ದಕ್ಷಿಣ ಕನ್ನಡ:- ಕರಿಯಂಗಳ ಗ್ರಾಮದ ಬಡಕಬೈಲ್ ಗನೆಮರ್ ಎಂಬಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ ಚಂದ್ರಪ್ರಕಾಶ್ ಶೆಟ್ಟಿ ಅವರ ಅನುದಾನದಿಂದ  ರೂ.10 ಲಕ್ಷ ವೆಚ್ಚದಲ್ಲಿ  ನಿರ್ಮಾಣಗೊಳ್ಳುವ ಕುಡಿಯುವ ನೀರಿನ ಟ್ಯಾಂಕ್ ಮತ್ತು ಬೋರ್ವೆಲಿನ ಶಿಲಾನ್ಯಾಸವನ್ನು ಮಾಜಿ ಜಿಲ್ಲಾ  ಉಸ್ತುವಾರಿ ಸಚಿವರಾದ ಬಿ ರಮಾನಾಥ ರೈ ರವರು ನೆರೆವೇರಿಸಿದರು ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಉಪಾಧ್ಯಕ್ಷರಾದ ಅಬ್ಬಾಸ್ ಅಲಿ, ದಕ್ಷಿಣ ಕನ್ನಡ ಜಿಲ್ಲಾ ಯುವ ಕಾಂಗ್ರೆಸ್ ಇದರ ಪ್ರದಾನ ಕಾರ್ಯದರ್ಶಿ ಕರಿಯಂಗಳ ಗ್ರಾಮ ಪಂಚಾಯತ್ ಸದಸ್ಯರಾದ ಇಬ್ರಾಹಿಂ ನವಾಝ್, ಅಮ್ಮುoಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಶ್ರೀಮತಿ ಪ್ರೇಮಲತ, ಕರಿಯಂಗಳ ಗ್ರಾ ಪಂ ಇದರ ಮಾಜಿ ಅಧ್ಯಕ್ಷರಾದ ಚಂದ್ರಶೇಖರ ಭಂಡಾರಿ, ವಲಯ ಕಾಂಗ್ರೆಸ್ ಚಂದ್ರಹಾಸ ಪಲ್ಲಿಪಾಡಿ, ಅಮ್ಮುoಜೆ ಗ್ರಾಮ ಪಂಚಾಯತ್ ಸದಸ್ಯರಾದ ಹರೀಶ್, ರಮ್ಲಾನ್ , ಬಶೀರ್ ಮೊಹಮ್ಮದ್ ಕರಿಯಂಗಳ , ಉಮೇಶ್ ಕರಿಯಂಗಳ, ಗಿತೇಶ್ ಬಡಕಬೈಲ್, ಮಂಜುನಾಥ್ ಬಡಕಬೈಲ್, ಬಿ ಎಸ್ ಮೊಹಮ್ಮದ್ ಇಕ್ಬಾಲ್ ಮೊದಲಾದವರು  ಉಪಸ್ಥಿತರಿದ್ದರು.