ಭಾರತದಲ್ಲಿ ಕೊರೋನಾ ವೈರಸ್ ಏರುಗತಿ ನಿಲ್ಲುವ ಯಾವುದೇ ಲಕ್ಷಣಗಳು ಗೋಚರಿಸುತ್ತಿಲ್ಲ. ಗುರುವಾರ ಒಂದೇ ದಿನ 25331 ಹೊಸ ಪ್ರಕರಣಗಳು ದಾಖಲಾಗುವುದರೊಂದಿಗೆ ಸೋಂಕಿತರ ಸಂಖ್ಯೆ 7,92,627 ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇದು ದೇಶದಲ್ಲಿ ದಾಖಲಾದ ದೈನಂದಿನ ಗರಿಷ್ಠ ಎನಿಸಿಕೊಂಡಿದೆ. ಈ ಮೂಲಕ ಸತತ 8ನೇ ದಿನವೂ 20 ಸಾವಿರಕ್ಕಿಂತಲೂ ಅಧಿಕ ಪ್ರಕರಣ ದಾಖಲಾಗಿದೆ. ಇದೇ ವೇಳೆ 7,92,627 ಮಂದಿ ಸೋಂಕಿತರ ಪೈಕಿ 477685 ಮಂದಿ ಸೋಂಕಿನಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದು, ಇನ್ನು ದೇಶದಲ್ಲಿ 272974 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ತಿಳಿದುಬಂದಿದೆ.