ಬಂಟ್ವಾಳ : ಬಂಟ್ವಾಳ ತಾಲೂಕು ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಬಂಟ್ವಾಳದಲ್ಲಿ 1963 ರಿಂದ ಸೇವೆ ಸಲ್ಲಿಸಿದ ಅಧ್ಯಕ್ಷರುಗಳ ಭಾವಚಿತ್ರಗಳನ್ನು ಅನಾವರಣಗೊಳಿಸುವ ಕಾರಕ್ರಮವು ಬ್ಯಾಂಕಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. ಭಾವಚಿತ್ರ ಅನಾವರಣವನ್ನು ಬ್ಯಾಂಕಿನ ಮಾಜಿ ಅಧ್ಯಕ್ಷರೂ, ಕರ್ನಾಟಕ ರಾಜ್ಯದ ಮಾಜಿ ಸಚಿವರು ಆದ  ಬಿ.ರಮಾನಾಥ ರೈ ನೇರವೇರಿಸಿ ಮಾತನಾಡುತ್ತಾ ಬಂಟ್ವಾಳ ಭೂ ಅಭಿವೃದ್ಧಿ ಬ್ಯಾಂಕ್ ಜಿಲ್ಲಾ ಮಟ್ಟದಲ್ಲಿ ವಸೂಲಾತಿಯಲ್ಲಿ ಪ್ರಥಮ ಸ್ಥಾನ ಪಡೆದು ಉತ್ತಮ ಸಾಧನೆಗೈದುದನ್ನು ಶ್ಲಾಘಿಸಿದರು. ರಾಜ್ಯದ 177 ಪಿಎಲ್‌ಡಿ ಬ್ಯಾಂಕ್‌ಗಳಲ್ಲಿ ಉಭಯ ಜಿಲ್ಲೆಯ ಎಲ್ಲಾ ಪಿಎಲ್‌ಡಿ ಬ್ಯಾಂಕ್‌ಗಳು ಉತ್ತಮ ವಸೂಲಾತಿ ಸಾಧನೆಗೈದಿದ್ದು ರೈತರಿಗೆ ಸಕಾಲದಲ್ಲಿ ಸಾಲ ನೀಡಿ ಅವರ ಅಭಿವೃದ್ಧಿಯಲ್ಲಿ ಮಹತ್ವದ ಪಾತ್ರವಹಿಸಿ ಕಾರನಿರ್ವಹಿಸುತ್ತಿರುವುದು ಸಂತೋಷದ ವಿಚಾರ ಎಂದರು.

ಆರಂಭದಲ್ಲಿ ಬ್ಯಾಂಕಿನ ಅಧ್ಯಕ್ಷರಾದ ಸುದರ್ಶನ್ ಜೈನ್ ಸ್ವಾಗತಿಸಿ ಬ್ಯಾಂಕು ನಡೆದು ಬಂದ ದಾರಿ ಹಾಗೂ ಬ್ಯಾಂಕಿನ ಅಭಿವೃದ್ಧಿ ಬಗ್ಗೆ ಸಂಕ್ಷಿಪ್ತವಾಗಿ ವಿವರಿಸಿದರು. ಈಸಮಾರಂಭದಲ್ಲಿ ಬ್ಯಾಂಕಿನ ಮಾಜಿ ಅಧ್ಯಕ್ಷರುಗಳಾದ ಜಿನರಾಜ ಅರಿಗ, ವೆಂಕಪ್ಪ ಕಾಜವ, ಬ್ಯಾಂಕಿನ ಉಪಾಧ್ಯಕ್ಷರಾದ  ಸಂಜೀವ ಪೂಜಾರಿ, ನಿರ್ದೇಶಕರುಗಳಾದ ಹೊನ್ನಪ್ಪ ನಾಯ್ಕ, ಮುರಳೀಧರ ಶೆಟ್ಟಿ, ಚಂದ್ರಶೇಖರ ಶೆಟ್ಟಿ, ಪರಮೇಶ್ವರ ಎಂ, ಚಂದ್ರಹಾಸ ಕರ್ಕೇರ, ಸುಜಾತ,  ಪುಷ್ಪಾವತಿ, ಕಸ್ಕಾರ್ಡ್ ಬ್ಯಾಂಕಿನ ಜಿಲ್ಲಾ ವ್ಯವಸ್ಥಾಪಕರಾದ  ಸುರೇಶ್, ಬ್ಯಾಂಕಿನ ವ್ಯವಸ್ಥಾಪಕ ಶೇಖರ ಎಂ, ವರ್ತಕರ ಬ್ಯಾಂಕಿನ ಅಧ್ಯಕ್ಷರಾದ ಸುಭಾಶ್ಚಂದ್ರ ಜೈನ್, ಪ್ರಕಾಶ್ ಬಿ.ಶೆಟ್ಟಿ,  ಪದ್ಮನಾಭ ನರಿಗಾನ,  ಪ್ರಶಾಂತ್ ಕಾಜವ, ಮುಂತಾದವರು ಉಪಸ್ಥಿತರಿದ್ದರು. ಕೊನೆಯಲ್ಲಿ ಬ್ಯಾಂಕಿನ ನಿರ್ದೇಶಕರಾದ  ಚಂದ್ರಪ್ರಕಾಶ್ ಶೆಟ್ಟಿಯವರು ವಂದಿಸಿದರು.