ಬಳ್ಕುಂಜೆ:- ಚೌತಿ ಹಾಗೂ ಹೊಸ ತೆನೆ ಹಬ್ಬದ ಪ್ರಯುಕ್ತ ಮಾರುಕಟ್ಟೆಯಲ್ಲಿ ಬೇಡಿಕೆಯಲ್ಲಿರುವ ಕಬ್ಬಿನ ಬೆಳೆಗೆ ಈ ವರ್ಷ ಕೋವಿಡ್ ಕಾರಣದಿಂದಾಗಿ ಹಾಗೂ ಸರ್ಕಾರದ ನಿರ್ಭಂಧನೆಗಳಿಂದ  ಕಬ್ಬಿನ ಬೆಳೆಗಾರರು  ಬಹಳಷ್ಟು ನಷ್ಟವನ್ನು ಅನುಭವಿಸಿದ್ದಾರೆ. 

  ಈ ಕುರಿತು ಪಿಂಗಾರ ಮಾಧ್ಯಮಗಾರರೊಂದಿಗೆ ಮಾತನಾಡಿದ ಬಳ್ಕುಂಜೆ ಗ್ರಾಮದ ವಲೆರಿಯನ್ ಮಿನೆಜಸ್, "ತಮ್ಮಲ್ಲಿ ಸುಮಾರು 8,000 ಕಬ್ಬುಗಳನ್ನು ಬೆಳೆದಿದ್ದು ಒಂದು ಕಬ್ಬಿಗೆ ರೂ.22 ರಂತೆ ಪ್ರತೀ ವರ್ಷ ಮಾರಾಟ ಮಾಡುತ್ತಿದ್ದರು, ಆದರೆ ಈ ವರ್ಷ ಕೋವಿಡ್ ಸಮಸ್ಯೆಯಿಂದಾಗಿ  ಪ್ರತೀ ಕಬ್ಬಿಗೆ ರೂ.15 ರಂತೆ ಮಾರಾಟ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ ತೋಟಗಾರಿಕೆ ಇಲಾಖೆಯವರು ತಮ್ಮ ಅಭ್ಯಂತರವಿಲ್ಲ, ಸಹಕರಿಸುತ್ತೇವೆ ಎಂದು ತಿಳಿಸಿ ಯಾವುದೇ ರೀತಿಯಲ್ಲಿ ಸ್ಪಂದನೆ ನೀಡುತ್ತಿಲ್ಲ. ಈ ರೀತಿಯ ಕಬ್ಬಿನ ತೋಟಗಾರಿಕೆಗೆ ಯಾವುದೇ ರೀತಿಯ ಪರಿಹಾರವು ಇಲ್ಲ, ದಕ್ಷಿಣ ಕನ್ನಡ ಕೃಷಿ ಇಲಾಖೆಗೆ ಮೊರೆಹೋದರು ಯಾವುದೇ ರೀತಿಯಲ್ಲಿ ಸ್ಪoದಿಸಿಲ್ಲ. ಹಾಗಾಗಿ ಈ ವರುಷ ಸುಮಾರು ರೂ.10 ರಂತೆ ನಷ್ಟವನ್ನು ಅನುಭವಿಸಿದ್ದಾರೆ" ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.

ಬಳಿಕ ಮಾತನಾಡಿದ ಬಳ್ಕುಂಜೆ ಗ್ರಾಮದ ರೈತ ಮಹಿಳೆ ಸಂತಾನ ಡಿಸೋಜರವರು "ನಾವು ವರ್ಷಕ್ಕೆ 13,000 ಕಬ್ಬಿನ ಬೆಳೆಯನ್ನು ಬೆಳೆಸುತ್ತಿದ್ದು, ಈ ವರ್ಷ ಕೋವಿಡ್ ನಿಂದಾಗಿ ವ್ಯಾಪಾರಸ್ಥರು ಹೆಚ್ಚಾಗಿ ಕಬ್ಬನ್ನು ಖರೀದಿ ಮಾಡಲು ಬರಲಿಲ್ಲ. ಇಷ್ಟು ವರ್ಷದಿಂದ  ಖರೀದಿ ಮಾಡುವವರು ಕೇವಲ ಅರ್ಧದಷ್ಟು ಕಬ್ಬನ್ನು ರೂ.15 ರಂತೆ ಖರೀದಿ ಮಾಡುತ್ತಿದ್ದಾರೆ. ಹೀಗಾಗಿ ಬಹಳ ನಷ್ಟವನ್ನು ಅನುಭವಿಸುತ್ತಿದ್ದು, ಗ್ರಾಮ ಪಂಚಾಯತ್ ಮೊರೆಹೋದಾಗ ಯಾವುದೇ ರೀತಿಯಲ್ಲಿ ಸ್ಪಂದನೆಯನ್ನು ನೀಡಿಲ್ಲ. ಅಷ್ಟೇ ಅಲ್ಲದೆ ಸುಮಾರು ರೂ.1,50,000 ದಷ್ಟು ನಷ್ಟವಾಗಿದೆ" ಎಂದು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿದ್ದಾರೆ.