ಮಂಗಳೂರಿನ: ಮಂಗಳೂರಿನ ಓಶಿಯನ್ ಪರ್ಲ್ ಹೋಟೆಲ್ ಹಿಂಭಾಗದಲ್ಲಿರುವ ಮೌರಿಷ್ಕ ಪಾರ್ಕ್ ಅಪಾರ್ಟ್ಮೆಂಟಿನ ನಿವಾಸಿಗಳು ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ವಿನೂತನ ಪ್ರಯೋಗಕ್ಕೆ ಮುಂದಾಗಿದ್ದಾರೆ.
ಮೌರಿಷ್ಕ ಪಾರ್ಕ್ 3 ವಿಭಾಗಗಳಾಗಿ 360 ಫ್ಲಾಟ್`ಗಳಿವೆ. ಸುಮಾರು 1 ಸಾವಿರಕ್ಕೂ ಅಧಿಕ ಸಂಖ್ಯೆಯಲ್ಲಿ ಜನರು ವಾಸವಿರುವ ಈ ಕಟ್ಟಡ ಸಂಕೀರ್ಣದಲ್ಲಿ ಕೆಳಗಿರುವ ವಿಶಾಲವಾದ ಜಾಗದಲ್ಲಿ ಆಹಾರ ಸಾಮಾಗ್ರಿ, ತರಕಾರಿ, ಹಾಲು ಹಾಗೂ ದಿನ ಬಳಕೆಯ ವಸ್ತುಗಳ ಮಾರಾಟ ಕೇಂದ್ರವನ್ನು ಉದ್ಘಾಟನೆ ಮಾಡಿದ್ದಾರೆ.
ಆ ಅಪಾರ್ಟ್ಮೆಂಟಿನಲ್ಲಿ ವಾಸವಿರುವ ಮಹಿಳೆಯರು ಒಟ್ಟುಗೂಡಿ ಈ ಮಳಿಗೆಯ ಯೋಜನೆ ಹಾಕಿಕೊಂಡಿದ್ದಾರೆ. ವಾಟ್ಸಪ್ ಗ್ರೂಪ್ ಮಾಡಿಕೊಂಡು ಆ ಅಪಾರ್ಟ್ಮೆಂಟಿನಲ್ಲಿ ವಾಸವಿರುವ ಪ್ರತಿಯೊಬ್ಬರನ್ನೂ ಅದರಲ್ಲಿ ಸೇರಿಸಿದ್ದಾರೆ. ತಮಗೆ ಬೇಕಾಗಿರುವ ಆಹಾರ ಪಧಾರ್ಥಗಳ ಪಟ್ಟಿಯ ಜೊತೆಗೆ ತಮ್ಮ ಫ್ಲಾಟ್ ನಂಬರ್, ಮೊಬೈಲ್ ನಂಬರ್ ಸಹಿತ ಗ್ರೂಪಿನಲ್ಲಿ ಹಾಕಿದರೆ ಸಾಮಾಗ್ರಿಗಳನ್ನು ಸಿದ್ಧಪಡಿಸಿದ ಬಳಿಕ ಅವರಿಗೆ ಕರೆ ಮಾಡಿ ತಿಳಿಸುವ ವಿಶೇಷ ಕಾರ್ಯವನ್ನು ಮೌರಿಷ್ಕ ಪಾರ್ಕಿನ ನಿವಾಸಿಗಳು ಮಾಡುತಿದ್ದಾರೆ. ಪ್ರತಿ ನಿತ್ಯ ಸಾವಿರಾರು ಜನರು ಮಾರುಕಟ್ಟೆಗೆ ಬಂದು ಸಾಮಾಗ್ರಿಗಳ ಖರೀದಿಯಲ್ಲಿ ತೊಡಗಿಸಿಕೊಳ್ಳುವುದರಿಂದ ತಪ್ಪಿಸಿಕೊಳ್ಳುವ ನಿಟ್ಟಿನಲ್ಲಿ ಇವರ ಪ್ರಯೋಗ ಯಶಸ್ವಿಯಾಗಿದೆ.
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತದೊಂದಿಗೆ ಸಹಕಾರ ನೀಡುತ್ತಿರುವ ಮೌರಿಷ್ಕ ಪಾರ್ಕ್ ನಿರ್ವಹಣಾ ಸಮಿತಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ. ಹಾಗೂ ಮಂಗಳೂರಿನಲ್ಲಿರುವ ಎಲ್ಲಾ ಅಪಾರ್ಟ್ಮೆಂಟ್ ಗಳಲ್ಲೂ ಇಂತಹ ವ್ಯವಸ್ಥೆ ಮಾಡಬೇಕೆಂದು ಕಳಕಳಿಯಿಂದ ಮನವಿ ಮಾಡಿಕೊಳ್ಳುತ್ತೇನೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ನಮ್ಮೆಲ್ಲರಿಗೂ ಮಹತ್ತರವಾದ ಹೊಣೆಗಾರಿಕೆಯಿದೆ.