ಗುರುಪುರ : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿಯ ವತಿಯಿಂದ 2019 ಮಾರ್ಚ್ 30ರ ಶನಿವಾರರಂದು ಸಂಜೆ 7.00 ಗಂಟೆಗೆ ಗುರುಪುರ ಕೈಕಂಬದ ಆದರ್ಶ ನಗರದಲ್ಲಿ “ಬ್ಯಾರಿ ಜಾನಪದ ಸಾಂಸ್ಕೃತಿಕ ಲೇಸ್” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ಅಕಾಡೆಮಿ ಅಧ್ಯಕ್ಷರಾದ ಕರಂಬಾರ್ ಮಹಮದ್ ಇವರು ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ. ಸೂರಲ್ಪಾಡಿ ಕೇಂದ್ರ ಜುಮ್ಮಾ ಮಸ್ಜಿದ್ ಅಧ್ಯಕ್ಷರಾದ ಹಾಜಿ| ಅಬ್ದುಲ್ ಮಜೀದ್ ಸೂರಲ್ಪಾಡಿ, ಗುರುಪುರ ಗೋಳಿದಡಿಗುತ್ತು ಗಡಿಕಾರರಾದ ವರ್ದಮಾನ ದುರ್ಗಾಪ್ರಸಾದ ಶೆಟ್ಟಿ, ನಂಡೊ ಪೆಂಙಲ್ ಅಭಿಯಾನದ ಅಧ್ಯಕ್ಷರಾದ ಹಾಜಿ| ನೌಷಾದ್ ಸೂರಲ್ಪಾಡಿ, ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಅಧ್ಯಕ್ಷರಾದ ವಿನೋದ್ ಶೆಟ್ಟಿ, ಗುರುಪುರ ರೇಂಜ್ ಮದ್ರಸ ಮೇನೇಜ್‍ಮೆಂಟ್ ಸಲಹೆಗಾರರಾದ ಹಾಜಿ| ಎಂ.ಹೆಚ್. ಮುಹ್ಯುದ್ದೀನ್ ಅಡ್ಡೂರು, ಗಂಜಿಮಠ ಹಂಸ ಬಾರ್‍ಸೋಪ್ ಮಾಲಕರಾದ ಯು. ಶ್ರೀನಿವಾಸ ಮಲ್ಯ, ಗುರುಪುರ ರೇಂಜ್ ಮದ್ರಸ ಮೇನೇಜ್‍ಮೆಂಟ್ ಸದಸ್ಯರಾದ ಹಾಜಿ| ಮುಹಮ್ಮದ್ ಹನೀಫ್ ಎದುರುಪದವು, ಗುರುಪುರ ಕೈಕಂಬ ಸಮಾಜ ಸೇವಕರಾದ ಜ| ಎಂ.ಜಿ. ಬಶೀರ್ ಇವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ತಾಲೀಮು ಮಾಸ್ಟರ್ ಜ| ಎಂ.ಜಿ. ಅಬ್ದುಲ್ಲ ಗುರುಪುರ, ತಾಲೀಮು ಮಾಸ್ಟರ್ ಜ| ಎಂ.ಜಿ. ಶಾಹುಲ್ ಹಮೀದ್, ತಾಲೀಮು ಕಲಿಗಾರ ಜ| ಇಬ್ರಾಹಿಂ ನಡುಗುಡ್ಡೆ, ತಾಲೀಮು ಕಲಿಗಾರ ಜ| ಅಮೀರ್ ಗುರುಪುರ ಇವರುಗಳನ್ನು ಸನ್ಮಾನಿಸಲಾಗುವುದು.
ರಾತ್ರಿ 8.30 ಗಂಟೆಗೆ ನಡೆಯಲಿರುವ ಬ್ಯಾರಿ ಕವಿಗೋಷ್ಠಿಯ ಅಧ್ಯಕ್ಷತೆಯನ್ನು ಬಹುಭಾಷಾ ಕವಿ ಮುಹಮ್ಮದ್ ಬಡ್ಡೂರು ವಹಿಸಲಿದ್ದು, ಶರೀಫ್ ನಿರ್ಮುಂಜೆ, ಆರೀಸ್ ತೋಡಾರ್, ಎಂ.ಪಿ. ಬಶೀರ್ ಅಹ್ಮದ್ ಬಂಟ್ವಾಳ, ಲುಕ್ಮಾನ್ ಅಡ್ಯಾರ್, ಕಾ ಶಿಖ ಬಜ್ಪೆ, ಇಬ್ರಾಹಿಮ್ ಖಲೀಲ್ ಪುತ್ತೂರು ಕವಿಗಳಾಗಿ ಭಾಗವಹಿಸಲಿದ್ದಾರೆ.
ಸಂಜೆ 7.00 ರಿಂದ 8.00ಗಂಟೆಯವರೆಗೆ ಶರೀಫ್ ಬೆಳ್ಳಾರೆ ಮತ್ತು ಬಳಗದಿಂದ ಬ್ಯಾರಿ ಹಾಡು, ರಾತ್ರಿ 9.00ಗಂಟೆಯಿಂದ 10.00ಗಂಟೆಯವರೆಗೆ ಎಂ.ಜಿ.ಎಂ. ತಾಲೀಮು ಸ್ಪೋರ್ಟ್ಸ್ ಇವರಿಂದ ತಾಲೀಮು ಕಲಿ ನಡೆಯಲಿದೆ. ಬ್ಯಾರಿ ಭಾಷಾಭಿಮಾನಿಗಳು ಮತ್ತು ಸಾರ್ವಜನಿಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಯಶಸ್ವಿಗೊಳಿಸುವಂತೆ ಅಕಾಡೆಮಿ ರಿಜಿಸ್ಟ್ರಾರ್ ಚಂದ್ರಹಾಸ ರೈ ಬಿ ಪತ್ರಿಕಾ ಪ್ರಕಟಣೆಯಲ್ಲಿ ವಿನಂತಿಸಿದ್ದಾರೆ.