ಮಂಗಳೂರು:- ಮಂಗಳೂರಿನ ಪಾಲ್ದನೆಯ ಸಂತ ತೆರೆಜಾ ಚರ್ಚ್‍ನಲ್ಲಿ ವಾಸ್ತವ್ಯ ಗುರುಗಳಾಗಿ ಸೇವೆ ಸಲ್ಲಿಸಿದ್ದ ವಂದನೀಯ ಪಾ| ಪಾವ್ಲ್ ಕ್ರಾಸ್ತ ಅವರನ್ನುಸಂಪಾಜೆಯ ಸಂತ ಝೆವೀಯರ್ ಚರ್ಚಿನ ಧರ್ಮಗುರುಗಳಾಗಿ ನೇಮಕವಾಗಿರುವುದರಿಂದ ಪಾಲ್ದನೆ ಚರ್ಚಿನ ಸಮಸ್ತ ಭಕ್ತ ಬಾಂದವರು ಸಂಪಾಜೆಗೆ ಹೋಗಿ ಅವರನ್ನು ಬಿಳ್ಕೊಟ್ಟರು.

ಪಂಜ ಚರ್ಚಿನ ಧರ್ಮಗುರುಗಳಾದ ವಂದನೀಯ ಫಾ| ಅಮಿತ್‍ ರೊಡ್ರಿಗಸ್‍ರವರು ವಿಧಿವಿಧಾನಗಳನ್ನು ನೆರವೇರಿಸಿ ಅಧಿಕಾರ ಹಸ್ತಾಂತರಿಸಲು ಸಹಕರಿಸಿದರು. ಸಂತ ತೆರೆಜಾ ಚರ್ಚಿನ ಧರ್ಮಗುರುಗಳಾದ ವಂ| ಫಾಆಲ್ಬನ್ ಡಿ’ಸೋಜಾ, ಕೆಲರಾಯಿ ಚರ್ಚಿನ ಧರ್ಮಗುರುಗಳಾದ ವಂದನೀಯ ಜೋಸೆಪ್ ಮಸ್ಕರೇನಸ್, ಬೆಳ್ಳೂರು ಚರ್ಚಿನ ಧರ್ಮಗುರುಗಳಾದ ವಂ| ಫಾ| ಪ್ಯಾಟ್ರಿಕ್ ಸಿಕ್ವೇರಾ, ಅವರ ಸಮಕ್ಷಮ ವಿಧಿ ವಿದಾನಗಳೊಂದಿಗೆ ಸಂಪಾಜೆ ಚರ್ಚಿನ ಅಧಿಕಾರ ವಹಿಸಿದರು. 

ಸಂಪಾಜೆ ಚರ್ಚಿನ ಹಿಂದಿನ ಧರ್ಮಗುರುಗಳಾದ ವಂ| ಫಾ| ನವೀನ್ ಪ್ರಕಾಶ್  ಪಿಂಟೊರವರು ಧನ್ಯವಾದ ಅರ್ಪಿಸಿದರು. ಈ ಸಂದರ್ಭದಲ್ಲಿ ಪಂಜಾ ಚರ್ಚಿನ ಉಪಾಧ್ಯಕ್ಷೆ ಡೋರಾ ಡಿ’ಸೋಜಾ, ಕಾರ್ಯದರ್ಶಿ ಸೊಪಿಯಾ ಪಾಯಸ್, ಸಂತ ತೆರೆಜಾ ಚರ್ಚಿನ ಉಪಾಧ್ಯಕ್ಷ ವಿಲಿಯಂ ಲೋಬೋ ಕಾರ್ಯದರ್ಶಿ ಆಸ್ಟಿನ್ ಮೊಂತೇರೊ, ಪಾಲನಾ ಸಮಿತಿಯ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.