ಬಂಟ್ವಾಳ: ಕೇಂದ್ರ ಸರಕಾರವು ತಮ್ಮ ವೈಫಲ್ಯವನ್ನು ಮರೆಮಾಚುವ ನಿಟ್ಟಿನಲ್ಲಿ ಎನ್ ಆರ್ ಸಿ, ಸಿಎಎಯಂತ  ಕರಾಳ ಕಾಯ್ದೆಯನ್ನು ಜಾರಿಗೆ ತಂದಿದ್ದು,ಇದರ ವಿರುದ್ದ ಜಾತ್ಯಾತೀತ ಮನೋಭಾವನೆಯ ಸಂಘಟನೆಗಳು ಒಟ್ಟು ಸೇರಿ ಅಹಿಂಸಾತ್ಮಕ ಚಳುವಳಿಯ ಮೂಲಕ ಹೋರಾಟ ಮಾಡಬೇಕಾದ ಅಗತ್ಯವಿದೆ ಎಂದು ಮಾಜಿ ಸಚಿವ ರಮಾನಾಥ ರೈ ಹೇಳಿದರು.  ಸಿಎಎ,ಎನ್ ಆರ್ ಸಿ ಕಾಯ್ದೆಯನ್ನು ವಿರೋಧಿಸಿ ಸೋಮವಾರ ಸಂಜೆ   ಬಿ.ಸಿ.ರೋಡ್ ವೃತ್ತದಿಂದ ರೈಲ್ವೆ ನಿಲ್ದಾಣಕ್ಕೆ ತರೆಳುವ ರಸ್ತೆಯಲ್ಲಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು.  ಇತ್ತೀಚಿಗಿನ ದಿನಗಳಲ್ಲಿ ದೇಶ,ಧರ್ಮ,ದೇವರ ಹೆಸರಿನಲ್ಲಿ ದೇಶವನ್ನು ವಿಭಜಿಸುವಂತ ಹೊಸ ಸಮಸ್ಯೆಯನ್ನು ಹುಟ್ಟುಹಾಕುವ ಕಾರ್ಯ ನಡೆಯುತ್ತಿದ್ದು ,ಇದಕ್ಕೆ ಅವಕಾಶ ನೀಡಬಾರುದು ಎಂದ ಅವರು ಇಂತಹ ಸಂದರ್ಭಗಳಲ್ಲಿ ಪ್ರತಿಭಟನಾಕಾರರು ಯಾವುದೇ ಕಾರಣಕ್ಕು ತಾಳ್ಮೆಯನ್ನು ಕಳೆದುಕೊಳ್ಳದೆ ಹೋರಾಟ ನಡೆಸಿದರೆ ಅಂತಿಮವಾಗಿ ಜಯ ನಮ್ಮದಾಗಲಿದೆ ಎಂದರು.  ಜೆಡಿಎಸ್ ಮುಖಂಡ ಎಂ.ಬಿ.ಸದಾಶಿವ ಮಾತನಾಡಿ, ಇದು ಸಂವಿಧಾನ ಉಳಿಸುವ ಹೋರಾಟವಾಗಿದ್ದು, ಹಿಂದೂ ಎಂಬ ಅಭಿಮಾನದಿಂದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದೇನೆ. ಶಾಂತಿ ಸಂಯಮದ ನಡವಳಿಕೆ ಇದ್ದಾಗ ಮಾತ್ರ ಪ್ರತಿಭಟನೆಗೆ ಶಕ್ತಿ ಬರುತ್ತದೆ ಎಂದರು.  ಅಧ್ಯಕ್ಷತೆ ವಹಿಸಿದ್ದ ಹೋರಾಟ ಸಮಿತಿಯ ತಾಲೂಕು ಅಧ್ಯಕ್ಷ ಮುಹಮ್ಮದ್ ಶಾಫಿ ಅವರು ಪ್ರಸ್ತಾವನೆಗೈದು ಮಾತನಾಡಿದರು.

ಧಾರ್ಮಿಕ ಮುಖಂಡ ಅಸಯ್ಯದ್ ಯಹ್ಯಾ ತಂಙಳ್ ಅವರು ದುವಾ ನೆರವೇರಿಸಿದರು.ಹಿರಿಯ ಪತ್ರಕರ್ತ ಶಶಿಧರ್ ಭಟ್ ಬೆಂಗಳೂರು, ಅಶ್ರಫ್ ಫೈಝಿ ಕೊಡಗು, ಪ್ರಮುಖರಾದ  ಅನೀಸ್ ಕೌಸರಿ, ಮುಹಮ್ಮದ್ ಕುಂಞಿ, ಹನೀಫ್ ಕಾಟಿಪಳ್ಳ, ಖಲೀಲ್ ತಲಪಾಡಿ, ಅಥಾವುಲ್ಲಾ ಜೋಕಟ್ಟೆ, ಹನೀಫ್ ಖಾನ್, ಪಿ.ಎ.ರಹೀಂ ಅವರು ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ಮಾತನಾಡಿದರು.

ಈ ಸಂದರ್ಭದಲ್ಲಿ ಝಾಫರ್ ಸ್ವಾದಿಕ್ ಫೈಝಿ, ರಿಯಾಝ್ ಫರಂಗಿಪೇಟೆ, ಜಿಪಂ ಸದಸ್ಯರಾದ ಬಿ.ಪದ್ಮಶೇಖರ್ ಜೈನ್, ಚಂದ್ರಪ್ರಕಾಶ್ ಶೆಟ್ಟಿ ತುಂಬೆ, ಬಂಟ್ವಾಳ ತಾಪಂ ಉಪಾಧ್ಯಕ್ಷ ಅಬ್ಬಾಸ್ ಅಲಿ, ಮುನೀಶ್ ಅಲಿ, ಹಾರೂನ್ ರಶೀದ್ , ನಾಸಿರ್ ಸಜೀಪ,      ಇಕ್ಬಾಲ್  ಗೂಡಿನಬಳಿ,  ಸಾಹುಲ್ ಹಮೀದ್, ಉಮರ್ ಫಾರೂಕ್, ರಮ್ಲಾನ್ ಮಾರಿಪಳ್ಳ ,ಮೊದಲಾದವರು ಸೇರಿದಂತೆ ವಿವಿಧ ಸಂಘಟನೆಗಳ ಪ್ರಮುಖರು ಪಾಲ್ಗೊಂಡಿದ್ದರು. ಕೆ.ಎಚ್.ಅಬೂಬಕ್ಕರ್ ವಂದಿಸಿದರು. ಅಕ್ಬರ್ ಆಲಿ ಪೊನ್ನೋಡಿ ಕಾರ್ಯಕ್ರಮ ನಿರೂಪಿಸಿದರು.

ಮನವಿ:ಬಳಿಕ ಬಂಟ್ವಾಳ ತಹಶೀಲ್ದಾರ್ ರಶ್ಮಿ ಎಸ್.ಆರ್ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನೆಯ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮೀಪ್ರಸಾದ್ ನೇತೃತ್ವದಲ್ಲಿ ಬಿಗಿಬಂದೋಬಸ್ತ್  ಏರ್ಪಡಿಸಲಾಗಿತ್ತು. ಬಿ.ಸಿ.ರೋಡಿನಿಂದ ಗೂಡಿನಬಳಿಗೆ ತೆರಳುವ ಈರಸ್ತೆಯಲ್ಲಿವಾಹನ  ಸಂಚಾರ ಸ್ಥಗಿತಗೊಳಿಸಿ ಪ್ರತಿಭಟನೆಗೆ ಅವಕಾಶ ಕಲ್ಪಿಸಲಾಗಿತ್ತು.