" ದೇಲಂಪಾಡಿ ಬಾಲಕೃಷ್ಣ ತಂತ್ರಿಅವರು ನಿಧನರಾದ ಸುದ್ದಿ ತಿಳಿದು ದುಃಖವಾಯಿತು.
ಖ್ಯಾತ ವಿದ್ವಾಂಸರೂ, ತಾಂತ್ರಿಕ ತಜ್ಞರೂ ಆದ ಬಾಲಕೃಷ್ಣ ತಂತ್ರಿಅವರು ರಚಿಸಿದ “ಕುರಿಕಾಟ್ ಪಚ್ಚ” ಗ್ರಂಥವನ್ನು ನೋಡಿ ತಾನು ಆಶ್ಚರ್ಯಚಕಿತನಾಗಿದ್ದೆ. ಅಂದರೆ ತಂತ್ರಾಗಮ ಪದ್ಧತಿಗೆ ಸಂಬಂಧಪಟ್ಟ ಎಲ್ಲಾ ವಿಧಿ-ವಿದಾನಗಳನ್ನು ಅವರು ಅದರಲ್ಲಿ ಅರ್ಥವತ್ತಾಗಿ ನಿರೂಪಿಸಿ ಪ್ರಕಟಿಸಿದ್ದರು.
ಅವರ ನಿಧನದಿಂದ ಬಹು ಅಮೂಲ್ಯ ಜ್ಞಾನವನ್ನು ಹೊಂದಿರುವ ಖ್ಯಾತ ವಿದ್ವಾಂಸರು ಹಾಗೂ ಪರಿಣತರನ್ನು ಕಳೆದು ಕೊಂಡಂತಾಗಿದೆ.ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತಾ ನನ್ನ ಗೌರವವನ್ನು ಸಲ್ಲಿಸುತ್ತೇನೆ." ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.