ಮಂಗಳೂರು (ಜು. 08) : ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೊರೊನಾ ಸೋಂಕು ತೀವ್ರಗತಿಯಲ್ಲಿ ಏರಿಕೆಯಾಗುತ್ತಿದ್ದು ಬುಧವಾರ ಒಂದು ದಿನದಲ್ಲೇ 183 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಜಿಲ್ಲೆಯಲ್ಲಿ ಈವರೆಗೆ ದೃಢಪಟ್ಟ ಕೊರೊನಾ ಸೋಂಕು ಪ್ರಕರಣಗಳಲ್ಲಿ ಈ ದಿನ ಹೆಚ್ಚಿನ ಪ್ರಕರಣಗಳು ದಾಖಲಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ 1,542 ಕ್ಕೆ ಏರಿಕೆಯಾಗಿದೆ.

63 ಮಂದಿಗೆ ಪ್ರಾಥಮಿಕ ಸಂಪರ್ಕದಿಂದ, ಇಬ್ಬರಿಗೆ ದ್ವಿತೀಯ ಸಂಪರ್ಕದಿಂದ ಕೊರೊನಾ ಸೋಂಕು ತಗುಲಿದ್ದರೆ 25 ಐಎಲ್‌ಐ ಹಾಗೂ 4 ಎಸ್‌ಎಆರ್‌ಐ ಪ್ರಕರಣಗಳಾಗಿವೆ. ಇಬ್ಬರು ಮಹಾರಾಷ್ಟ್ರದಿಂದ ಹಾಗೂ ಒಬ್ಬರು ಬೆಂಗಳೂರಿನಿಂದ ಬಂದವರಾಗಿದ್ದಾರೆ. ಹಾಗೆಯೇ ಐವರು ಸೌದಿ, ಮಸ್ಕತ್‌, ದುಬೈನಿಂದ ಬಂದವರಾಗಿದ್ದಾರೆ. 22 ಮಂದಿಗೆ ರ್‍ಯಾಂಡಮ್‌ ಪರೀಕ್ಷೆಯಿಂದ ಕೊರೊನಾ ದೃಢಪಟ್ಟಿದೆ. ಇನ್ನು 54 ಮಂದಿಯ ಕೊರೊನಾ ಸೋಂಕಿನ ಮೂಲವನ್ನು ಪತ್ತೆಹಚ್ಚಲಾಗುತ್ತಿದೆ.

ಜಿಲ್ಲೆಯಲ್ಲಿ ಈವರೆಗೆ 22,181 ಮಂದಿಯ ಗಂಟಲ ದ್ರವದ ಮಾದರಿಯನ್ನು ಪರೀಕ್ಷೆ ಮಾಡಲಾಗಿದ್ದು ಈ ಪೈಕಿ 21,695 ವರದಿಗಳು ಲಭಿಸಿದೆ. ಈ ಪೈಕಿ 20,153 ಕೊರೊನಾ ವರದಿ ನೆಗೆಟಿವ್‌ ಆಗಿದ್ದರೆ 1,542 ಕೊರೊನಾ ವರದಿ ಪಾಸಿಟಿವ್‌ ಆಗಿದೆ.

ಇನ್ನು ಜಿಲ್ಲೆಯಲ್ಲಿ  12 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು ಈವರೆಗೆ 695 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. 819 ಪ್ರಕರಣಗಳು ಸಕ್ರಿಯವಾಗಿದೆ. ಮೂವರು ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಡುಪಿ (ಜು. 08) : ಜಿಲ್ಲೆಯಲ್ಲಿ ಬುಧವಾರ ಮತ್ತೆ 31 ಮಂದಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 1421ಕ್ಕೆ ಏರಿಕೆಯಾಗಿದೆ.

ಜಿಲ್ಲೆಯಲ್ಲಿ ಈವರೆಗೆ 20493 ಗಂಟಲು ದ್ರವ ಪರೀಕ್ಷೆ ನಡೆಸಿದ್ದು, ಈ ಪೈಕಿ 1421 ವರದಿ ಪಾಸಿಟಿವ್‌ ಬಂದರೆ 15992 ವರದಿಗಳು ನೆಗೆಟವ್ ಬಂದಿದೆ. ಇನ್ನು 3080 ವರದಿಗಳು ಬಾಕಿಯಿದೆ.

ಉಡುಪಿ ಜಿಲ್ಲಾಡಳಿತ ಬಿಡುಗಡೆ ಮಾಡಿದ ಆರೋಗ್ಯ ಬುಲೆಟಿನ್ ಪ್ರಕಾರ, ಒಟ್ಟು 4,875 ಜನರು 28 ದಿನಗಳ ಕ್ವಾರಂಟೈನ್‌ನ್ನು ಪೂರ್ಣಗೊಳಿಸಿದ್ದಾರೆ, ಒಟ್ಟು 4,875 ಜನರು 14 ದಿನಗಳ ಕ್ವಾರಂಟೈನ್‌ನ್ನು ಪೂರ್ಣಗೊಳಿಸಿದ್ದಾರೆ. 1,197 ಜನರು ಪ್ರಸ್ತುತ ಹೋಂ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ.

ಜಿಲ್ಲೆಯಲ್ಲಿ ಈವರೆಗೆ ಮೂವರು ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ.