ಬೇಡ ಕೃಷ್ಣ

ಹೂವ ಸೊಬಗು ಹಾಗೇ ಇರಲೀ

ನಾಳಿನ ಬಾಳಿಗೆ ಸುಮ ಬರಲೀ

ಬೇಡ ಕೃಷ್ಣ ನಿನ್ನ ರಂಗಿನಲೀ

ಬಾಳ ಕನಸು ರಂಗು ಕೆಡದಿರಲೀ


ಹವಿಸ್ಸು ಸಿಹಿಯಾದ ಅಂಟು

ನೋಡಲು ರುಚಿ ಮನಸ್ಸುಂಟು

ಬೇಡ ಕೃಷ್ಣ ಬಾಳೊಂದು ಜಿಗಟು

ಸಿಹಿ ತಿಂದುಂಡು ತಟ್ಟೆ ಬಿಸುಟು


ನೋಟ ಬೇಡ ರಂಗು ಕೊಡ

ರಾಟೆಯಲಿ ಹರಿದು ಬಾಳ ಕೊಡ

ಬೇಡ ಕೃಷ್ಣ ಆಳ ಇಳೀ ಬೇಡ

ಒಳಗಿನ ಒಸರು ಬಸಿಯಬೇಡ


ಜೇನು ಬಂದು ದುಂಬಿ ಹೀರೆ

ತನ್ನತನ ಕೊಟ್ಟು ನಾನೀಗ ಜಾರೆ

ಬೇಡ ಕೃಷ್ಣ ಸಾಲದ ಹೊರೆ

ಚುಕ್ತಾ ಮಾಡಲು ಸುತ್ತಾ ದರೆ


ಬೇಡ ಕೃಷ್ಣ ನೀ ಪಾಠವ ಮಾಡೇ

ನಿನ್ನಯ ಅಭಯದ ದಂಡೇ

ಬೇಡ ಕೃಷ್ಣ ಚೆಲ್ಲಾಟದ ಮಡೇ

ರಾಜ ನೀನು ನಾನಾಗಲ್ಲ ಪಗಡೇ