ಜುಲೈ 6 ರಿಂದ ಇಡೀ ರಾಜ್ಯ ಲಾಕ್‍ಡೌನ್ ಆಗುತ್ತಾ?, 12 ದಿನಗಳ ಕಾಲ ಲಾಕ್‍ಡೌನ್ ಆಗುತ್ತಾ ಕರುನಾಡು?, ಟಾಸ್ಕ್ ಫೋರ್ಸ್ ಸಭೆಯಲ್ಲಿ ನಡೆಯುತ್ತಿದೆ ಮಹತ್ವದ ಸಭೆ.

    ರಾಜ್ಯದ ಪರಿಸ್ಥಿತಿಯನ್ನು ನೊಡುತ್ತಾ ಇದ್ದರೆ ಇನ್ನು ಕೂಡ ಹೆಚ್ಚಿನ ಸೋಂಕಿತರು ಪತ್ತೆಯಾಗುವ ಸಾಧ್ಯತೆಗಳು ಇದೆ. ಹಾಗಾಗಿ ಕೊರೋನಾ ನಿಯಂತ್ರಣ ಮಾಡಲೇಬೇಕಾದಂತಹ ಅನಿವಾರ್ಯತೆ ಇದೆ. ಸಿಎಂ ಬಿಎಸ್‍ವೈ ಒಪ್ಪಿದರೆ ಲಾಕ್‍ಡೌನ್ ಆಗುವ ಸಾದ್ಯತೆ ಇದೆ. ಲಾಕ್‍ಡೌನ್ ನಿರ್ಧಾರವನ್ನು ಎಸ್‍ಎಸ್‍ಎಲ್‍ಸಿ ಪರೀಕ್ಷೆಯ ಬಳಿಕ ನಿರ್ಧರಿಸಲಾಗುವುದೆಂದು ತಿಳಿಸಿದ್ದಾರೆ. ಹಾಗಾಗಿ ಕೊರೋನಾ ನಿಯಂತ್ರಣಕ್ಕಾಗಿ ಸರ್ಕಾರ ದಿಟ್ಟ ಕ್ರಮವನ್ನು ಕೈಗೊಳ್ಳಲೇಬೆಕಾದಂತಹ ಪರಿಸ್ಥಿತಿ ಎದುರಾಗಿದೆ. ಹಿಗಾಗಿ ಬೆಂಗಳೂರಿನ ವಿಧಾನಸೌಧದ ಕ್ಯಾಬರೇಟ್ ಹಾಲ್‍ನಲ್ಲಿ  ಟಾಸ್ಕ್ ಫೋರ್ಸ್‍ಗಳ ಜೊತೆ ಮಹತ್ವದ ಚರ್ಚೆಯಾಗುತ್ತಿದೆ. ಪ್ರಮುಖವಾಗಿ ಆರೋಗ್ಯ ಸಚಿವರಾದ  ಶ್ರೀರಾಮುಲುರವರ ನೇತೃತ್ವದಲ್ಲಿ ಚರ್ಚೆ ನಡೆಯುತ್ತಿದೆ. ಟಾಸ್ಕ್ ಫೋರ್ಸ್‍ಗಳ ಚರ್ಚೆಯ ನಂತರ ಅಂತಿಮ ನಿರ್ಧಾರವನ್ನು ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ.