ಮಂಗಳೂರು, ಅಕ್ಟೋಬರ್ 16:  ದ.ಕ. ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆಯು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು, ವಿಧಾನ ಪರಿಷತ್ ಸದಸ್ಯರಾದ ಕೆ.ಹರೀಶ್ ಕುಮಾರ್ ರವರ ಅಧ್ಯಕ್ಷತೆಯಲ್ಲಿ ದ.ಕ.ಜಿಲ್ಲಾ ಯುವ ಅಧ್ಯಕ್ಷರಾದ ಮಿಥುನ್ ರೈ, ಮಾಜಿ ಸಚಿವರಾದ ಅಭಯಚಂದ್ರ ಜೈನ್, ಮಾಜಿ ಶಾಸಕರಾದ ಜೆ.ಆರ್. ಲೋಬೊ, ಮೊಯ್ದೀನ್ ಬಾವಾ ರವರ ಉಪಸ್ಥಿತಿಯಲ್ಲಿ ಅಕ್ಟೋಬರ್ 15 ಜರಗಿ ಇತ್ತೀಚಿಗೆ ದಿವಂಗತರಾದ ಕರ್ನಾಟಕ ಬ್ಯಾಂಕ್ ನ ಮಾಜಿ ಅಧ್ಯಕ್ಷರಾದ ಅನಂತ್ ಕೃಷ್ಣ, ಶಾಸಕರಾದ ಬಿ.ನಾರಾಯಣ ರಾವ್, ಇಂಟಕ್ ನೇತಾರರಾದ ಶ್ರೀ ಉಮೇಶ್ ಚಂದ್ರ, ಮೀನುಗಾರ ನಾಯಕರಾದ ಲೋಕನಾಥ್ ಬೋಳಾರ್ ರವರಿಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯಿಂದ ಮೌನಪ್ರಾರ್ಥನೆ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು.