ಮೂಡುಬಿದಿರೆ:- ಅಕ್ಟೋಬರ್ 2 ರಂದು ವಿಶ್ವ ಅಹಿಂಸಾ  ದಿನ ಆಚರಣೆ ಪ್ರಯುಕ್ತ ಧವಲ ತ್ರಯ ಜೈನ ಕಾಶಿ ಟ್ರಸ್ಟ್ ಹಾಗೂ ಶ್ರೀ ದಿಗoಬರ ಜೈನ ಮಠದ  ಜಂಟಿ ಆಶ್ರಯದಲ್ಲಿ ಜಗದ್ಗುರು ಸ್ವಸ್ತಿಶ್ರೀ ಡಾ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಗಳವರ ಪಾವನ ಸಾನ್ನಿಧ್ಯ ಆಶೀರ್ವಾದಗಳೊಂದಿಗೆ ನೆರವೇರಿತು. ದೀಪ ಬೆಳಗಿಸಿ ಕಾರ್ಯಕ್ರಮ 10.30 ಕ್ಕೆ  ಶ್ರೀ ಮಠ ಮೂಡುಬಿದಿರೆಯ ಭಟ್ಟಾರಕ ಭವನದಲ್ಲಿ  ಉದ್ಘಾಟಿಸಿದ ಶ್ರೀ ಗಳವರು 16ನೇ ಶತಮಾನದ ಶ್ರೇಷ್ಠ ಕವಿ ರತ್ನಕರ ವರ್ಣಿ ಸಾಂಗತ್ಯದ ಮೂಲಕ ಅಹಿಂಸಾ ಧರ್ಮದ ತತ್ತ್ವಗಳನ್ನು ಸರ್ವರಿಗೂ ಅರ್ಥವಾಗುವಂತೆ ಸುಂದರವಾಗಿ ತನ್ನ ಕೃತಿಯಲ್ಲಿ ರಚಿಸಿ ಲೋಕ ವಿಖ್ಯಾತನಾಗಿದ್ದಾನೆ ಕವಿ. 

   ಕೃತಿ ಒಂದು ಪ್ರದೇಶ ಸಮುದಾಯ ಕ್ಕೆ ಸೇರಿರದೆ ಇಡೀ ಸಾಹಿತ್ಯ ಜಗತ್ತಿಗೆ ಸೇರಿದವನು, ಕವಿಗಳು  ಒಂದು ಸಮುದಾಯದ ಧ್ವನಿಯಾಗಿರದೆ ಸರ್ವರಿಗೆ ಸಂಬಂಧ ಪಟ್ಟವರು ಎಂದು ತಿಳಿಸಿ ರತ್ನಕರ ಕೃತಿಗೆ ಸಂಬಂಧ ಪಟ್ಟ ಕಾರ್ಯಕ್ರಮ  ಎಲ್ಲೆಡೆ  ಜರುಗಲಿ ಎಂದು ಆಶಯ ವ್ಯೆಕ್ತ ಪಡಿಸಿ ವಿದ್ವಾಂಸ ಮೋಹನ್ ಕುಮಾರ್ ಮಹಾಕವಿ ರತ್ನಾಕರ ವರ್ಣಿಯ 100 ನೇಯ  ರತ್ನಕರ ಶತಕ ಕಾವ್ಯ ವಾಚನ ಮತ್ತು ಪ್ರವಚನವನ್ನು  ವಿದ್ಯಾ ವಾಚಸ್ಪತಿ ಡಾ ಎಚ್. ಪಿ ಮೋಹನ್ ಕುಮಾರ್ ಶಾಸ್ತ್ರಿ,  ಮಂಡ್ಯ ರತ್ನಕರ ಕಾವ್ಯ ವಾಚನ ಪ್ರವಚನ ಮಾಡಿ ಕರ್ನಾಟಕದಲ್ಲಿ ದೇಶ ವಿದೇಶದಲ್ಲಿ ಧರ್ಮ ಜಾಗೃತಿ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

      ನೀರಿಕ್ಷಾ ಜೈನ್, ಪದ್ಮ ಪ್ರಿಯ ರತ್ನಕರ ಗೀತೆ ಹಾಡಿದರು. ಶ್ವೇತಾ ಜೈನ್ ವಕೀಲರು ಸನ್ಮಾನ ಪತ್ರ ವಾಚಿಸಿದರು. ನಿವೃತ್ತ ಪ್ರೊ ಅಜಿತ್ ಪ್ರಸಾದ್, ತಮ್ಮ ಪ್ರದಾನ ಭಾಷಣದಲ್ಲಿ ರತ್ನಕರ ಭಕ್ತಿ ಪಂಥದ ಚಳುವಳಿ ಕಾಲದಲ್ಲಿ ಭರತೇಶ ವೈಭವ ಶತಕ ತ್ರಯ, ಕೀರ್ತನಗಳ ಮೂಲಕ ಜೈನ ಧರ್ಮದ ಸಿದ್ದಾoಥಗಳನ್ನು ಉತ್ತಮವಾಗಿ ರಚಿಸಿ  ಪ್ರಚಾರ ಮಾಡಿದ ಮಹಾಕವಿ ಎಂದರು, ಡಾ ಎಸ್. ಪಿ ವಿದ್ಯಾ ಕುಮಾರ್  ಪ್ರಸ್ತಾವನೆಯಲ್ಲಿ ರತ್ನಕರ ವರ್ಣಿಯ ಹುಟ್ಟು, ಕೃತಿ ಕರ್ತೃ ಪರಿಚಯ ಮಾಡಿದರು.

    ಶತಕ ಕಾವ್ಯ ವಾಚನ ಪ್ರವಚನ ನೆರವೇರಿಸಿ ಪ್ರಾಂಶುಪಾಲ ಶಾಸ್ತ್ರಿ ಎಚ್ ಪಿ ಮೋಹನ್ ಕುಮಾರ್ ಮಾತನಾಡಿ ರತ್ನಕರ ಕಾವ್ಯ ಸುಂದರ ತತ್ತ್ವಾ ರ್ಥ ಗಳಿಂದ ಒಳಗೊಂಡಿದೆ ಶಾಂತ ರಸದ ಮೂಲಕ ಮೋಕ್ಷ ಸಾದಿಸುವ ವಿಚಾರ ಮಹಾ ಕವಿ ತಮ್ಮ ಕೃತಿ ಯಲ್ಲಿ ಅಳವಡಿಸಿ ಕೊಂಡಿದ್ದಾನೆ ಎಂದರು. ಅವರನ್ನು ಅಂದ್ರ ಪ್ರದೇಶ ಅಮರ ಪುರದ  ಮದನ್ ಪಂಡಿತ್, ನೆಲೆ ನೆಲೆ ಉದಯ ಪಂಡಿತ್, ಹಿರಿಯ ಸಂಘಟಕ ಸಾಹಿತಿ ರವಿರಾಜ್ ಮೂಡುಬಿದಿರೆ,  ಡಾಕ್ಟರೇಟ್ ಪಡೆದ ಪ್ರಭಾತ್ ಬಲ್ನಾಡು ಪೇಟೆ, ಉಪನ್ಯಾಸಕ ನೇಮಿರಾಜ್ ಇವರಿಗೆ ಸ್ವಾಮೀಜಿ ಗಳವರು ಧವಲತ್ರಯ ಜೈನ ಕಾಶಿ ಟ್ರಸ್ಟ್, ( ರಿ )  ಶ್ರೀ ಜೈನ ಮಠ ದ ವತಿಯಿಂದ ಸನ್ಮಾನ ಮಾಡಿ ಹರಸಿದರು. 

   ಅತಿಥಿಗಳಾಗಿ ಮಾಜಿ ಸಚಿವ ಕೆ ಅಭಯಚಂದ್ರ ಜೈನ್ , ಬಸದಿ ಮುಕ್ತೇಸರ ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಕುಮಾರ್ ಉಪಸ್ಥಿತರಿದ್ದರು. ಮಧ್ಯಾಹ್ನ 12.30 ರಿಂದ 1.30 ರವರೆಗೆ ಅನುಷಾ,  ಶ್ರವಣ ಇವರ  ಭರತ ನಾಟ್ಯ  ಕಾರ್ಯಕ್ರಮ ನೆರವೇರಿತು.ನೇಮಿರಾಜ್ ಕಾರ್ಯಕ್ರಮ ನಿರೂಪಣೆ ಮಾಡಿದರು. ಪ್ರಮೇಯಿ, ಖ್ಯಾತಿ ಪ್ರಾರ್ಥನೆ ಮಾಡಿದರು .

   ಸರಕಾರ ದ ನಿಯಮಾವಳಿ ಯಂತೆ ಕೋವಿಡ್ 19 ಕಾರಣ ಸೀಮಿತ ಸಂಖ್ಯೆ ಯ  ಆಹ್ವಾನಿತರುಗಳು ಬಿಟ್ಟು ಉಳಿದವರಿಗೆ  ಮನೆಯಲ್ಲೆ ಕುಳಿತು ನೇರ ಪ್ರಸಾರ  ಕಾರ್ಯಕ್ರಮವನ್ನು ಸ್ಪಿರಿಚುವಲ್  -ಡಿವೋಷನ್ ಫೇಸ್ಬುಕ್ ಪೇಜ್ ಮೂಲಕ  ವೀಕ್ಷಣೆ ಮಾಡುವ ವ್ಯೆವಸ್ಥೆ ಮಾಡಲಾಗಿತ್ತು  ಎ೦ದು ಧವಲ ತ್ರಯ  ಟ್ರಸ್ಟ್  ಹಾಗೂ ಶ್ರೀ  ದಿಗಂಬರ ಜೈನ ಮಠ ಮೂಡುಬಿದಿರೆ ವ್ಯೆವಸ್ಥಾಪಕರು ಸಂಜಯಂಥ ಕುಮಾರ್ ಶೆಟ್ಟಿ  ಪ್ರಕಟಣೆಯಲ್ಲಿ ತಿಳಿಸಿದ್ದಾರೆ.