ಬೆಂಗಳೂರು : ಕೊಕೊರೊನಾ ವೈರಸ್ ಭೀತಿಯ ನಡುವೆಯೂ ರಾಜ್ಯಾದ್ಯಂತ ಇಂದಿನಿಂದ ಎಸ್‌ಎಸ್‌ಎಲ್ ಸಿ ಪರೀಕ್ಷೆ ಆರಂಭವಾಗಿದ್ದು, ಮಕ್ಕಳು ಯಾವುದೇ ಆತಂಕವಿಲ್ಲದೇ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಲಾಗಿದೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಸಚಿವ ಸುರೇಶ್ ಕುಮಾರ್, ಪ್ರೀತಿಯ ಎಸ್‌ಎಸ್‌ಎಲ್ ಸಿ ಮಕ್ಕಳೇ, ನಿಗೆಲ್ಲಾ ಶುಭಾಶಯಗಳು, ಧೈರ್ಯದಿಂದ ನಮ್ಮ ಪರೀಕ್ಷಾ ಕೇಂದ್ರಕ್ಕೆ ಬನ್ನಿ, ಅದು ಕೇವಲ ನಿಮ್ಮ ಪರೀಕ್ಷಾ ಕೇಂದ್ರವಲ್ಲ, ಅದು ನಿಮ್ಮೆಲ್ಲರ ಸುರಕ್ಷಾ ಕೇಂದ್ರ ಸಹ. ಯಾವುದೇ ಆತಂಕ ಬೇಡ, ಲವಲೇಶ ಭಯವೂ ಬೇಡ. ಬದಲಿಗೆ ಆತ್ಮವಿಶ್ವಾಸ ತುಂಬಿರಲಿ ಎಂದು ಹೇಳಿದ್ದಾರೆ.

ಈಗಾಗಲೇ ಪರೀಕ್ಷೆ ಆರಂಭವಾಗಿದ್ದು, ರಾಜ್ಯಾದ್ಯಂತ 4,48,203 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಲಿದ್ದಾರೆ. ಇಂದು ಬೆಳಗ್ಗೆ 10.30 ರಿಂದ 1.30 ರವರೆಗೆ ದ್ವಿತೀಯ ಭಾಷೆಗಳಾದಂತಹ ಇಂಗ್ಲಿಷ್, ಕನ್ನಡ ಪರೀಕ್ಷೆ ನಡೆಯಲಿದೆ.