ಎದುರಿಸುವ ಮುನ್ನ
ವಿದ್ಯಾರ್ಥಿಗಳು ಪರೀಕ್ಷೆ
ಎದುರಿಸಲಿ ಸರ್ಕಾರ
ಕೊರೋನಾದ ಅಗ್ನಿಪರೀಕ್ಷೆ
ಮನುಕುಲವೇ ಮಿಡಿಯುತಿದೆ
ಉಳಿಸಿಕೊಳ್ಳಲು ತಮ್ಮಾ ಜೀವಾ
2020ರ ವರುಷ ಮುಂದೆ ಇನ್ನೆಷ್ಟು
ಭೀಕರವಾಗಿದೆಯೋ ಹೇ ದೇವಾ!!
ಮಾಲಿನ್ಯದಿಂ ಮುಕ್ತಿ ಪಡೆದು
ಸಂತೃಪ್ತಿಯಾಗಿರುವ ನಿಸರ್ಗ ಇಲ್ಲಿ
ಮಾನವನ ದಾರುಣತೆಗೆ ಕ್ರೋದದಿ
ಕುಣಿಯುತ್ತಿರುವ ನಿಸರ್ಗ ಅಲ್ಲಿ
ಲಾಕ್ ಡೌನ್ ನಿಂದ ನಿಂತಿವೆ
ಎಲ್ಲಾ ರಂಗದ ಚಟುವಟಿಕೆ ಇಲ್ಲಿ
ಆದರೂ ನಿಲ್ಲದಾಯ್ತು ಊಟದ
ಪರದಾಟ ಬಡವರ ಬಾಳಲ್ಲಿ…
- ಮಾಗಿದ ಮನಸ್ಸು