ದೇಶದ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶೌಚಾಲಯ ಗುಂಡಿಗಳ ಸಮಸ್ಯೆಯಾಗಿದ್ದು ಬಯೋ ಡೈಜೆಸ್ಟರ್ ವಿಧಾನದ ಶೌಚಾಗುಂಡಿ ಬಳಕೆ ಪರಿಸರ ಸ್ನೇಹಿಯಾಗಿದೆ.

ಬಯೋ ಡೈಜೆಸ್ಟರ್ ಟ್ಯಾಂಕ್ ನೀರಿನಲ್ಲಿರುವ ಮಲದ ಅಂಶವನ್ನು ಸಂಪೂರ್ಣವಾಗಿ ತೆಗೆದು ಹಾಕಿ ನೀರನ್ನು ಮರು ಬಳಕೆಗೆ ಅರ್ಹವಾಗಿರುವುದರ ಜತೆಗೆ ಬಯೋಗ್ಯಾಸ್ ಕೂಡ ಉತ್ಪಾದಿಸುತ್ತದೆ. ಈ ತಂತ್ರಜ್ಞಾನವು ಅನೋರೋಬಿಕ್ ಮೈಕ್ರೊಬಿಯಲ್ ಇನೊಕ್ಯುಲಂ ಬಳಸಿ ಮಾನವ ಮಲವನ್ನು ಬಳಸಿ ನೀರಿನ ಮರುಬಳಕೆಗೆ ಸಹಕರಿಸುತ್ತದೆ. ಈ ನೀರನ್ನು ಕೃಷಿ ಮತ್ತು ತೋಟಗಾರಿಕಾ ಉದ್ದೇಶಗಳಿಗೆ ಬಳಸಬಹುದಾಗಿದೆ. ಮಾನವಶಕ್ತಿ ಬಳಸಿ ಶೌಚಾ ಗುಂಡಿ ಶುಚಿಗೊಳಿಸುವ ಅಗತ್ಯವಿರುವುದಿಲ್ಲ. ಸದ್ಯ ಈ ತಂತ್ರಜ್ಞಾನವನ್ನು ಭಾರತೀಯ ರೈಲ್ವೆ ಬೋಗಿಗಳಲ್ಲಿ ಮತ್ತು ಸೇನಾ ಪಡೆಗಳು

ಬಳಸುತ್ತಿವೆ. ಶೌಚಾಲಯ ಗುಂಡಿಗೆ ಹೋಲಿಸಿದಾಗ ಬಯೋ ಡೈಜೆಸ್ಟರ್ ಟ್ಯಾಂಕಿಗೆ ಶೇ.30 ರಷ್ಟು ಸ್ಥಳ ಸಾಕಾಗುತ್ತದೆ. ಮನೆಗಳಲ್ಲಿ ವಸತಿ ಸಮುಚ್ಛಯಗಳಲ್ಲಿ, ಆಸ್ಪತ್ರೆಗಳಲ್ಲಿ ಮತ್ತು ಶಾಲೆಗಳಲ್ಲಿ ಈ ಬಯೋ ಡೈಜೆಸ್ಟರ್ ತಂತ್ರಜ್ಞಾನವನ್ನು ಬಳಸಬಹುದಾಗಿದೆ. 100 ಮಂದಿಗೆ 3000 ಘನ ಲೀಟರ್ ಸಾಮರ್ಥ್ಯದ ಟ್ಯಾಂಕ ಬೇಕಾಗುತ್ತದೆ. ಟ್ಯಾಂಕ್ ಸಾಮಾರ್ಥ್ಯ ಬೇಡಿಕೆ ಪ್ರಕಾರ ಬದಲಿಸಬಹುದು. ಸಾಧಾರಣ ಮಟ್ಟದ ಟ್ಯಾಂಕ್‍ಗೆ ರೂ. 15,000/- ವೆಚ್ಚವಾಗಬಹುದು. ಈ ಟ್ಯಾಂಕ್‍ಗಳನ್ನು ಸ್ಟೀಲ್ ಸ್ಟೇನ್‍ಲೆಸ್ ಸ್ಟೀಲ್ ಫೈಬರ್ ಅಳವಡಿಸಿದ ಪ್ಲಾಸ್ಟಿಕ್ ಇತ್ಯಾದಿಯಿಂದ ನಿರ್ಮಿಸಲಾಗಿರುತ್ತದೆ.