ಮುಂಬಯಿ: ಮುಂಬಯಿ ಪೋರ್ಟ್ ಹರೀಶ್ ಲಂಚ್ ಹೋಮ್ ಇದರ ಮಾಲಕ ಬಂಟ್ವಾಳ ದಿ. ಬಾಬು ಸಾಲ್ಯಾನ್ ರವರ ಧರ್ಮಪತ್ನಿ ಯಶೋದಾ ಬಿ ಸಾಲ್ಯಾನ್ (82) ಅವರು ಸೆ. 18 ರಂದು ದಾದರ್ ನ ಸ್ವಗೃಹದಲ್ಲಿ ಹೃದಯಘಾತದಿಂದಾಗಿ ನಿಧನ ಹೊಂದಿದರು.

ಮೂಲತ ಮಂಗಳೂರಿನ ಊರ್ವದವರಾಗಿದ್ದು ಇವರು  ಕುಲಾಲ ಸಂಘ ಮುಂಬಯಿಯ ಮಾಜಿ ಅಧ್ಯಕ್ಷ, ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯಾಧ್ಯಕ್ಷ  ಗಿರೀಶ್ ಬಿ. ಸಾಲ್ಯಾನ್ , ನವಿ ಮುಂಬಯಿಯ ನೇರುಳ್ ನ ಹರೀಶ್ ಹಾಸ್ಪೀಟಲಿನ ಸಿ. ಎಂ. ಡಿ. ಡಾ. ಹರೀಶ್ ಬಿ ಸಾಲ್ಯಾನ್, ಸೊಸೆಯಂದಿರಾದ ಮಮತಾ ಗಿರೀಶ್ ಸಾಲ್ಯಾನ್,  ಡಾ. ಸುಚಿತ್ರ ಹರೀಶ್ ಸಾಲ್ಯಾನ್, ಮೊಮ್ಮಕ್ಕಳು ಹಾಗೂ ಅಪಾರ ಬಂಧುಗಳನ್ನು ಅಗಲಿದ್ದಾರೆ.

ಮುಂಬಯಿ ಮಹಾನಗರದ ಕುಲಾಲ ಸಮಾಜದ ಅಭಿವೃದ್ದಿಗೆ ಅಪಾರ ಕೊಡುಗೆಯನ್ನು ನೀಡುದರೊಂದಿಗೆ, ಕುಲಾಲ ಸಂಘ ಮುಂಬಯಿಯ ಮತ್ತು ಮಂಗಳೂರಿನ ಕುಲಶೇಖರದ ವೀರನಾರಾಯಣ ದೇವಸ್ಥಾನದ ಅಭಿವೃದ್ದಿಗೆ ತಮ್ಮ ಕೊಡುಗೆಯನ್ನು ನೀಡುತ್ತಾ ಬಂದಿರುವ ಯಶೋದಾ ಬಿ ಸಾಲ್ಯಾನ್ ಕುಲಾಲ ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲೂ ಹಿರಿವಯಸ್ಸಿನಲ್ಲೂ ಸಕ್ರಿಯರಾಗಿ ಪಾಲುಗೊಳ್ಳುತ್ತಾ ಸಮಾಜದ ಯುವ ಜನಾಂಗಕ್ಕೆ ಪ್ರೋತ್ಸಾಹ ನೀಡುತ್ತಿದ್ದರು. 

ಮುಂಬಯಿ ಪೋರ್ಟ್ ಹರೀಶ್ ಲಂಚ್ ಹೋಮ್ ಮತ್ತು ಹರೀಶ್ ರೆಪ್ರೆಶ್ ಮೆಂಟ್, ಹರೀಶ್ ಹಾಸ್ಪೀಟಲಿನ ಪ್ರವರ್ತಕರಾದ ಬಂಟ್ವಾಳ ದಿ. ಬಾಬು ಸಾಲ್ಯಾನ್ ರ ಉದ್ದಿಮೆಯಲ್ಲಿ ಸಂಪೂರ್ಣ ಸಹಕಾರವನ್ನು ನೀಡುತ್ತಾ ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡು ಇವರು ಒರ್ವ ಕೊಡುಗೈ ದಾನಿಯೂ ಆಗಿದ್ದರು. ಇವರ ಇಬ್ಬರು ಪುತ್ರರನ್ನು ಸಾಮಾಜಿಕ ಧಾರ್ಮಿಕ ಶೈಕ್ಷಣಿಕ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಲ್ಲಿ ಪ್ರೇರಣಾ ಶಕ್ತಿಯಾಗಿದ್ದರು

ಯಶೋದ ಬಿ ಸಾಲ್ಯಾನ್ ಅವರ ಅಕಾಲಿಕ ನಿಧನಕ್ಕೆ ಕುಲಾಲ ಸಂಘ ಮುಂಬಯಿಯ ಅಧ್ಯಕ್ಷರಾದ ದೇವದಾಸ ಕುಲಾಲ್, ಉಪಾಧ್ಯಕ್ಷರಾದ  ರಘು ಮೂಲ್ಯ ಪಾದೆಬೆಟ್ಟು. ಪ್ರಧಾನ ಕಾರ್ಯದರ್ಶಿ ಕರುಣಾಕರ ಬಿ. ಸಾಲ್ಯಾನ್, ಕೋಶಾಧಿಕಾರಿ ಜಯ ಎಸ್ ಅಂಚನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮಮತಾ ಎಸ್ ಗುಜರನ್, ಸಂಘದ ವಿವಿಧ ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷರು ಗಳಾದ ಸುಂದರ ಮೂಲ್ಯ ಸಾಯನ್, ವಾಸು ಬಂಗೇರ ನವಿಮುಂಬಯಿ . ಕೆ ಗೋಪಾಲ್ ಬಂಗೇರ ಕಾಂದಿವಲಿ .ಸುಂದರ್ ಮೂಲ್ಯ ಮೀರಾರೋಡ್. ಡಿ ಐ ಮೂಲ್ಯ ಕಲ್ಯಾಣ್. ಮಂಗಳೂರು ಸಮಿತಿಯ ಸಂಚಾಲಕ ವಿಶ್ವನಾಥ ಬಂಗೇರ,   ಹಾಗೂ ಪದಾಧಿಕಾರಿಗಳು, ಮಹಿಳಾ ವಿಭಾಗದ ಸದಸ್ಯರು,  ಮತ್ತು ಸರ್ವ ಸದಸ್ಯರು , ಜ್ಯೋತಿ ಕ್ರೆಡಿಟ್ ಸೊಸೈಟಿಯ ಕಾರ್ಯದರ್ಶಿ ಪಿ ಶೇಖರ ಮೂಲ್ಯ, ಕೋಶಾಧಿಕಾರಿ ಭಾರತಿ ಅರ್ಕ್ಯಾನ್ ಮತ್ತು ನಿರ್ದೇಶಕ ಮಂಡಳಿ, ಮಾಜಿ ಕಾರ್ಯಾಧ್ಯಕ್ಷ ಎನ್. ಜಿ. ಮೂಲ್ಯ, ಅಮೂಲ್ಯ ತ್ರೈಮಾಸಿಕದ ಸಂಪಾದಕ ಶಂಕರ್ ವೈ ಮೂಲ್ಯ ಕುಲಶೇಖರ ವೀರನಾರಾಯಣ ದೇವಸ್ಥಾನದ ಸರ್ವ ಪದಾಧಿಕಾರಿಗಳು, ಸದಸ್ಯರು ಮತ್ತು ನಗರದ ವಿವಿಧ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ.

-ವರದಿ: ಈಶ್ವರ್ ಅಲಿ