ಪುತ್ತೂರು:- ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದ ಕೋವಿಡ್ ಸೋಂಕಿತ 62 ವರ್ಷದ ಮಹಿಳೆ ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಪುತ್ತೂರು ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಸುಳ್ಯ ಬೆಳ್ಳಾರೆ ನೆಟ್ಟಾರು ನಿವಾಸಿ ಮಹಿಳೆಯನ್ನು ಜು.14ರ ಮಧ್ಯಾಹ್ನ ಪುತ್ತೂರು ಸರಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮಹಿಳೆ ಬಿಪಿ, ಶುಗರ್, ಲಂಗ್ಸ್ ಸಮಸ್ಯೆಯಿಂದ ಬಳಲುತ್ತಿದ್ದರು.ಈ ವೇಳೆ ಗಂಟಲು ದ್ರವ ಪರೀಕ್ಷೆಗೆ ಒಳಪಡಿಸಲಾಗಿದ್ದು ವರದಿಯಲ್ಲಿ ಸೋಂಕು ದೃಢ ಪಟ್ಟಿರುವುದು ಬೆಳಕಿಗೆ ಬಂದಿದೆ. ತೀರಾ ಗಂಭೀರ ಸ್ಥಿತಿಯಲ್ಲಿದ್ದ ಮಹಿಳೆ ಬುಧವಾರ ಮೃತಪಟ್ಟಿದ್ದಾರೆ .