ಮಂಗಳೂರು, ಅಕ್ಟೋಬರ್ 20:- ಪ್ರಸಕ್ತ ಸಾಲಿನಲ್ಲಿ ಆಯಾ ಕಾಲೇಜುಗಳಲ್ಲಿ ಉಳಿಕೆ ಸೀಟುಗಳನ್ನು ಎಸ್.ಎಸ್.ಎಲ್.ಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರುವ ಹಾಗೂ ಈ ಮೊದಲು ಉತ್ತೀರ್ಣರಾಗಿ ಅರ್ಜಿ ಸಲ್ಲಿಸದೇ ಇರುವ ಅಭ್ಯರ್ಥಿಗಳಿಂದ ಅರ್ಜಿ ಪಡೆದು ಆಫ್-ಲೈನ್ ಮೂಲಕ ಸೀಟು ಹಂಚಿಕೆ ಮಾಡಲು ಆಯಾ ಪಾಲಿಟೆಕ್ನಿಕ್‍ನ ಹಂತದಲ್ಲಿಯೇ ಪ್ರವೇಶ ನೀಡುವ ಅವಧಿಯನ್ನು ಅಕ್ಟೋಬರ್ 29 ರೊಳಗೆ ಆಹ್ವಾನಿಸಲಾಗಿದೆ.

    ಅರ್ಜಿ ನಮೂನೆ ಹಾಗೂ ಹೆಚ್ಚಿನ ಮಾಹಿತಿಗಾಗಿ ಕರ್ನಾಟಕ (ಸರ್ಕಾರಿ) ಪಾಲಿಟೆಕ್ನಿಕ್ ಮಂಗಳೂರು ಅಥವಾ ದೂ. ಸಂಖ್ಯೆ: 0824-2211636 ನ್ನು ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.