ಶ್ರೀ ಜೈನ ಮಠ ಬಳಿಯ ರಮಾರಾಣಿ ಶೋಧ ಸಂಸ್ಥಾನ ದ ನೂತನ ಸಭಾ ಭವನ ದಲ್ಲಿ ಈ ದಿನ 08-7-2020 ರಂದು ಜಗದ್ಗುರು ಡಾ |ಸ್ವಸ್ತಿಶ್ರೀ ಚಾರುಕೀರ್ತಿ ಭಟ್ಟಾರಕ ಪಂಡಿತಾಚಾರ್ಯವರ್ಯ ಮಹಾ ಸ್ವಾಮೀಜಿ ಗಳವರ ಅಧ್ಯಕ್ಷ ತೆ ಯಲ್ಲಿ ಮೂಡುಬಿದಿರೆ ಠಾಣಾಧಿಕಾರಿ  ದಿನೇಶ್ ಕುಮಾರ್ ರವರ ಉಪಸ್ಥಿತಿ ಯಲ್ಲಿ ಬಸದಿ, ದೇವಸ್ಥಾನ, ಶ್ರದ್ದಾ ಕೇಂದ್ರ ಗಳ ಬಗ್ಗೆ ಶಾಶ್ವತ ವ್ಯೆವಸ್ಥೆ ಮಾಡುದಕ್ಕಾಗಿ ಮಹಾ ಸಭೆ 08-7-20 ರಂದು ಸಂಜೆ 5.00 ಕ್ಕೆ ಆರಂಭ ಗೊಂಡಿತು ಯಂ ಬಾಹುಬಲಿ ಪ್ರಸಾದ್ ಯಂ ಸಿ ಸಿ ಬ್ಯಾಂಕ್ ಅಧ್ಯಕ್ಷ ಸ್ವಾಗತಿಸಿ ದರು .

ಸುಬ್ರಮಣ್ಯ ಭಟ್ ಮಹಾಲಿಂಗೇಶ್ವರ ದೇವಸ್ಥಾನ ಪ್ರಾರ್ಥನೆ ಮಾಡಿದರು. ಸಭೆ ಯಲ್ಲಿ ಶ್ರೀ ಜೈನ ಮಠ ದ ಸ್ವಾಮೀಜಿ ಗಳವರು ತಯಾರಿಸಿದ 20 ಭದ್ರತಾ ನಿರ್ಣಯ ಗಳನ್ನು ಓದಿ ಸರ್ವರ ಸಹಕಾರ ಕೊರಲಾಯಿತು. ಶ್ರೀ ಗಳವರು ಆಶೀರ್ವಾದ ನೀಡಿ ನಾವು ಒಂದು ಕುಟುಂಬ ದಂತೆ ನಮ್ಮ ಶ್ರದ್ದಾ ಕೇಂದ್ರ ಗಳನ್ನು ಒಗ್ಗಟ್ಟಿನಲ್ಲಿ ರಕ್ಷಿಸಲು ಪಣ ತೊಡೋಣ ಇದಕ್ಕೆ ಸರ್ವರ ಸಹಕಾರ ಕೋರಿದರು ಹಾಗೂ ಸಭೆ ಯಲ್ಲಿ ಉಪಸ್ಥಿತಿ ನೀಡಿ ರಕ್ಷಣೆ ಬಗ್ಗೆ ಸಮಸ್ತ ರಿಗೆ ಮನವರಿಕೆ ಮಾಡಿದ ಶ್ರೀ ದಿನೇಶ್ ಠಾಣಾಧಿಕಾರಿ ಗಳನ್ನು ಶಾಲು ಹಾಕಿ ಶ್ರೀ ಫಲ ಮಂತ್ರಾಕ್ಷತೆ ನೀಡಿ ಹರಸಿ ಆಶೀರ್ವದಿಸಿದರು 

