“ಬಾಗಿಲು ತೆಗೆಯುತ್ತಿಯೋ ಇಲ್ಲವೋ” ಸಿಸಿಲ ಬಾಯಿಯ ಆರ್ಭಟ ಮೈಲು ದೂರದ ಗುರಿಕಾರನ ಮನೆಗೂ ಕೇಳಿಸಿತು.ತಟ್ಟನ್ನೆದ್ದ ಗುರಿಕಾರ ಯಾವುದೋತೀರ್ಮಾನಕ್ಕೆ ಬಂದಂತೆ ಅವಳ ಮನೆಯತ್ತಾ ನಡೆಯತೊಡಗಿದ. ಹೇಗಿತ್ತು ಆ ಕುಟುಂಬ! ಹೇಗಾಯ್ತು? ಪ್ರಾರ್ಥನೆ, ಜಪ, ಬೈಬಲ್ ವಾಚನ ಎಲ್ಲವೂ ನಡೆಯುತ್ತಿದ್ದುವು ಆ ಕುಟುಂಬದಲ್ಲಿ ಆದರೂ ಹೀಗೇಕೆ?ಪ್ರಶ್ನೆಗೆ ಉತ್ತರ ದೊರಕಿತ್ತು. ಗುರಿಕಾರನ ನಡಿಗೆಯಲ್ಲಿ ಅದು ವ್ಯಕ್ತವಾಗುತ್ತಿತ್ತು.

ಸಿಸಿಲ ಬಾಯಿಯ ಏಕಮಾತ್ರ ಪುತ್ತಜೆರಾಲ್ಡ್, ಅವನ ಮದುವೆ ಎರಡು ವರ್ಷದ ಹಿಂದೆಯಷ್ಟೇ ನಡೆದಿತ್ತು.ಆ ಮದುವೆ ಸಿಸಿಲ ಬಾಯಿಗೆ ಇಷ್ಟವಿರಲಿಲ್ಲ. ಆ ಮನೆಯ ನೆಮ್ಮದಿ ಅಂದೇದಹನವಾಗಿತ್ತು. ಮನೆ ಆಶಾಂತಿಯ ಬೀಡಾಗಿತ್ತು.ಅದು ಮೆನೆಯ ಯಜಮಾನನನ್ನು ಬಲಿ ತೆಗೆದುಕೊಂಡಿತ್ತು. ತನ್ನ ಪತಿಯ ಸಾವಿಗೆ ಸೊಸೆಯ ಕಾಲ್ಗುಣವೇ ಕಾರಣವೆಂದು ಕಂಡ ಕಂಡವರಲ್ಲಿ ಹೇಳತೊಡಗಿದ್ದ ಸಿಸಿಲ ಬಾಯಿ ಸೊಸೆಯ ಪಾಲಿಗೆ ರಾಕ್ಷಸಿಯಾಗ ತೊಡಗಿದಳು. ಸೊಸೆ ಎಲ್ಲವನ್ನು ಸಹಿಸಿಕೊಂಡಿದ್ದಳು. ತನ್ನ ಅತ್ತೆಯ ಒಳ್ಳೆಯ ಗುಣವನ್ನು ನೀಡೆಂದು ಅವಳು ಸದಾದೇವರಲ್ಲಿ ಪ್ರಾರ್ಥಿಸುತ್ತಿದ್ದಳು. ಜೆರಾಲ್ಡ್‍ ಎಲ್ಲವನ್ನು ಗಮನಿಸುತ್ತಿದ್ದ. ತುಂಬು ಗರ್ಭಿಣಿಯಾಗಿರುವ ತನ್ನ ಪತ್ನಿ ಪಡುತ್ತಿರುವ ಕಷ್ಟವನ್ನು ಅವನಿಂದ ನೋಡಲಿಕ್ಕಾಗಲಿಲ್ಲ. ಬೇರೆ ಮನೆ ಮಾಡುವ ಯೋಚನೆಯಲ್ಲಿದ್ದ. ಗುರಿಕಾರನಲ್ಲೂ ಹೇಳಿದ್ದ. ಕುಟುಂಬ ಒಡೆಯುವುದು ಗುರಿಕಾರನಿಗೂ ಇಷ್ಟವಿರಲಿಲ್ಲ. ಮಡದಿಯನ್ನು ಹೆರಿಗೆಗೆಂದು ತವರಿಗೆ ಕಳುಹಿಸು. ಅವಳು ತಾಯಾಗಿ ಹಿಂದಿರುಗುವಷ್ಟರಲ್ಲಿ ಸಿಸಿಲಬಾಯಿಯಲ್ಲಿ ಬದಲಾವಣೆ ತರುವುದಾಗಿ ಗುರಿಕಾರ ಅಸ್ವಾಸನೆ ನೀಡಿದ್ದ. ಸಿಸಿಲ ಬಾಯಿ ಮನಃಪರಿವರ್ತನೆ ಗೊಳ್ಳುವಳೇ...ಇಲ್ಲದಿದ್ದರೆ... ಏನು ಮಾಡುವುದು... ಎಂಬ ಗೊಂದಲದಲ್ಲಿದ್ದ ಗುರಿಕಾರ ಇಂದು ಒಂದು ಸ್ಪಷ್ಟತೀರ್ಮಾಣಕ್ಕೆ ಬಂದಿದ್ದ.

ಸಿಸಿಲ ಬಾಯಿಯ ಮನೆ ತಲುಪಿದಾಗ ಗೇಟಿನ ಮುಂದೆ ಜನ ಸೇರಿದ್ದರು.ಯಾರಿಗೂ ಒಳಗೆ ಹೋಗಲು ದೈರ್ಯವಿರಲಿಲ್ಲ. ಗುರಿಕಾರ ಗೇಟನ್ನು ತೆಗೆದು ಒಳ ನಡೆದ.ಸಿಸಿಲ ಬಾಯಿ ರೌದ್ರವತಾರ ತಾಳಿ ಅಂಗಳದಲ್ಲಿ ನಿಂತಿದ್ದಳು. ಬಾಗಿಲು ಹಾಕಿತ್ತು. ಗುರಿಕಾರ ಹತ್ತಿರ ಬರಲು ಸಿಸಿಲಬಾಯಿ ಎನೋ ಬರೆದಿದ್ದ ಕಾಗದದ ಚೂರೊಂದನನ್ನು ಗುರಿಕಾರನಿಗೆ ನೀಡಿದಳು.ಗುರಿಕಾರ ಅದನ್ನು ಓದಿದ."ನನ್ನನ್ನು ಮತ್ತು ನಿನ್ನ ಸೊಸೆಯನ್ನು ಪ್ರೀತಿಯಿಂದ ಒಪ್ಪಿಕೊಳ್ಳುವ ತನಕ ನಾನು ಬಾಗಿಲು ತೆಗೆಯುವುದಿಲ್ಲ."ಎಂದು ಬರೆದಿತ್ತು.

ಗುರಿಕಾರ ಸಿಸಿಲಬಾಯಿಗೆ ಹೇಳಿದ."ಮಗ ಮತ್ತು ಸೊಸೆ ತಪ್ಪು ಮಾಡಿದ್ದಾರೆ ನಿನಗೆ ಅನಿಸಿದರೆ ಕ್ಷಮಿಸಿ ಬಿಡು.ಇಲ್ಲದಿದ್ದರೆ ದೇವರೂ ಕೂಡಾ ನಿನ್ನನ್ನು ಕ್ಷಮಿಸಲಾರ"

ನಂತರ ಗುರಿಕಾರ ಜೆರಾಲ್ಡ್ ನನ್ನು ಕರೆದ. ಬಾಗಿಲು ತೆರೆಯಿತು. ಜೆರಾಲ್ಡ್ ಹೊರ ಬಂದ "ನಿನ್ನಿಷ್ಟದಂತೆ ಬೇರೆ ಮನೆ ಮಾಡು" ಎಂದವನಿಗೆ ಅದೇಶವನ್ನಿತ್ತು ಗುರಿಕಾರ ತನ್ನ ಮನೆಯತ್ತ ನಡೆದ..

ದಿನವೊಂದು ಕಳೆದಿತ್ತು. ಗುರಿಕಾರ ಮನೆಯಲ್ಲಿ ಚಾ ಕುಡಿಯುತ್ತಿದ್ದ. ಬಾಗಿಲು ತಟ್ಟಿದ ಶಬ್ದ. ಗುರಿಕಾರಬಾಗಿಲು ತೆಗೆದ. ಹೊರಗಡೆ ಸಿಸಿಲ ಬಾಯಿ8 ಮೊಮ್ಮಗುವನ್ನು ಎತ್ತಿಕೊಂಡು ನಿಂತಿದ್ದಾಳೆ. ಜೊತೆಗೆ ನಿಂತಿದ್ದಾರೆ. ಮಗ ಹಾಗೂ ಸೊಸೆ. " ನಾನು ಎಲ್ಲರನ್ನು ಕ್ಷಮಿಸಿದೆ. ದೇವರು ನನ್ನನ್ನು ಕ್ಷಮಿಸುತ್ತಾನೆಯೇ" ಸಿಸಿಲ ಬಾಯಿಯ ಮಾತಿನಲ್ಲಿ ಹರುಷವಿತ್ತು. ಗುರಿಕಾರ ಮನದಲ್ಲಿಯೋ ನುಡಿದ "ದೇವರಿಗೆ ಮಹಿಮೆಯಾಲಿ"


ಮಾರ್ಸೆಲ್‍ಡಿಸೋಜ

ಬೊಂದೆಲ್, ಮಂಗಳೂರು