ಮಂಗಳೂರು: ಈಗಾಗಲೇ ಯಶಸ್ವಿಯಾಗಿ ಎರಡು ಸೀಸನ್ಗಳನ್ನು ಪೂರೈಸಿ 3ನೇ ಸೀಸನ್ಗೆ ಅದ್ಧೂರಿಯಾಗಿ ಪಾದಾರ್ಪಣೆ ಮಾಡಿರುವ ವಿ4 ನ್ಯೂಸ್ ಪ್ರಸ್ತುತಿಯ ಸನ್ಪ್ರೀಮಿಯಮ್ ರಿಫೈನ್ಡ್ ಸನ್ಫ್ಲವರ್ ಆಯಿಲ್ ಪ್ರೆಸೆಂಟ್ಸ್ ರೋಹನ್ ಕಾರ್ಪೊರೇಷನ್ ಕಾಮಿಡಿ ಪ್ರೀಮಿಯರ್ ಲೀಗ್ ಸೀಸನ್ 3ನ ಪ್ರಥಮ ಪ್ರದರ್ಶನ ಪಂದ್ಯ ಮಂಗಳೂರಿನ ಪುರಭವನದಲ್ಲಿ ನಡೆಯಿತು. ಕಿಕ್ಕಿರಿದು ತುಂಬಿದ್ದ ಪ್ರೇಕ್ಷಕರ ಕರತಾಡನದೊಂದಿಗೆ ತಂಡಗಳ ಕಾಮಿಡಿ ಪ್ರದರ್ಶನ ಮನರಂಜಿಸಿತು.

ಕಾರ್ಯಕ್ರಮದಲ್ಲಿ ಪ್ರಥಮ ಪ್ರದರ್ಶನಾ ಪಂದ್ಯವು ಕಾರ್ಡೆಕೋರ್ ಹರಿಣಿ ಮತ್ತು ಎಸ್.ಎಲ್. ಶೇಟ್ ಡೈಮಂಡ್ ಹೌಸ್ ಗೋಲ್ಡನ್ ಪೋಪಿ ತಂಡಗಳ ನಡುವೆ ನಡೆಯಿತು. ಎರಡನೇ ಪಂದ್ಯದಲ್ಲಿ ಟೈಮೆಕ್ಸ್ ತುಳುವ ಸಿರಿ ಮತ್ತು ಮೋಡರ್ನ್ ಕಿಚನ್ಸ್ ಫ್ರೆಂಡ್ಸ್ ತಂಡಗಳ ನಡುವೆ ಬಿರುಸಿನ ಹಣಾಹಣಿ ನಡೆಯಿತು. ಬಳಿಕ ಮುನೀಶ್ ಕುಡ್ಲ ಕುಸಾಲ್ ಮತ್ತು ಎವರ್ಗ್ರೀನ್ ಸಾಕ್ಷಿ ತಂಡಗಳ ನಡುವೆ ಹೈವೋಲ್ಟೇಜ್ ಮ್ಯಾಚ್ ನಡೆಯಿತು. ಕಲಾವಿದರ ಭರ್ಜರಿ ಹಾಸ್ಯದ ಹೊನಲು ಪ್ರೇಕ್ಷಕರನ್ನು ಹೊಟ್ಟೆ ಹುಣ್ಣಾಗಿಸುವಂತೆ ನಗಿಸಿತು.

