ಗುಂಡಿಬೈಲ: ಇಂದು ಭಾರತ ದೇಶವು ಮದುಮೇಹ ರೋಗದಲ್ಲಿ ವಿಶ್ವದಲ್ಲಿಯೇ ಮಂಚೂಣಿಯ ಸ್ಥಾನದ್ಲಲಿದೆ ಹಾಗು ಈ ಕಾಯಿಲೆಯು ಸಾಮಾನ್ಯವೆನ್ನುವಂತೆ ಎಲ್ಲ ಜನರಲ್ಲಿಯೂ ಅಕಾಲವಾಗಿ ಕಾಣಲಾರಂಭಿಸಿದೆ. ಭಾರತೀಯರ ಆಹಾರ ಪದ್ದತಿಯೇ ಇದಕ್ಕೆ ನೇರವಾಗಿ ಕಾರಣವಾಗಿದೆ, ವಯಸ್ಸಾದಂತೆ ಹೊಂದಾಣಿಕೆ ಮಾಡಿದ  ಆಹಾರ ಪದ್ದತಿಯ  ಜೀವನಶೈಲಿಯನ್ನು ಅಳವಡಿಸಿ ಕೊಂಡಾಗ ಆರೋಗ್ಯಕರ ಬದುಕನ್ನು ಕಂಡುಕೊಳ್ಳಬಹುದು ಮತ್ತು ಆಸ್ಪತ್ರೆಗಳಿಂದ ದೂರವಿರಬಹುದು ಎಂದು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಂಯೋಜಕ ಉಪನ್ಯಾಸಕರಾದ ಡಾ. ಶಿವಾನಂದ ನಾಯಕ್ ಸಲಹೆ ನೀಡಿದರು. ಅವರು ಉಡುಪಿ ದೊಡ್ಡಣಗುಡ್ಡೆ ಜನತಾ ವ್ಯಾಯಾಮ ಶಾಲೆಯ ಸಭಾಂಗಣದಲ್ಲಿ ನಮೋ ಫ್ರೆಂಡ್ಸ್ ದೊಡ್ಡಣಗುಡ್ಡೆ  ಮತ್ತು ಜಿಲ್ಲಾ ಕುಟುಂಬ ಕಲ್ಯಾಣ ಮತ್ತು ಅರೋಗ್ಯ ಇಲಾಖೆ ಇವರ ಜಂಟಿ ಆಶ್ರಯದಲ್ಲಿ ಆಯೋಜಿಸಿದ ಉಚಿತ ಜನೌಷಧಿ ಅರೋಗ್ಯ ತಪಾಸಣಾ ಹಾಗು ಔಷಧಿಗಳ ವಿತರಣಾ ಶಿಬಿರದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.

ಮಣಿಪಾಲ ಪ್ರಾಥಮಿಕ ಕೇಂದ್ರದ ಅರೋಗ್ಯ ಅಧಿಕಾರಿ ಡಾ. ವಿದ್ಯಾ ರವರು ಮಾತನಾಡಿ ನಗರ ಹಾಗು ಗ್ರಾಮೀಣ ಪ್ರದೇಶಗಳ ಪ್ರಾಥಮಿಕ ಅರೋಗ್ಯ ಕೇಂದ್ರಗಳ ಮೂಲಕ ಎಲ್ಲ ಪ್ರದೇಶಗಳಲ್ಲಿ ಉಚಿತ ಅರೋಗ್ಯ ತಪಾಸಣಾ ಶಿಬಿರಗಳನ್ನು ಆಯೋಜಿಸಲಾಗುತ್ತದೆ, ಸಂದ್ಯಾ ಸುರಕ್ಷಾ, ವೃದ್ಯಾವ್ಯ ವೇತನದಂತಹ  ಸರಕಾರಿ ಸೌಲಭ್ಯತೆಗಳನ್ನು ಫಲಾನುಭವಿಗಳಿಗೆ ದೊರಕಿಸಿ ಕೊಡಲಾಗುತ್ತದೆ.ವಿಶೇಷವೆಂದರೆ ಇತ್ತೀಚಿಗೆ ಅಯುಷ್ಮಾನ್ ಅರೋಗ್ಯ ಕಾರ್ಡ್ ನ್ನು ಕೂಡ ಪ್ರಾಥಮಿಕ ಅರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ನೋಂದಾಯಿಸಲಾಗುತ್ತದೆ ಎಂದು ಹೇಳಿದರು.  

ಜನತಾ ವ್ಯಾಯಾಮ ಶಾಲೆಯ ಅಧ್ಯಕ್ಷ ರಾಮದಾಸ್ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿದರು. ನಮೋ ಫ್ರೆಂಡ್ಸ್ ಅಧ್ಯಕ್ಷ  ಬಾಲಕೃಷ್ಣ ಶೆಟ್ಟಿ ಕಾರ್ಯಕ್ರಮದ ಅಧ್ಯಕ್ಷತೆ  ವಹಿಸಿದ್ದರು. ಗೌರವಾಧ್ಯಕ್ಷ  ಪ್ರಭಾಕರ್ ಪೂಜಾರಿ, ಪ್ರಭಾಕರ್ ಶೆಣೈ, ವಿನಯ ಕುಮಾರ್ ಪೂಜಾರಿ, ಎಸ್ ಎನ್ ಶ್ರೀನಿವಾಸ್, ಅನಿಲ್ ಕುಮಾರ್ ಅಡೂರ್, ಗಣೇಶ್ ನಾಯಕ್, ಸುನಿಲ್, ವಿಜಯ ಭಟ್, ನವೀನ್ ಕೋಟ್ಯಾನ್, ಉಮೇಶ್ ಪೂಜಾರಿ, ಕೃಷ್ಣಾನಂದ, ರೋಷನ್ ಶೆಟ್ಟಿ, ಸಂತೋಷ್ ಪಾಲನ್, ಪ್ರಭಾಕರ್ ಅಂಚನ್, ಜಯ ಪೂಜಾರಿ, ಎಂ ದಿವಾಕರ್ ಶೆಟ್ಟಿ, ಮಹಿಳಾ ಮಂಡಲದ ಸದಸ್ಯೆ ಸುಲೇಖಾ, ನಗರಸಭಾ ಸದಸ್ಯ ಮಂಜುನಾಥ್ ಮಣಿಪಾಲ  ಉಪಸ್ಥಿತರಿದ್ದರು. ರತನ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು.