ಮಂಗಳೂರು : ಕರ್ನಾಟಕ ರಾಜ್ಯದ ಕಾಂಗ್ರೆಸ್ ಹಾಗೂ ಜೆ.ಡಿ.ಎಸ್ ಸಮ್ಮಿಶ್ರ ಸರ್ಕಾರದ ಉಳಿವಿಗಾಗಿ ಎಲ್ಲಾ ಶಾಸಕರುಗಳು ವಿಧಾನಮಂಡಲದ ಅಧಿವೇಶನದಲ್ಲಿ ಪಾಲ್ಗೊಂಡು ಸರ್ಕಾರದ ಪರವಾಗಿ ಮತ ಚಲಾಯಿಸುವರೇ, ಹಾಗೂ ಸುಪ್ರೀಂ ಕೋರ್ಟ್‍ನ ಆದೇಶವೂ ಒಳ್ಳೆಯ ರೀತಿಯಲ್ಲಿ ನಮ್ಮ ಪರವಾಗಿ ಬರಲಿ ಮತ್ತು ನಗರದಲ್ಲಿ ಇದೀಗ ಹರಡಿರುವ ಮಾರಿ ಜ್ವರವಾದ ಡೆಂಗ್ಯೂ ಜ್ವರದಿಂದ ಹಲವಾರು ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಲ್ಲದೇ ಕೆಲವರು ಮರಣ ಹೊಂದಿದ್ದಾರೆ. ಈ ಬಗ್ಗೆ ಎಲ್ಲರಿಗೂ ಆರೋಗ್ಯ ದೊರೆಯಲಿ, ಈ ಮಾರಿ ಡೆಂಗ್ಯೂ ಜ್ವರವು ಹೋಗಲಿ ಎಂದು ನಗರದ ಶರವು  ಮಹಾಗಣಪತಿ ದೇವಸ್ಥಾನ, ಉಳ್ಳಾಲದ ಸೈಯದ್ ಮದನಿ ದರ್ಗಾ ಮತ್ತು ಬಿಕರ್ನಕಟ್ಟೆ  ಬಾಲ ಯೇಸು ದೇವಾಲಯದಲ್ಲಿ  ಐವನ್ ಡಿ’ಸೋಜಾ ಅಭಿಮಾನಿ ಬಳಗದಿಂದ ವಿಶೇಷವಾಗಿ ಪ್ರಾರ್ಥನೆಯನ್ನು ಸಲ್ಲಿಸಲಾಯಿತು.


ಈ ಸಂದರ್ಭದಲ್ಲಿ ಮಾಜಿ ಮೇಯರ್ ಎಮ್.ಶಶಿಧರ್ ಹೆಗ್ಡೆ, ಮಾಜಿ ಕಾರ್ಪೋರೇಟರ್‍ಗಳಾದ ಜೆ. ನಾಗೇಂದ್ರ ಕುಮಾರ್, ಎಮ್.ಪಿ ಮನುರಾಜ್, ಅಪ್ಪಿ, ಕವಿತಾ ವಾಸು, ಕೇಶವ ಮರೋಳಿ, ಬಿ.ಪ್ರಕಾಶ್ ಹಾಗೂ ಅಭಿಮಾನಿಗಳಾದ ನವಾಜ್ ಮಹಾಕಾಳಿ ಪಡ್ಪು, ಶೈಲೇಶ್ ಭಂಡಾರಿ  ಜಪ್ಪಿನಮೊಗರು, ಕೆ.ಸುರೇಶ್ ಶೆಟ್ಟಿ ತಂದೊಳಿಗೆ, ಅನಿಲ್ ಥೋರಸ್ ಜಪ್ಪು, ಸಂಜೀವ ಕೋಟ್ಯಾನ್ ಪಾಂಡೇಶ್ವರ, ನಝೀರ್ ಬಜಾಲ್, ಉಮೇಶ್ ಕೋಟ್ಯಾನ್ ದೇರೆಬೈಲ್, ಯಶವಂತ ಶೆಟ್ಟಿ ಬಿಜೈ, ಸತೀಶ್ ಪೆಂಗಾಲ್ ಬೋಳೂರು, ವಲೇರಿಯನ್, ಬ್ಯಾಪ್ಟಿಸ್ಟ್ ಜೀವನ್ ಬಿಕರ್ನಕಟ್ಟೆ, ಆಲ್ವಿನ್, ಪೀಟರ್ ಹ್ಯಾರಿಯಂ, ಕೇಶವ ಪಡೀಲ್, ವಿಜೇಶ್ ಜಪ್ಪಿನಮೊಗರು, ಲ್ಯಾನ್ಸಿ ಮತ್ತಿತರರು ಪ್ರಾರ್ಥನೆಯಲ್ಲಿ ಭಾಗವಹಿಸಿದ್ದರು.