ಮುಲ್ಕಿ: ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್ (ರಿ) ಮುಲ್ಕಿ ವಲಯದ ವತಿಯಿಂದ ವಲಯಾಧ್ಯಕ್ಷ ನವೀನ್ ಚಂದ್ರ ರವರ ಅಧ್ಯಕ್ಷತೆಯಲ್ಲಿ ಪಧಾಧಿಕಾರಿಗಳು , ಸಕ್ರಿಯ ಸದಸ್ಯರು ಮತ್ತು ದಾನಿಗಳ ಸಹಕಾರದಿಂದ ದಿನ ಬಳಕೆಯ ಆಹಾರ ಸಾಮಾಗ್ರಿಗಳನ್ನು ವಲಯದ ಸರ್ವ ಸದಸ್ಯರಿಗೆ ನೀಡಲಾಯಿತು. ಕೊರೋನ ಮಹಾಮಾರಿ ಜಗತ್ತಿನಾದ್ಯಂತ ಪೀಡಿಸುತ್ತಿದ್ದು ಛಾಯಾಗ್ರಾಹಕ ಕ್ಷೇತ್ರಕ್ಕೂ ತೊಂದರೆಯಾಗಿರುವುದು ತಮಗೆಲ್ಲಾ ತಿಳಿದ ವಿಚಾರವಾಗಿದೆ... ಈ ಸಂದರ್ಭದಲ್ಲಿ ಮುಲ್ಕಿ ವಲಯ ಕಡಿಮೆ ಸದಸ್ಯರನ್ನು ಹೊಂದಿರುವ ವಲಯವಾದರೂ ಇತರ ವಲಯಗಳಿಗೆ ಪ್ರಥಮವಾಗಿ ಮಾದರಿಯಾಗುವ ರೀತಿಯಲ್ಲಿ ತಮ್ಮ ಕರ್ತವ್ಯವನ್ನು ತಾವು ಮಾಡಿದ್ದೀರಿ..... ಯಾವದೇ ಸಹಕಾರ, ಸೇವೆ, ದೇಣಿಗೆ ಏನಿದ್ದರೂ ಕೂಡ ಮೊದಲ ಆದ್ಯತೆ ನಮ್ಮ ಸದಸ್ಯರಿಗೆ ನೀಡಿ ಇನ್ನು ಮುಂದೆಯೂ ಕೂಡ ಸದಸ್ಯರಿಗೆ ಅಗತ್ಯವಾಗಿರುವ ಕಾರ್ಯಕ್ರಮಗಳಿಗೆ ಒತ್ತು ನೀಡಿ ಈ ನಿಟ್ಟಿನಲ್ಲಿ ಮುಲ್ಕಿ ವಲಯ ಮಾಡಿದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧ್ಯಕ್ಷ ಶ್ರೀಧರ್ ಶೆಟ್ಟಿಗಾರ್ ಕಿವಿ ಮಾತು ಹೇಳಿದರು ಈ ಸಂಧರ್ಬದಲ್ಲಿ ತಾಲೂಕು ಪಂಚಾಯತ್ ಸದಸ್ಯ ಶ್ರೀ ದಿವಾಕರ ಕರ್ಕೇರ, ಹಾಗೂ ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಶ್ರೀ ಭುವನಾಭಿರಾಮ ಉಡುಪ ಉಪಸ್ಥಿತರಿದ್ದರು... ಕಿನ್ನಿಗೋಳಿಯ ಯುಗಪುರುಷ ಸಭಾಭವನದಲ್ಲಿ ನಡೆದ . ಈ ಕಾರ್ಯಕ್ರಮದಲ್ಲಿ ವಲಯದ ಕಾರ್ಯದರ್ಶಿ ಸುರೇಶ್ ಕೆ ಬಿ, ಜಿಲ್ಲಾ ಸಾಂಸ್ಕೃತಿಕ ಕಾರ್ಯದರ್ಶಿ ನವೀನ್ ಕುಮಾರ್ ಕಟೀಲ್ ಹಾಗೂ ವಲಯದ ಹೆಚ್ಚಿನ ಸದಸ್ಯರು ಭಾಗವಹಿಸಿದ್ದರು.

