ಬಂಟ್ವಾಳ : ಸರಿಯಾಗಿ ಪಾಂಡವರಕಲ್ಲು ಸಮುದಾಯ ಭವನದಲ್ಲಿ ಬಡಗಕಜೆಕಾರು ಪಂಚಾಯತ್ ವಲಯದ “ಪಂಚಾಯತ್ ಮಿಲನ 2019” ಕಾರ್ಯಕ್ರಮ ಮಾಜಿ ಸಚಿವ ಬಿ ರಮಾನಾಥ ರೈ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಕಾರ್ಯಕರ್ತರು ಪಕ್ಷ ಸಂಘಟನೆಯಲ್ಲಿ ಹಾಗೂ ಬಲವರ್ದನೆಯಲ್ಲಿ ಹೆಚ್ಚು ಆಸಕ್ತಿ ವಹಿಸಿ ಪಕ್ಷದ ಮೇಲೆ ಪ್ರೀತಿಯಿಟ್ಟು ಯಾವುದೇ ಬಿನ್ನಾಭಿಪ್ರಾಯವಿಲ್ಲದೆ ಮುಂಬರುವ ಪಂಚಾಯತ್ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿದರು. ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಬೇಬಿ ಕುಂದರ್ ಕಾರ್ಯಕರ್ತರಿಂದ ಸಲಹೆ ಸೂಚನೆಗಳನ್ನು ಸ್ವೀಕರಿಸಿ ಪಕ್ಷದಲ್ಲಿ ಶಿಸ್ತಿಗೆ ಹೆಚ್ಚು ಪ್ರಾಮುಖ್ಯತೆಯನ್ನು ಕೊಟ್ಟು ಒಗ್ಗಟ್ಟಿನಿಂದ್ಲ ಪಕ್ಷದ ಬಲವರ್ದನೆಗೆ ಒತ್ತು ನೀಡುವಂತೆ ಆದೇಶಿಸಿದರು. ಮುಂದಿನ ಅವಧಿಗೆ ವಲಯ ಹಾಗೂ ಬೂತ್ ಸಮಿತಿಯನ್ನು ಪುನರ್ ರಚಿಸಿ ನೂತನ ಪಂಚಾಯತ್ ಸಮಿತಿ ಅಧ್ಯಕ್ಷರನ್ನಾಗಿ ಜಯ ಬಂಗೇರಾ ಅವರನ್ನು ಆಯ್ಕೆ ಮಾಡಲಾಯಿತು. ಜಿಲ್ಲಾ ಪಂಚಾಯತ್ ಸದಸ್ಯರಾದ ಪದ್ಮಶೇಖರ್ ಜೈನ್, ಮಾಜಿ ಅಕ್ರಮ ಸಕ್ರಮ ಅಧ್ಯಕ್ಷರಾದ ಮಾಯಿಲಪ್ಪ ಸಾಲ್ಯನ್, ಪುರಸಭಾ ಸದಸ್ಯರಾದ ಜನಾರ್ಧನ ಚೆಂಡ್ತಿಮಾರ್, ಬ್ಲಾಕ್ ಕಾಂಗ್ರೆಸ್ ಉಪಾದ್ಯಕ್ಷರಾದ ಜಗದೀಶ್ ಕೊಯಿಲ, ಬೂತ್ ಅದ್ಯಕ್ಷರಾದ ಡೀಕಯ ಪೂಜಾರಿ, ವಿಶ್ವನಾಥ ಪೂಜಾರಿ, ಇಬ್ರಾಹಿಂ, ಯಶವಂತ್, ಪಂಚಾಯತ್ ಸದಸ್ಯರಾದ ಸುರೇಶ್, ವಿನೋದ, ಮುಖಂಡರಾದ ಅಬ್ದುಲ್ಲಾ ಸ್ ಸುರೇಶ್ ಪೂಜಾರಿ ಹಾಗೂ ಕಾಂಗ್ರೆಸ್ ಮುಖಂಡರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು. ಮುಖಂಡರಾದ ಮೋನಪ್ಪ ಪೂಜಾರಿ ಕಡೆಂತ್ಯಾರು ಮಾಜಿ ಸಚಿವ ಬಿ ರಮಾನಥ ರೈ ಅವರ ಅಭಿವೃದ್ದಿ ಕಾರ್ಯಕ್ರಮದ ಪಟ್ಟಿ ಮಂಡಿಸಿದರು. ಮಾಜಿ ತಾಲೂಕು ಪಂಚಾಯತ್ ಅದ್ಯಕ್ಷ ಕೆ.ಎ ಸತೀಶ್ ಚಂದ್ರ ಸ್ವಾಗತಿಸಿದರು ಮಾಜಿ ಪಂಚಾಯತ್ ಅದ್ಯಕ್ಷ ಡೀಕಯ ಬಂಗೇರ ವಂದನಾರ್ಪಣೆಗೈದರು .