ಮಂಗಳೂರು: ದ ಕ ಬಿ. ಜೆ.ಪಿ.ಜಿಲ್ಲಾಧ್ಯಕ್ಷರಾದ ಸುದರ್ಶನ್ ಅವರು ಮಂಗಳೂರಿನಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ನವೆಂಬರ್ 5ರಂದು ನಡೆಯುವ ಪಕ್ಷದ ರಾಜ್ಯ ಕಾರ್ಯಕಾರಿಣಿಯ ಮಾಹಿತಿಯನ್ನು ನೀಡಿದರು.‌

ರಮಣ್ ಪೈ ಹಾಲ್ ನಲ್ಲಿ ನಡೆಯುವ ಈ ಸಮಾವೇಶವನ್ನು ರಾಜ್ಯ ಮುಖ್ಯ ಮಂತ್ರಿ ಯಡಿಯೂರಪ್ಪ ನವರು ಉದ್ಘಾಟಿಸಲಿದ್ದು, ಅದರ ಹೊರತು ಉಳಿದ ಇಡೀ ದಿನದ ಮಾತುಕತೆಗೆ ಪತ್ರಕರ್ತರಿಗಾಗಲಿ, ಸಾರ್ವಜನಿಕರಿಗಾಗಲಿ ಪ್ರವೇಶ ವಿಲ್ಲ ಎಂದೂ ಸುದರ್ಶನ್ ತಿಳಿಸಿದರು.

ಸಮಾರೋಪವನ್ನು ರಾಷ್ಟ್ರೀಯ ವಕ್ತಾರ ಸಂತೋಷ ಜಿ ನಡೆಸಿ ಕೊಡುವ ಸಾಧ್ಯತೆಯಿದ್ದು, ಕಾರ್ಯಕಾರಿ ಮಾತುಕತೆಯಲ್ಲಿ ಕೇಂದ್ರ ಮಂತ್ರಿ ಪ್ರಹ್ಲಾದ ಜೋಶಿ, ಕೇಂದ್ರ ಕಾರ್ಯ ಕಾರಿ ಮಂಡಳಿಯ ಸಿ. ಟಿ. ರವಿ ಸಹಿತ  ರಾಜ್ಯದ 120 ಜನ ಉನ್ನತ ನಾಯಕರು ಭಾಗವಹಿಸುವದಾಗಿ ಅವರು ಮಾಹಿತಿ ನೀಡಿದರು.

ಬಿಜೆಪಿಯ ರಾಜ್ಯಾದ್ಯಕ್ಷರಾದ ನಳಿನ್ ಕುಮಾರ್ ಕಟೀಲು ಅಧ್ಯಕ್ಷ ತೆಯಲ್ಲಿ ಈ ಇಡೀ ದಿನದ ರಾಜ್ಯ ಬಿಜೆಪಿ ಕಾರ್ಯಕಾರಿ ಸಮಾವೇಶವು ನಡೆಯಲಿದ್ದು, ಪಕ್ಷವನ್ನು ಬಲ ಪಡಿಸುವುದರೊಂದಿಗೆ ಅಭಿವೃದ್ಧಿಗೆ ಒತ್ತು ನೀಡುವ ಚರ್ಚೆಯೂ ನಡೆಯಲಿದೆ. ಪತ್ರಿಕಾ ಗೋಷ್ಠಿಯಲ್ಲಿ ಮುಡ ಅಧ್ಯಕ್ಷರಾದ ರವಿಶಂಕರ್ ಮಿಜಾರ್, ಶಾಸಕರುಗಳಾದ ಸಂಜೀವ ಮಠಂದೂರು, ವೇದವ್ಯಾಸ ಕಾಮತ್, ದ. ಕ. ಜಿ. ಪಂ. ನ ಕಸ್ತೂರಿ ಪಂಜ ಮೊದಲಾದವರು ಉಪಸ್ಥಿತರಿದ್ದರು.