ಉಜಿರೆ: ಶ್ರೀ ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಹಾಗೂ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು ಹಾಗೂ ಕುಟುಂಬವರ್ಗದವರ ಆಶೀರ್ವಾದ ಮತ್ತು ಶುಭ ಹಾರೈಕೆಗಳೊಂದಿಗೆ ಪಾದಯಾತ್ರೆ ಸುಗಮವಾಗಿ ಅನನ್ಯ ಅನುಭವ ನೀಡಿದೆ ಎಂದು ಅಂಕಣಕಾರ ಅಹಮ್ಮದ್ ಉಲ್ಲಾ ಹೇಳಿದರು.

ಅವರು ಮಂಗಳವಾರ ಪಾದಯಾತ್ರೆಯಲ್ಲಿ ಧರ್ಮಸ್ಥಳ ತಲುಪಿದಾಗ ಅವರನ್ನು ಪ್ರವೇಶದ್ವಾರದಿಂದ ಸ್ವಾಗತಿಸಿ ಭವ್ಯ ಮೆರವಣಿಗೆಯಲ್ಲಿ ಬೀಡಿಗೆ ಕರೆತರಲಾಯಿತು. ಬಳಿಕ ಅವರು ಹೆಗ್ಗಡೆಯವರೊಂದಿಗೆ ಪಾದಯಾತ್ರೆ ಬಗ್ಯೆ ತನ್ನ ಅನುಭವ ಹಂಚಿ ಕೊಂಡರು.


ದಾರಿಯುದ್ಧಕ್ಕೂ ಹೆಗ್ಗಡೆಯವರು ಹಾಗೂ ಪವಿತ್ರ ಕ್ಷೇತ್ರ ಧರ್ಮಸ್ಥಳದ ಬಗ್ಯೆ ಜನರ ಶ್ರದ್ಧಾ-ಭಕ್ತಿ ಹಾಗೂ ಅಭಿಮಾನದ ಮಾತುಗಳನ್ನು ಆಲಿಸಿ ಸಂತಸವಾಯಿತು. ಇಡೀ ರಾಜ್ಯದ ಜನತೆ ಧರ್ಮಸ್ಥಳದ ಅಭಿಮಾನಿಗಳು ಹಾಗೂ ಭಕ್ತರು. ನಾವೆಲ್ಲರೂ ನಿಮ್ಮ ಪವಿತ್ರ ಕ್ಷೇತ್ರದ ಫಲಾನುಭವಿಗಳು ಎಂದು ಸಂತಸ ವ್ಯಕ್ತಪಡಿಸಿದರು.