ಬೆಂಗಳೂರು: ನಟ ಧ್ರುವ ಸರ್ಜಾ ಹಾಗೂ ಅವರ ಪತ್ನಿ ಪ್ರೇರಣಾಗೆ ಕೊರೊನಾ ಸೋಂಕು ತಗುಲಿರೋದು ದೃಢವಾಗಿದೆ. ಈ ಕುರಿತು ಸ್ವತಃ ಧ್ರುವ ಸರ್ಜಾ ಟ್ವೀಟ್ ಮಾಡಿ ಮಾಹಿತಿ ನೀಡಿದ್ದಾರೆ.
ನನಗೆ ಹಾಗೂ ನನ್ನ ಪತ್ನಿಗೆ ಕೊರೊನಾ ಪಾಸಿಟಿವ್ ಬಂದಿದೆ. ರೋಗಲಕ್ಷಣ ಕಡಿಮೆ ಇದ್ದು, ನಾವು ಆಸ್ಪತ್ರೆಗೆ ದಾಖಲಾಗಲು ನಿರ್ಧರಿಸಿದ್ದೇವೆ. ಬೇಗ ಗುಣಮುಖರಾಗಲಿದ್ದೇವೆ ಅನ್ನೋ ನಂಬಿಕೆ ಇದೆ. ನಮ್ಮೊಂದಿಗೆ ಹತ್ತಿರದ ಸಂಪರ್ಕಕ್ಕೆ ಬಂದವರೂ ಕೂಡ ಕೊರೊನಾ ಟೆಸ್ಟ್ ಮಾಡಿಸಿಕೊಳ್ಳಿ. ಸುರಕ್ಷಿತವಾಗಿರಿ ಎಂದು ಧ್ರುವ ಟ್ವೀಟ್ ಮಾಡಿದ್ದಾರೆ.