ಮಂಗಳೂರು: ಮಂಗಳೂರಿನ ವೈದ್ಯ ಹಾಗೂ ಬರಹಗಾರ ಡಾ. ಸುರೇಶ ನೆಗಳಗುಳಿ ಇವರಿಗೆ ಅಕ್ಟೋಬರ್ ದಿನಾಂಕ 18, ರ ಭಾನುವಾರ,ಹಾಸನದ ಸಂಸ್ಕೃತ ಭವನದಲ್ಲಿ ಪ್ರತಿಷ್ಠಿತ ಹೊಯ್ಸಳ ಸಾಹಿತ್ತ ಶ್ರೀ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಹಾಸನದ ಮಾಣಿಕ್ಯ ಪ್ರಕಾಶನವು ಸಾಹಿತಿ ಕೊಟ್ರೇಶ ಉಪ್ಪಾರ,ವಾಸು ಸಮುದ್ರವಲ್ಲಿ, ದೇಸು ಆಲೂರು ಮುಂತಾದವರನ್ನೊಳಗೊಂಡ ಆಯ್ಕೆ ಸಮಿತಿಯನ್ನೊಳಗೊಂಡು ರಾಜ್ಯದ ಬರಹಗಾರರ ಸೇವೆಯನ್ನು ಗುರುತಿಸಿ ಕೊಡ ಮಾಡುವ ಸದ್ರಿ ಪ್ರಶಸ್ತಿ ಗೆ ವಿಶ್ವೇಶ್ವರ ಎನ್ ಮೇಟಿ ಸೊಲ್ಲಾಪುರ, ಎಂ.ಎ.ದರ್ಗಾ ಧಾರವಾಡ, ರಾಜೇಶ್ವರಿ ಹುಲ್ಲೇನಹಳ್ಳಿ ಹಾಸನ, ಪತ್ತಂಗಿ ಎಸ್ ಮುರಳಿ ಬೆಂಗಳೂರು ಸಹಿತ ಡಾ ಸುರೇಶ ನೆಗಳಗುಳಿ ದಕ್ಷಿಣ ಕನ್ನಡ ಆಯ್ಕೆಯಾಗಿದ್ದರು. ಹಾಸನದಲ್ಲಿ ಪದ್ಮಶ್ರೀ ದೊಡ್ಡರಂಗೇ ಗೌಡರಿಂದ ಉದ್ಘಾಟನೆ ಗೊಂಡ ಮಾಣಿಕ್ಯ ಪ್ರಕಾಶನ ವಾರ್ಷಿಕ ಸಮಾರಂಭ ಹಾಗೂ ಕವಿಕಾವ್ಯ ಸಂಭ್ರಮ ಉತ್ಸವದಲ್ಲಿ ಸಿ ಕೆ ರಾಮೇ ಗೌಡ ನಿಕಟಪೂರ್ವ ರಾಜ್ಯ ಗೌರವ ಕಾರ್ಯದರ್ಶಿ ಕ.ಸಾ.ಪ ಬೆಂಗಳೂರು ಇವರ ಅಧ್ಯಕ್ಷತೆಯಲ್ಲಿ ಟಿ ಸತೀಶ್ ಜವರೇ ಗೌಡ ರಾಜ್ಯ ಉಪಾಧ್ಯಕ್ಷ ಕೇ ಕ ಸಾ ವೇ ಬೆಂಗಳೂರು ಇವರಿಂದ ಹೂ ಹಾರ ಹಣ್ಣು ಪೇಟ ಪ್ರಶಸ್ತಿ ಪತ್ರ ಸಹಿತ ಪ್ರದಾನ ಮಾಡಲ್ಪಟ್ಟಿತು.
ಇದಲ್ಲದೆ ಕಾವ್ಯ ಮಾಣಿಕ, ಜನ್ನಕಾವ್ಯ, ಹೊಯ್ಸಳ ಸಾಂಸ್ಕೃತಿಕ ಮತ್ತು ಎನ್ ಶೈಲಜಾ ದತ್ತಿ ಪ್ರಶಸ್ತಿಗಳೂ ಅರ್ಹರಿಗೆ ಸಂದವು.
ಜಯಂತಿ ಚಂದ್ರಶೇಖರ ಅಧ್ಯಕ್ಷರು ಕೆ.ಕ.ಸಾ.ವೇ ಚನ್ನರಾಯಪಟ್ಟಣ ಇವರಿಂದ ಪ್ರಾರ್ಥನೆ, ಗಂಗಮ್ಮ ಅಧ್ಯಕ್ಷರು ಕೇ.ಜ.ಸಾ.ವೇ ಅರಸೀಕೆರೆ ಇವರ ಸ್ವಾಗತ, ಹಾಗೂ ಉಷಾ ಇವರ ವಂದನಾರ್ಪಣೆ
ಬಳಿಕ ಕವಯಿತ್ರಿ ಶಿವ ಲೀಲಾ ಹುಣಸಗಿ ಉ.ಕ ಇವರ ಅಧ್ಯಕ್ಷತೆಯಲ್ಲಿ ನಡೆದ ಕವಿಕಾವ್ಯ ಸಂಭ್ರಮ ಕವಿಗೋಷ್ಠಿಯಲ್ಲಿ ಪತ್ರಕರ್ತ ಹಾಗೂ ಕೇ.ಕ.ಸಾ.ವೇ ಬಂಟ್ವಾಳ ತಾಲೂಕು ಅಧ್ಯಕ್ಷ ಜಯಾನಂದ ಪೆರಾಜೆ ಸಹಿತ ಐವತ್ತಕ್ಕೂ ಹೆಚ್ಚು ಖ್ಯಾತ ಕವಿಗಳು ಕವನ ವಾಚಿಸಿದರು.
ಪ್ರಕಾಶನ ಮುಖ್ಯಸ್ಥೆ ದೀಪಾ ಕೊಟ್ಟೂರ, ಕೇ ಕ.ಸಾ.ವೇ ಕೇಂದ್ರ ಅಧ್ಯಕ್ಷ ಕೊಟ್ರೇಶ ಉಪ್ಪಾರ, ಸಂಚಾಲಕ ವಾಸು ಸಮುದ್ರವಲ್ಲಿ, ಹೋರಾ ಪರಮೇಶ ಸಹಿತ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ಖ್ಯಾತ ರೆಡ್ ಎಓ್ ಎಮ್ ಮಂಗಳೂರು ಆರ್ ಜೆ ಪ್ರಸನ್ನ ಇವರಿಂದ ಸುಂದರ ನಿರೂಪಣೆ ಗೊಂಡ ಸಮಾರಂಭವು ಅತಿ ಸುಂದರವಾಗಿ ಕೊನೆಗೊಂಡಿತು.