ಲಂಡನ್ ನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತಿರುವ ಕೊರೊನಾ ಲಸಿಕೆಯ ಮೂರನೇ ಹಾಗೂ ಅಂತಿಮ ಹಂತದ ಪ್ರಯೋಗ ಭಾರತದ 5 ಕಡೆ ನಡೆಯಲಿದೆ.

ಭಾರತದ 5 ಕಡೆ ಆಕ್ಸ್ ಫರ್ಡ್ ಸಿದ್ಧಪಡಿಸಿರುವ ಆಸ್ಟ್ರಾ ಜೆನೆಸಿಕಾ ಲಸಿಕೆಯನ್ನು ಪ್ರಯೋಗಿಸಲಾಗುತ್ತಿದೆ. ಲಸಿಕೆಯನ್ನು ಮಾರಾಟಕ್ಕೆ ಬಿಡುವ ಮುನ್ನ ಲಸಿಕೆಯಲ್ಲಿನ ಅಂಶಗಳ ಬಗ್ಗೆ ಮಾಹಿತಿ ಪಡೆಯುವುದು ಅತ್ಯಗತ್ಯವಾಗಿದೆ ಎಂದು ಕೇಂದ್ರ ಬಯೋಲಾಜಿಕಲ್ ರೇಣು ಸ್ವರೂಪ್ ತಿಳಿಸಿದ್ದಾರೆ.

ಆಕ್ಸ್ ಫರ್ಡ್ ವಿಶ್ವವಿದ್ಯಾಲಯ ಲಸಿಕೆ ಮಾರಾಟಕ್ಕೆ ದೇಶದ ಅತೀ ದೊಡ್ಡ ಮಾರುಕಟ್ಟೆಗಳಲ್ಲಿ ಭಾರತ ಕೂಡ ಒಂದು ಪರಿಗಣಿಸಿದೆ. ಈ ಲಸಿಕೆಯ ಪ್ರಯೋಗದ ಮೊದಲೆರಡು ಫಲಿತಾಂಶಗಳು ಯಶಸ್ವಿಯಾಗಿದ್ದು,  ಆಕ್ಸ್ಫರ್ಡ್ ವಿವಿಯ ಅಸ್ಟ್ರಾಜೆನೆಕಾ ಮೊದಲ ಪ್ರಯೋಗವನ್ನು ಕೆಲವೇ ಕೆಲವು ಮಂದಿಯ ಮೇಲೆ ಮಾಡಲಾಗಿತ್ತು. ಅವರಲ್ಲಿ ರೋಗನಿರೋಧಕ ಶಕ್ತಿ ಎಷ್ಟರ ಮಟ್ಟಿಗೆ ಉತ್ಪತ್ತಿಯಾಗುತ್ತದೆ ಎಂದು ತಿಳಿದುಕೊಂಡು, ಬಳಿಕ ಮತ್ತಷ್ಟು ಮಂದಿಯ ಮೇಲೆ ಲಸಿಕೆ ಪ್ರಯೋಗ ಮಾಡಲು ಚಿಂತನೆ ನಡೆಸಲಾಗಿತ್ತು.

ಅಸ್ಟ್ರಾಜೆನೆಕಾ ಲಸಿಕೆಯ ಎರಡನೇ ಪ್ರಯೋಗದ ಸಂದರ್ಭದಲ್ಲಿ ಜನರನ್ನು ಎರಡು ಗುಂಪುಗಳನ್ನಾಗಿ ವಿಂಗಡಿಸಲಾಗಿತ್ತು. ಮಕ್ಕಳು ಹಾಗೂ ದೊಡ್ಡವರಿಗೆ ಪ್ರತ್ಯೇಕವಾಗಿ ಲಸಿಕೆ ನೀಡಲಾಗಿತ್ತು. ಎರಡು ಹಂತಗಳು ಮಾನವರಲ್ಲಿ ಸುರಕ್ಷತೆ ಮತ್ತು ರೋಗ ನಿರೋಧಕರ ಶಕ್ತಿಯನ್ನು ಕೇಂದ್ರೀಕರಿಸಿದ್ದವು.

