ಮಂಗಳೂರು,(ಮಾರ್ಚ್ 16):- ಸರ್ಕಾರದ ವತಿಯಿಂದ  ಪ್ರಸ್ತುತ ಸಾಲಿನಲ್ಲಿ ಏಪ್ರಿಲ್ 5 ರಂದು ಡಾ. ಬಾಬು ಜಗಜೀವನರಾಂರವರ 114ನೇ ಜನ್ಮ ದಿನಾಚರಣೆ ಹಾಗೂ ಏಪ್ರಿಲ್ 14 ರಂದು ಡಾ. ಬಿ.ಆರ್. ಅಂಬೇಡ್ಕರ್ ರವರ 130ನೇ ಜನ್ಮ ದಿನಾಚರಣೆಯನ್ನು ಆಚರಿಸಲಾಗುತ್ತಿದ್ದು, ಪರಿಶಿಷ್ಟ ಜಾತಿ/ ಪರಿಶಿಷ್ಟ ವರ್ಗದ ಜನಾಂಗದವರ ಶ್ರೇಯಸ್ಸಿಗಾಗಿ ಪ್ರೋತ್ವಾಹಿಸಿ, ಶ್ರಮಿಸಿ, ಗಣನೀಯ ಸೇವೆ ಸಲ್ಲಿಸಿದ ಅರ್ಹ ವ್ಯಕ್ತಿಗಳನ್ನು ಗುರುತಿಸಿ ಡಾ. ಬಾಬು ಜಗಜೀವನರಾಂ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಪ್ರಶಸ್ತಿಗಳನ್ನು ನೀಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ಅರ್ಜಿ ಸಲ್ಲಿಸಲು ಮಾರ್ಚ್ 22 ಕೊನೆಯ ದಿನ. ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಮಂಗಳೂರು ತಾಲೂಕಿನ ಕಚೇರಿ ದೂ. ಸಂ. 0824-2441269, ಬಂಟ್ವಾಳ ತಾಲೂಕಿನ ಕಚೇರಿ ದೂ. ಸಂ. 08255-230968, ಪುತ್ತೂರು ತಾಲೂಕಿನ ಕಚೇರಿ ದೂ. ಸಂ. 08251-298803, ಬೆಳ್ತಂಗಡಿ ತಾಲೂಕಿನ ಕಚೇರಿ ದೂ. ಸಂ. 0825-6233528, ಸುಳ್ಯ ತಾಲೂಕಿನ ಕಚೇರಿ ದೂ. ಸಂ. 08257-233527 ನ್ನು ಸಂಪರ್ಕಿಸುವಂತೆ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.