ನವದೆಹಲಿ: ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್, ಐಐಎಂ ಸಿಎಟಿ ಪರೀಕ್ಷೆ 2020 ದಿನಾಂಕವನ್ನು ಇಂದು ಬಿಡುಗಡೆ ಮಾಡಿದೆ. ಪರೀಕ್ಷೆ ನವೆಂಬರ್ 29 ರಂದು ನಡೆಯಲಿದೆ. ಪರೀಕ್ಷೆಯ ವೇಳಾಪಟ್ಟಿ IIM, CAT ಅಧಿಕೃತ ಸೈಟ್‌ನಲ್ಲಿ iimcat.ac.in ನಲ್ಲಿ ಲಭ್ಯವಿರುತ್ತದೆ.
ಪರೀಕ್ಷೆಗೆ ಹಾಜರಾಗಲಿರುವ ಎಲ್ಲ ಎಂಬಿಎ ಆಕಾಂಕ್ಷಿಗಳು https://cdn.digialm.com/ ನಲ್ಲಿ ಅಧಿಕೃತ ಪ್ರಕಟಣೆ, ಸಂಪೂರ್ಣ ವೇಳಾಪಟ್ಟಿಯನ್ನು ಪರಿಶೀಲಿಸಬಹುದು.
ಆಗಸ್ಟ್ 5 ರಿಂದ ಸೆಪ್ಟೆಂಬರ್ 16 ರವರೆಗೆ ಪರೀಕ್ಷಾ ಅರ್ಜಿ ಸಲ್ಲಿಸಬಹುದು. ಅಕ್ಟೋಬರ್ 29 ರಂದು ಪ್ರವೇಶ ಪತ್ರ ನೀಡಲಾಗುತ್ತದೆ. ನವೆಂಬರ್ 29 ರಂದು ಪರೀಕ್ಷೆ ನಡೆಯಲಿದ್ದು, ಜನವರಿ ಮೊದಲ ವಾರದಲ್ಲಿ ಫಲಿತಾಂಶ ಪ್ರಕಟಿಸುವ ಸಾಧ್ಯತೆ ಇದೆ.
ಎರಡು ಅವಧಿಯಲ್ಲಿ (ಬೆಳಗ್ಗೆ ಮತ್ತು ಸಂಜೆ) ಪರೀಕ್ಷೆಯನ್ನು ನಡೆಸಲಾಗುವುದು ಪ್ರತಿ ವರ್ಷ ಅಂದಾಜು 2 ಲಕ್ಷ ಅಭ್ಯರ್ಥಿಗಳು ಈ ಪರೀಕ್ಷೆಗೆ ಹಾಜರಾಗುತ್ತಾರೆ. ಸಿಎಟಿಯಲ್ಲಿ ಗಳಿಸಿದ ಅಂಕಗಳು ಮತ್ತು ಇತರ ಕೆಲ ಪ್ರಮುಖ ಮಾನದಂಡಗಳ ಆಧಾರದ ಮೇಲೆ ಐಐಎಂಗಳಿಗೆ ಪ್ರವೇಶ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ ಅಧಿಕೃತ ಸೈಟ್‌ಗೆ ಭೇಟಿ ನೀಡಬಹುದು.