ಮೂರನೇ ಹಾಗೂ ಅಂತಿಮ ಹಂತದಲ್ಲಿ ಅಸ್ಟ್ರಾಜೆನೆಕಾ ಔಷಧವನ್ನು ಸಾವಿರಾರು ಮಂದಿಯ ಮೇಲೆ ಪ್ರಯೋಗ ಮಾಡಲಾಗುತ್ತದೆ. ಭಾರತದಲ್ಲಿ ಸೈಡಸ್ ಕೆಡಿಲಾ ಹಾಗೂ ಭಾರತ್ ಬಯೋಟೆಕ್ ಎರಡೇ ಕಂಪನಿಗಳು ಮಾನವ ಪ್ರಯೋಗ ಹಂತವನ್ನು ತಲುಪಿವೆ.

ಆಕ್ಸ್‌ಫರ್ಡ್ ವಿವಿಯ ಅರ್ಧದಷ್ಟು ಕೊರೊನಾ ಲಸಿಕೆ ಭಾರತಕ್ಕೆ:

ಆಕ್ಸ್‌ಫರ್ಡ್ ವಿವಿಯ ಕೊರೊನಾ ಲಸಿಕೆ ಸಂಪೂರ್ಣ ಯಶಸ್ವಿಯಾದಲ್ಲಿ ಭಾರತಲ್ಲಿಯೇ ಉತ್ಪಾದನೆಯಾಗಲಿದೆ. ಭಾರತಕ್ಕೆ ಉತ್ಪಾದನೆಯ ಅರ್ಧದಷ್ಟು ಲಸಿಕೆ ನೀಡಲಾಗುತ್ತದೆ. ಎಲ್ಲವೂ ಅಂದುಕೊಂಡಂತೆ ಆದಲ್ಲಿ ನಮ್ಮಲ್ಲಿ ಉತ್ಪಾದನೆಯಾಗುವ ಲಸಿಕೆಯ ಶೇ.50 ಭಾರತದ ಬಳಕೆಗೆ ಮೀಸಲಾಗಿರಲಿದೆ ಎಂದು ಸಂಸ್ಥೆ ಮುಖ್ಯಸ್ಥ ಆದಾರ್ ಪೂನಾವಾಲಾ ಹೇಳಿದ್ದಾರೆ. ನವೆಂಬರ್- ಡಿಸೆಂಬರ್ ವೇಳೆಗೆ ಹತ್ತಾರು ಲಕ್ಷ ಡೋಸ್ ಉತ್ಪಾದನೆಯಾದರೆ, ಮುಂದಿನ ಮಾರ್ಚ್ ವೇಳೆಗೆ 3-4 ಕೋಟಿ ಡೋಸ್ ತಯಾರಾಗಲಿದೆ ಎಂದು ಹೇಳಿದ್ದಾರೆ.

ಯಾರಿಗೆ ಮೊದಲು ಲಸಿಕೆ ನೀಡಲಾಗುತ್ತದೆ ಎನ್ನುವ ಪ್ರಶ್ನೆಗೆ ಉತ್ತರಿಸಿದ ಆದಾರ್, ಇದನ್ನು ಸರ್ಕಾರವೇ ನಿರ್ಧರಿಸಲಿದೆ. ಆರಂಭದಲ್ಲಿ ಹಿರಿಯರು, ಹೆಚ್ಚು ಅಪಾಯದಲ್ಲಿರುವವರು ಹಾಗೂ ಮುಂಚೂಣಿಯಲ್ಲಿದ್ದು, ಕೋವಿಡ್ ರೋಗಿಗಳಿಗೆ ಆರೈಕೆ ಮಾಡುತ್ತಿರುವ ವೈದ್ಯ ಸಿಬ್ಬಂದಿಗೆ ನೀಡುವುದು ನ್ಯಾಯಯುತ ಹಂಚಿಕೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