ಸಿಪಿಎಲ್ ಸೀಸನ್ 3ನ ಮುಖ್ಯ ತೀರ್ಪುಗಾರರಾದ ಮೈಮ್ ರಾಮ್ದಾಸ್, ಶಶಿರಾಜ್ ರಾವ್ ಕಾವೂರು ಮತ್ತು ನಟಿ ಶಿಲ್ಪಾ ಶೆಟ್ಟಿ ಅವರ ಜೊತೆಗೆ ವಿಶೇಷ ಅತಿಥಿ ತೀರ್ಪುಗಾರರಾಗಿ 1970-90ರ ದಶಕದಲ್ಲಿ ತುಳು ರಂಗಭೂಮಿಯಲ್ಲಿ ಮಿಂಚಿದ್ದ ಹಿರಿಯ ನಟರಾದ ಜೇಮ್ಸ್ ಜಯಕರ್ ಮತ್ತು ಜೀವನ್ ಅವರು ಭಾಗವಹಿಸಿದ್ದರು. ಯುವ ಹಾಸ್ಯಪ್ರತಿಭೆಗಳನ್ನು ಪ್ರೋತ್ಸಾಹಿಸಿದ್ರು. ಪ್ರದರ್ಶನ ನೀಡಿದ ತಂಡಗಳಿಗೆ 7000 ರೂ. ಗೌರವಧನವನ್ನೊಳಗೊಂಡ ಸನ್ಪ್ರೀಮಿಯಮ್ ಸೀಸನ್ ಅವಾರ್ಡ್, ಕೆಎಂಎಫ್ ನಂದಿನಿ ವತಿಯಿಂದ ಗಿಫ್ಟ್ ಹ್ಯಾಂಪರ್ ಮತ್ತು ಮಾಯಾ ಹ್ಯಾಪಿನೆಸ್ ಚಾಕೊಲೇಟಿ ಬಾರ್ ಚಾಕೊಲೇಟ್ಗಳನ್ನು ವಿತರಿಸಲಾಯಿತು. ಇದೇ ವೇಳೆ ಡಿಸೆಂಬರ್ 6ರಂದು ತೆರೆಕಾಣಲಿರುವ ಆಟಿಡೊಂಜಿ ದಿನ ತುಳು ಚಲನಚಿತ್ರ ತಂಡವು ಭಾಗವಹಿಸಿ ಚಿತ್ರದ ಬಗ್ಗೆ ಅನಿಸಿಕೆಗಳನ್ನು ವ್ಯಕ್ತಪಡಿಸಿತು.

ಇದೇ ಸಂದರ್ಭದಲ್ಲಿ ವಿ4 ನ್ಯೂಸ್ ವತಿಯಿಂದ ನೀಡಲಾಗುತ್ತಿರುವ 'ಮಾಸ್ಟರ್ ಭವಾನಿ ಶಂಕರ್ ಕುಂದರ್ ಸ್ಮರಣಾರ್ಥ ಸಾಧನಾ ಪ್ರಶಸ್ತಿ'ಯನ್ನು 1970-90ರ ದಶಕದಲ್ಲಿ ತುಳು ರಂಗಭೂಮಿಯಲ್ಲಿ ಸೇವೆ ಸಲ್ಲಿಸಿದ ಹಿರಿಯ ರಂಗಕಲಾವಿದರಾದ ಜೇಮ್ಸ್ ದಯಕರ್ ಮತ್ತು ಬಿ.ಎಸ್ ಜೀವನ್ ಅವರಿಗೆ ಪ್ರದಾನ ಮಾಡಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಸನ್ ಪ್ರೀಮಿಯಮ್ ರಿಫೈನ್ಡ್ ಸನ್ಫ್ಲವರ್ ಆಯಿಲ್ನ ಏರಿಯಾ ಮ್ಯಾನೇಜರ್ ದೀಪಕ್, ರೋಹನ್ ಕಾರ್ಪೊರೇಷನ್ನ ಸೇಲ್ಸ್ ಮ್ಯಾನೇಜರ್ ಪದ್ಮನಾಭ ಶೆಟ್ಟಿ, ಲ್ಯಾಂಡ್ ಟ್ರೇಡ್ಸ್ ಬಿಲ್ಡರ್ಸ್ ಆಂಡ್ ಡೆವಲಪರ್ಸ್ನ ಸೇಲ್ಸ್ ಟೀಂನ ಪ್ರಮುಖರಾದ ಮೋಹನ್ದಾಸ್ ಸಾಲ್ಯಾನ್, ಕಾರ್ ಡೆಕೋರ್ನ ಮಾಲಕ ಮುಕೇಶ್ ಹೆಗ್ಡೆ, ಬ್ಲ್ಯಾಕ್ ಆಂಡ್ ಬ್ಲ್ಯಾಕ್ ಫ್ಯಾಷನ್ ಅನಾಲಿಸ್ಟ್ನ ಆಡಳಿತ ನಿರ್ದೇಶಕಿ ದೀಪಾ, ತ್ರಿಭುವನ್ ಹೀರೋ ಶೋರೂಂನ ಆಡಳಿತ ನಿರ್ದೇಶಕಿ ನಿಧಿ ಚೌಟರ್, ದ.ಕ. ಸಹಕಾರಿ ಹಾಲು ಉತ್ಪಾದಕರ ಒಕ್ಕೂಟದ ಮಾರುಕಟ್ಟೆ ವಿಭಾಗದ ವ್ಯವಸ್ಥಾಪಕ ಜಯದೇವಪ್ಪ ಕೆ., ನಿಟ್ಟೆ ಪಿಯು ಕಾಲೇಜಿನ ಪ್ರಾಂಶುಪಾಲರಾದ ನವೀನ್ ಶೆಟ್ಟಿ, ಸಂಶುದ್ಧೀನ್ ಕುದ್ರೋಳಿ, ಸಂತ ಅಲೋಷಿಯಸ್ ಹೈಸ್ಕೂಲ್ನ ಚಿತ್ರಕಲಾ ಶಿಕ್ಷಕರಾದ ಜಾನ್ ಚಂದ್ರನ್, ಎವರ್ಗ್ರೀನ್ ಗಾರ್ಮೆಂಟ್ಸ್ ಆಂಡ್ ಎಕ್ಸ್ಪೋಟ್ರ್ಸ್ನ ಆಡಳಿತ ನಿರ್ದೇಶಕ ಮೊಹಮ್ಮದ್ ಸುಹೇಮ್ ಖಾಝಿ, ಕಾಸ್ಟ್ಯೂಮ್ ಕಾಟೇಜ್ನ ಮಾಲಕರಾದ ಸುಜಾತಾ ಕೋಟ್ಯಾನ್ ಮತ್ತು ಗಿರಿರಾಜ್ ಕೋಟ್ಯಾನ್, ಮುನೀಶ್ ಕುಡ್ಲ ಕುಸಲ್ ತಂಡ ದ ಮಾಲಕ, ಆರೋಹಣಂ ಹಾಸ್ಪಿಟಾಲಿಟೀಸ್ನ ಆಡಳಿತ ನಿರ್ದೇಶಕ ಮುನೀಶ್ ಸುವರ್ಣ, ಇಂಡಸ್ಕೇರ್ ಸೇಫ್ಟಿ ಇಕ್ವಿಪ್ಮೆಂಟ್ಸ್ ಮಾಲಕರಾದ ಶ್ರೀನಿವಾಸ್, ಎಂಪಿ ಸಿಲ್ಕ್ಸ್ ಮಾಲಕ ದಿನೇಶ್, ಹಿರಿಯರಾದ ರಾಮಚಂದ್ರ ಬೈಕಂಪಾಡಿ, ಬ್ರೈಟ್ ಹೆಚ್,ಆರ್, ಸೊಲ್ಯೂಷನ್ಸ್ ಮಾಲಕ ಮೋಹನ್ ರಾಜ್, ವಿನಾಯಕ ಮಾರ್ಕೆಟಿಂಗ್ನ ಮುಖ್ಯಸ್ಥ ಉಮಾನಾಥ್, ವೇದಂ ಆರೋಗ್ಯ ಆಯುರ್ವೇದ ಆಸ್ಪತ್ರೆಯ ಚೀಫ್ ಕನ್ಸಲ್ಟೆಂಟ್ ಡಾ. ಸಚಿನ್ ನಡ್ಕ, ವಿ4 ನ್ಯೂಸ್ನ ಆಡಳಿತ ನಿರ್ದೇಶಕ ಲಕ್ಷ್ಮಣ್ ಕುಂದರ್, ಉಪಾಧ್ಯಕ್ಷೆ ರೋಸ್ಲಿನ್ ಡಿಲೀಮಾ, ಕಾನೂನು ಸಲಹೆಗಾರ ಜೀವನ್ ಪ್ರಕಾಶ್, ಮಾರುಕಟ್ಟೆ ವಿಭಾಗದ ಮುಖ್ಯಸ್ಥರಾದ ವಿನೀಶ್, ಮಣಿಕ್ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.