ಬೆಳ್ತಂಗಡಿ: ಮೈಕ್ರೋ ಫೈನಾನ್ಸ್ ನ ಕಾನೂನು ಬಾಹಿರ ದುಬಾರಿ‌ ಬಡ್ಡಿಯ ಸಾಲದ ಬಲೆಗೆ ಬಿದ್ದ ಬಡ ಮಹಿಳೆಯರ ಎಲ್ಲಾ  ಸಾಲಗಳ ಮನ್ನಾ ಮಾಡಬೇಕು. ಸಾಲ ವಸೂಲಿಗಾರರ ದಾಳಿ‌ ದಬ್ಬಾಳಿಕೆ , ಮಾನಸಿಹಬಕ‌ ಭಯೋತ್ಪಾದನೆ ತಡೆಯಬೇಕು ಹಾಗೂ ಲಾಕ್ ಡೌನ್ ಸಂತ್ರಸ್ಥ ರಿಗೆ ಮುಂದಿನ 6 ತಿಂಗಳು ಮಾಸಿಕ ರೂ 7,500 ನಗದು ರೂಪದ ಪರಿಹಾರ ನೀಡಬೇಕು, 10 ಕೆಜಿ ಅಕ್ಕಿ ಸೇರಿದಂತೆ 14 ಅಗತ್ಯ ವಸ್ತುಗಳನ್ನ ಲಾಕ್ ಡೌನ್ ಸಂತ್ರಸ್ಥರಿಗೆ ಮುಂದಿನ 6 ತಿಂಗಳು ಉಚಿತವಾಗಿ ಕೇರಳ ಮಾದರಿಯಲ್ಲಿ ನೀಡಬೇಕು, ಸಾರ್ವಜನಿಕ ರಂಗಗಳ ಖಾಸಗೀಕರಣ ಸಲ್ಲದು, ಕಾರ್ಮಿಕ ಕಾನೂನುಗಳ ಅಮಾನತ್ತು ಮಾಡಬಾರದು, ಅಗತ್ಯ ವಸ್ತುಗಳ ಕಾಯ್ದೆಗೆ ಮಾಡಿದ ತಿದ್ದಪಡಿ ಹಿಂಪಡೆಯಬೇಕು, ಲಾಕ್ ಡೌನ್ ದೆಸೆಯಿಂದ ಯಾರ ಕೆಲಸವೂ ಹೋಗಬಾರದು, ಕೆಲಸ ಕಳಕೊಂಡವರಿಗೆ ನಿರುದ್ಯೋಗ ಭತ್ತೆ ನೀಡಬೇಕು ಮತ್ತು ರಾಷ್ಟ್ರೀಕೃತ ಬ್ಯಾಂಕುಗಳು ಬಡವರಿಗೆ ಸಾಲ ನೀಡಿ ಸಹಕರಿಸಬೇಕು ಎಂದು ಒತ್ತಾಯಿಸಿ ನಡೆದ ಹೋರಾಟ ದಲ್ಲಿ ಕಾರ್ಮಿಕ‌ ನಾಯಕ ಬಿ.ಎಂ.ಭಟ್ ಮಾತಾಡುತ್ತಾ  ಹೇಳಿದರು. 

ಇಂದು ಬೆಳ್ತಂಗಡಿ ಮಿನಿ ವಿಧಾನ ಸೌದ ಎದುರು ಕರ್ನಾಟಕ ರಾಜ್ಯ ಋಣಮುಕ್ತ ಹೋರಾಟ ಸಮಿತಿ ಬೆಳ್ತಂಗಡಿ ತಾಲೂಕು ಸಮಿತಿ ನೇತೃತ್ವದಲ್ಲಿ ನಡೆದ ಈ ಹೋರಾಟವನ್ನು ಉದ್ದೇಶಿಸಿ ಅವರು ಮಾತಾಡುತ್ತಿದ್ದರು. ಹೋರಾಟದಲ್ಲಿ ಕಾರ್ಮಿಕ‌ ನಾಯಕರುಗಳಾದ ಎಲ್. ಮಂಜುನಾಥ್, ಲೋಕೇಶ್‌ ಕುದ್ಯಾಡಿ, ನೆಬಿಸಾ, ಜಯರಾಮ‌ ಮಯ್ಯ,  ಜಯಶ್ರೀ, ಶೇಖರ್ ವೇಣೂರು, ಋಣಮುಕ್ತ ನಾಯಕರುಗಳಾದ ಭವ್ಯ, ಶ್ರಿಧರ ಮಚ್ಚಿನ, ಕ್ಲಾರಾ, ಹಮೀದ್, ಲಲಿತ, ವಿದ್ಯಾರ್ಥಿ ನಾಯಕರುಗಳಾದ ಅಧಿತಿ, ವಿನುಷ ಮೊದಲಾದವರಿದ್ದರು.

ಕೊನೆಗೆ ಪ್ರಧಾನ ಮಂತ್ರಿ ಮತ್ತು ಮುಖ್ಯಮಂತ್ರಿಗಳಿಗೆ ತಹಶೀಲ್ದಾರ್ ಮೂಲಕ ಮನವಿ ನೀಡಲಾಯಿತು.