 ಸಭೆ ಯಲ್ಲಿ ಹಾಜರಿದ್ದ ಕೆ. ಪಿ  ಜಗದೀಶ್ ಅಧಿಕಾರಿ, ಉಮೇಶ್ ಪೈ, ವೆಂಕಟ ರಮಣ ದೇವಸ್ಥಾನ,  ಶ್ರೀ ಯೆನ್ ಜಯಕುಮಾರ್ ಆಚಾರ್ಯ,ಭಾಸ್ಕರ್ ಆಚಾರ್ಯ, ಶಿವರಾಮ್ ಆಚಾರ್ಯ ಉಳಿಯ, ಮುಕ್ತೇಸರರು ಗುರುಮಠ ಕಾಳಿಕಾಂಬಾ ದೇವಸ್ಥಾನ,  ಪಟ್ಣ ಶೆಟ್ಟಿ ಸುದೇಶ್ ಕುಮಾರ್, ಬೆಟ್ಕೇರಿ ದಿನೇಶ್ ಕುಮಾರ್, ರಾಘವೇಂದ್ರ ಕಾಮತ್, ಶ್ರೀ ಶಿವಾನಂದ ಪ್ರಭು, ನಾಗವರ್ಮ, ಪ್ರವೀಣ್ ಕುಮಾರ್, ಶ್ವೇತಾ ಪುರಸಭೆ ಸದಸ್ಯೆ,  ಮೂಡುಬಿದಿರೆ ಚರ್ಚೆ ಯಲ್ಲಿ ಪಾಲ್ಗೊಂಡರು ಇವತ್ತು ಚರ್ಚಿಸಿದ ನಿರ್ಣಯ ವನ್ನು ಉಮೇಶ್ ಪೈ ಶಿವಾನಂದ ಪ್ರಭು, ಜಯಕಾರ ಆಚಾರ್ಯ ಅನುಮೋದಿಸಿ ದೇವಾಲಯದ ಇತರ ಸದಸ್ಯರಿಗೂ ಮನವರಿಕೆ ಮಾಡಲು ತಿಳಿಸ ಲಾಯಿತು.

ಭದ್ರತೆ ಯ ಬಗ್ಗೆ ಕೈಗೊಳ್ಳಬೇಕಾ ದ ಕ್ರಮ ಬಸದಿ /ದೇವಾಲಯದ ಸಂಪೂರ್ಣ ಮಾಹಿತಿ ಉಳ್ಳ ಕೈಪಿಡಿ ತಯಾರಿ, ದಾರಿ ಫಲಕ ಸರಿಯಾಗಿ ಮಾಹಿತಿ ಸಿಗುವಂತೆ ವ್ಯೆವಸ್ಥೆ ಮಾಡುವುದು ,ಭದ್ರತಾ ಶಿಬ್ಬಂದಿ ನೇಮಕ ,ಆಧಾರ್ ಕಾರ್ಡ್, ಮೊಬೈಲ್, ವಯಸ್ಸು, ಅನುಭವ ಅರ್ಹತಾ ಪತ್ರ, ಬಸದಿ /ದೇಗುಲ ಗಳ ಶಿಬ್ಬಂದಿ ವಿವರ, ಅರ್ಚಕ ರ ಗುರುತಿನ ಪತ್ರ ,ಬಸದಿ /ದೇವಾಲಯ ಖಾಸಗಿ  ಯೆ ಧಾರ್ಮಿಕ ದತ್ತಿ ಇಲಾಖೆ, ಮುಜರಾಯಿ ಇಲಾಖೆ ಗೆ ಸಂಬಂಧ ಪಟ್ಟದ್ದೆ ಎಂದು ವರ್ಗಿಕರಿಸುವುದು, ದೇವಾಲಯದ ಸ್ಥಿರ /ಚರ ಸೊತ್ತು ಅಸ್ತಿ ಸಂಬಂದಿ ದಾಖಲೆ ಇಟ್ಟು ಕೊಳ್ಳುದು, ಬಸದಿ ದೇವಾಲಯದ ಮೂರ್ತಿ ಚಿತ್ರ, ಯಾವುದರಿಂದ ನಿರ್ಮಿಸ ಲಾಗಿದೆ ಎಂದು ಮಣ್ಣು, ಧಾತು ,ಲೋಹ,  ಚಿನ್ನ, ಬೆಳ್ಳಿ, ಮರ, ಕಲ್ಲು, ಹರಳು ಇತ್ಯಾದಿ ವರ್ಗಿಕರಿಸಿ ದ್ವಿಪ್ರತಿ ಇಟ್ಟು ಕೊಳ್ಳುವುದು ,ಸಿ ಸಿ  ಕ್ಯಾಮೆರಾ ಅಳವಡಿಸದಿದ್ದರೆ ಉತ್ತಮ ಗುಣ ಮಟ್ಟದ ಎಚ್ ಡಿ  ಮಾದರಿ ಯ ಕ್ಯಾಮೆರಾ ಅಳವಡಿಸುವುದು ,ವಯರ್ ಲೆಸ್ ಇಂಟರ್ ನೆಟ್ ಸೌಲಭ್ಯ ಅಳವಡಿಸುವುದು ಬರುವ ಹೋಗುವ ರಸ್ತೆ ಹಾಗೂ ರಕ್ಷಣೆ ಸಬಂಧ ಪಟ್ಟಂತೆ ಖಾಸಗಿ ಭಕ್ತರ ಮನೆ ಗಳಿದ್ದಲ್ಲಿ ಬಸದಿ /ದೇವಾಲಯದ ಸುತ್ತ ರಸ್ತೆ ಗೆ ಮುಖ ಮಾಡಿ ಕ್ಯಾಮೆರಾ ಅಳವಡಿಸಲು ಮನವರಿಕೆ ಮಾಡಿ ಕನಿಷ್ಠ ದಿನಾ ಒಂದು ಬಾರಿಯಾದರೊ ರೆಕಾರ್ಡ್ ಸರಿಯಾಗಿ ಆಗುತ್ತದೆ ಯಾ ಎಂದು  ಪರಿಶೀಲನೆ ಮಾಡುತ್ತಿರುವುದು, 

ರಾತ್ರಿ ಪಹರೆ ಗೆ ಸರದಿ ಯಲ್ಲಿ ಶ್ರದ್ದಾ ಕೇಂದ್ರ ರಕ್ಷಣೆ ಗೆ ಸಹಕರಿಸುವವರ ಪಟ್ಟಿ ತಯಾರಿಸುವುದು ,ಅವರ ಶಿಬ್ಬಂದಿ ವರ್ಗ ದವರಂತೆ ಎಲ್ಲಾ ಗುರುತಿನ ದಾಖಲೆ ಇಟ್ಟು ಕೊಳ್ಳುವುದು ,ರಾತ್ರಿ ಗಸ್ತು ತಿರುಗುವ ಗುಂಪು ರಚಿಸುವುದು ,ವಾಹನ ಮೂಲಕ ಗಸ್ತು ತಿರುಗಲು ಕ್ರಮ ,ವಾಹನ ಚಾಲಕ ರ ಪಟ್ಟಿ,ವಾಹನ ದಲ್ಲಿ ಗಸ್ತು ತಿರುಗುವ ರಾತ್ರಿ ಪಾಳಿಯ ಶಿಬ್ಬಂದಿ ವರ್ಗದ ಪಟ್ಟಿ ,ಸ್ವಯಂ ಸೇವಕರಾಗಿ ಸ್ವ ಆಸಕ್ತಿ ಯಿಂದ ಮುಂದೆ ಬರುವ ಕಾರ್ಯ ಕರ್ತರ ಪಟ್ಟಿ ,ರಾತ್ರಿ ಕಾವಲು ಗಾರರು, ಸಂಚಾರಿ ವಾಹನ ವೆಚ್ಚ ಕ್ಕೆ  ದಾನ ಸಹಾಯ ಮಾಡುವವರ ಪಟ್ಟಿ, ಆದುನಿಕ ಮೆಟಲ್ ಡಿಟೆಕ್ಟರ್, ತಪಾಸಣೆ ಯಂತ್ರ, ಕೋವಿಡ್ ಕೊರೋನಾ ವೈರಸ್ ಪಾಸಿಟಿವ್ ಪತ್ತೆ ಹಚ್ಚುವ ಯಂತ್ರ ಅಗತ್ಯ ಬಿದ್ದಲ್ಲಿ ಖರೀದಿ ಗೆ ಕ್ರಮ, ಜಾತ್ರೆ ವಾರ್ಷಿಕೋತ್ಸವದ ಹಾಗೂ ಸಂಕ್ರಾಂತಿ, ವಾರದ ವಿಶೇಷ ದಿನ ವಿಶೇಷ ಹಬ್ಬಗಳ ಪಟ್ಟಿ ಅದಕ್ಕನುಗುಣವಾಗಿ ಭದ್ರತಾ ವಿಚಾರ ದ ಬಗ್ಗೆ ಸಮಾಲೋಚನೆ ಸಭೆ ನಡೆದ ವಿಚಾರ ವಾಗಿ ಮೀಟಿಂಗ್ ಪುಸ್ತಕ ನಿರ್ವಹಣೆ ,ದೇವಾಲಯದ ಪರಿಸರ ಸ್ವಚ್ಛತೆ ಗೆ ಸ್ಥಾನೀಯ ಸಂಘ ಸಂಸ್ಥೆ ಗಳ ಸಹಕಾರ ಪಡೆಯುವುದು .

ಭದ್ರತೆ ಗೆ ಸಂಬಂಧ ಪಟ್ಟಂತೆ ಕಿಟಕಿ, ಬಾಗಿಲು ಸರಿಯಾಗಿ ಇದೆಯೆ ಎಂದು ಪರಿಶೀಲಿಸಿ ಕ್ರಮ ಕೈಗೊಳ್ಳುವುದು ,ಅಪರಿಚಿತರು, ಅನುಮಾನಸ್ಪ ದ ವ್ಯೆಕ್ತಿ ಗಳು  ಕಂಡು ಬಂದಲ್ಲಿ ಅವರ ಗುರುತು ಚಿತ್ರೀಕರಣ ಮಾಡಿ ಅವರ ಚಲನ ವಲನ ದ ಬಗ್ಗೆ ನಿಗಾ ವಹಿಸಿ ಭದ್ರತಾ ಶಿಬ್ಬಂದಿ ಗೆ ಎಚ್ಚರ ವಹಿಸಲು ತಿಳಿಸುದು ಹತ್ತಿರ ದ ಪೊಲೀಸ್ ಠಾಣೆ ಗೆ ಮಾಹಿತಿ ನೀಡುವುದು, ಸರ್ವಧರ್ಮ ಗಳ ಪಟ್ಟಿ ಮಾಡುವುದು ಅವರವರ ಶ್ರದ್ದಾ ಕೇಂದ್ರ ಗಳ ಪಕ್ಕ ವಿವಿಧ ಧರ್ಮ ಗಳ ಪ್ರಾರ್ಥನ ಮಂದಿರ ಗಳಿದ್ದಲ್ಲಿ ಅವರವರ ಹಬ್ಬ ಜಾತ್ರೆ ಗಳ ಸಂದರ್ಭದಲ್ಲಿ ಪರಸ್ಪರ ಶುಭಾಶಯಗಳನ್ನು ವಿನಿಮಯ ಮಾಡಿ ಕೊಳ್ಳುವುದು ,ಪರಸ್ಪರ ಪ್ರೀತಿ ವಿಶ್ವಾಸ ದಿಂದ ಸಹಕರಿಸುವುದು, ವರ್ಷ ದಲ್ಲಿ ಕನಿಷ್ಠ ಒಂದು ಬಾರಿ ಸರ್ವಧರ್ಮಿಯರ ಶಾಂತಿ ಸಭೆ ಕರೆಯುವುದು, ಆಪತ್ತು ವಿಪತ್ತು ಅತಿವೃಷ್ಟಿ ಅನಾವೃಷ್ಟಿ, ದೇಶ ಕ್ಕೆ ನಾಡಿಗೆ ಅಪಾಯ ಒದಗುವ ಸಂಭವ ಇರುವಾಗ ಪರಸ್ಪರ ಒಬ್ಬರಿಗೊಬ್ಬರು ಸಹಕರಿಸಿ ಶಾಂತಿ ಸೌಹಾರ್ದ ದಿಂದ  ನಾಡಿನ ದೇಶದ ಏಕತೆ ಕಾಪಾಡುವುದು,

ನಿರ್ಣಯ ಹಂತ ಹಂತ ವಾಗಿ ಕಾರ್ಯಗತ ಗೊಳಿಸಲು ಒಮ್ಮತದ ನಿರ್ಣಯ ಮಾಡಲಾಯಿತು, ಶ್ರೀ ಜೈನ ಮಠ ದ ಧವಲತ್ರಯ ಜೈನ ಕಾಶಿ ಟ್ರಸ್ಟ್ (ರಿ ) ವತಿಯಿಂದ ಬೊಲೆರೋ ವಾಹನ ಸಂಚಾರಿ ಗಸ್ತು ತಿರುಗಲು ಶ್ರೀ ಗಳವರು ವಾಹನ  ಬೀಗದ ಗೊಂಚಲು ಠಾಣಾಧಿ ಕಾರಿ ಗಳಿಗೆ ಹಸ್ತಾಂತರಿಸಿದರು ,ವಾಹನ ಕ್ಕಾಗಿ ಹೊಸ ಮೊಬೈಲ್ ಫೋನ್ ಮೂಡುಬಿದಿರೆ ಠಾಣಾಧಿಕಾರಿ ದಿನೇಶ್ ತಮ್ಮ ವತಿಯಿಂದ ಘೋಷಿಸಿದರು 

ಶ್ರೀಮಠ ಹಾಗೂ ಸ್ಥಾನೀಯ ಜೈನ ಸಮಾಜ ದ ವತಿಯಿಂದ ಮಾಹೆ ವೆಚ್ಚ ರೂಪಾಯಿ 50, 000.00 ವೆಂಕಟರಮಣ ದೇವಾಲಯದ ವತಿಯಿಂದ ರೂಪಾಯಿ 50, 00.00 ಹಾಗೂ ಕಾಳಿಕಾಂಬಾ ದೇವಸ್ಥಾನ, ಪೊನ್ನೆಚಾರಿ ದೇವಸ್ಥಾನ, ಅಲಂಗಾರು ಮಹಾ ಲಿಂಗೇಶ್ವರ ದೇವಸ್ಥಾನ, ಬಾಹುಬಲಿ ಪ್ರಸಾದ್, ಜಗದೀಶ್ ಅಧಿಕಾರಿ ಮಾಸಿಕ ವೆಚ್ಚ ಕ್ಕೆ ತಮ್ಮ ತಮ್ಮ ಸಹಕಾರ ಘೋಷಿಸಿದರು 

 ನಾಗವರ್ಮ , ಅರುಣ್ ಪೊಲೀಸ್ ಪೇದೆ ಉಪಸ್ಥಿತರಿದ್ದರು  ನೇಮಿರಾಜ್  ಸ್ವಸ್ತಿಶ್ರೀ ಕಾಲೇಜು ಉಪನ್ಯಾಸಕರು ಕಾರ್ಯಕ್ರಮ