ಮೂಡುಬಿದಿರೆ:- ಜಗದ್ಗುರು ಶಂಕರಾಚಾರ್ಯ ಸಂಸ್ಥಾನ ಎಡನೀರು ಮಠ ದ ಶ್ರೀ ತೋಟಕಾ ಚಾರ್ಯ ಪರಂಪರೆಯ ಭಾವಿ ಉತ್ತರಾಧಿಕಾರಿ (ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿ ಎಂದು ನಾಮಾಂಕಿತ ರಾದ )ಶ್ರೀ ಜಯರಾಮ ಮಂಜತ್ತಾಯರು ತಮ್ಮ ಸನ್ಯಾಸ ದೀಕ್ಷಾ ಪೂರ್ವ ಭಾವಿ ತೀರ್ಥ ಕ್ಷೇತ್ರ ಸಂಚಾರ ನಿಮಿತ್ತ ಅವರ 121 ನೇ ಕ್ಷೇತ್ರ ಸಂದರ್ಶನ  ಗುರುವಾರ15.10.20 ರ ಸಂಜೆ 6.20 ಕ್ಕೆ ಜೈನ ಕಾಶಿ  ಮೂಡುಬಿದಿರೆಯ ಜಗತ್ಪ್ರಸಿದ್ದ  ಸಾವಿರ ಕಂಬ ಬಸದಿ ಶ್ರೀ ಜೈನ ಮಠ ಭಗವಾನ್ ಪಾರ್ಶ್ವನಾಥ ಸ್ವಾಮಿ, ಮಹಾ ಮಾತೆ ಕೂಶ್ಮಾoಡಿನಿ ದೇವಿ,  ಭೇಟಿ ನೀಡಿ ದರ್ಶನ ಮಾಡಿದರು.

ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿಯವರನ್ನು  ಭೇಟಿಯಾದರು. ತಮ್ಮ ಮುಂದಿನ ಸನ್ಯಾಸ ಜೀವನದ ಪರಮ ಪುನೀತ ಕ್ಷಣದ ಶುಭ ದಿನ 28.10.20 ರಂದು ಪಟ್ಟಾ ಭೀಷೇಕಕ್ಕೆ ಆಗಮಿಸಲು ತಿಳಿಸಿದರು. ಹಾಗೂ ಮಾರ್ಗದರ್ಶನ ಸಹಕಾರ ಇರಲೆಂದು ತಿಳಿಸಿದರು.

ಮೂಡುಬಿದಿರೆ ಜಗದ್ಗುರು ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯ ವರ್ಯ ಮಹಾ ಸ್ವಾಮೀಜಿ ಭಾವಿ ಉತ್ತರಾಧಿಕಾರಿ (ಶ್ರೀ ಸಚ್ಚಿದಾ ನಂದ ಭಾರತೀ ಸ್ವಾಮೀಜಿ ಎಂದು ನಾಮಾಂಕಿತ ರಾದ )ಶ್ರೀ ಜಯರಾಮ ಮಂಜತ್ತಾಯರಿಗೆ ಶಾಲು ಹಾಕಿ ಶ್ರೀಫಲ ಮಂತ್ರ ಕ್ಷತೆ ನೀಡಿ ಗೌರವಿಸಿದರು ಹಾಗೂ ಮುಂದಿನ ಸನ್ಯಾಸ ಜೀವನ ಅತ್ಯಂತ ಯಶಸ್ವೀ ಲೋಕಕ್ಕೆ  ಮಾರ್ಗದರ್ಶನ  ನೀಡುವ  ಜೀವನ ನಿಮ್ಮದಾಗಲಿ ಎಂದು ಶುಭ ಹಾರೈಸಿ ಉಭಯ ಮಠ ಗಳಲ್ಲಿ ಸ್ನೇಹ ಧರ್ಮ ಜಾಗೃತಿ ಸಾಮರಸ್ಯ ವೃದ್ಧಿಸಲಿ, ಯಶಸ್ಸು,ಅರೋಗ್ಯ  ಶಾಂತಿ ಸಿಗಲೆಂದು ಮೂಡುಬಿದಿರೆ ಶ್ರೀ ಗಳವರು  ಪ್ರಾರ್ಥಿಸಿದರು.

ಬಲರಾಮ್ ಭಟ್, ಎ. ಕೆ ರಾವ್, ನಾಗರಾಜ್ ಭಟ್, ಪಟ್ಣ ಶೆಟ್ಟಿ ಸುದೇಶ್ ಕುಮಾರ್, ದಿನೇಶ್ ಬೆಟ್ಕೇ ರಿ, ಬಸದಿ ಮುಕ್ತೇಸರರು,ಯಂ ಸಿ ಸಿ ಬ್ಯಾಂಕ್  ಕಾರ್ಯ ನಿರ್ವಹಣಾ ಅಧಿಕಾರಿ ಚಂದ್ರ ಶೇಖರ್, ನ್ಯಾಯವಾದಿ  ಯಂ ಬಾಹುಬಲಿ ಪ್ರಸಾದ್, ಯಂ ಅಭಯ ಚಂದ್ರ ಜೈನ್  ,ಪ್ರವೀಣ ಚಂದ್ರ ಜೈನ್, ಧನ ಕೀರ್ತಿ ಬಲಿಪ ಮೊದಲಾದವರು ಉಪಸ್ಥಿತರಿದ್ದರು.