌‌‌ಗಳನ್ನು ಸ್ವಯಂ ಪ್ರೇರಿತ ಬಂದ್‌ ಮಾಡಲು ತೀರ್ಮಾನ ಮಾಡಿದ್ದೇವೆ ಎಂಬುದಾಗಿ ದ.ಕ ಜಿಲ್ಲಾ ಬ್ಯೂಟಿ ಪಾರ್ಲರ್ ಅಸೋಸಿಯೇಷನ್ ಅಧ್ಯಕ್ಷೆ ಬಬಿತಾ ಶೆಟ್ಟಿ ಮಾಹಿತಿ ನೀಡಿದ್ದಾರೆ.

ಲಾಕ್‌ಡೌನ್‌ ಸಂದರ್ಭ ಸರ್ಕಾರವೇ ಸೆಲೂನ್‌ ಹಾಗೂ ಬ್ಯೂಟಿಪಾರ್ಲರ್‌‌ಗಳನ್ನು ಬಂದ್‌ ಮಾಡುವಂತೆ ಸೂಚಿಸಿತ್ತು.

ಶುಕ್ರವಾರದಂದು ದ.ಕ. ಜಿಲ್ಲೆಯಲ್ಲಿ 139 ಮಂದಿಯಲ್ಲಿ ಸೋಂಕು ಇರುವುದು ದೃಢಪಟ್ಟಿತ್ತು. ಒಂದೇ ದಿನ 8 ಮಂದಿ ಮೃತಪಟ್ಟಿದ್ದು, ಮೃತರ ಸಂಖ್ಯೆ 38ಕ್ಕೆ ಏರಿಕೆಯಾಗಿತ್ತು.