ಮಂಗಳೂರು,(ಅಕ್ಟೋಬರ್ 2): ಗಾರ್ಡಿಯನ್‍ ಏಂಜಲ್‍ ಚರ್ಚ್, ಆಂಜೆಲೊರ್ನಲ್ಲಿ ಸರಳ ಸಂಭ್ರಮದೊಂದಿಗೆ ಚರ್ಚಿನ ವಾರ್ಷಿಕ ಹಬ್ಬವನ್ನು ಆಚರಿಸಲಾಯಿತು. ವಂ| ಫಾ| ರಿಚ್ಚರ್ಡ್ ಡಿ'ಸೋಜ ಬೆಳಿಗ್ಗೆ 6.00 ಘಂಟೆಗೆ ಮತ್ತು ವಂ| ಫಾ| ಮ್ಯಾಕ್ಸಿಮ್‍ ಡಿಸೋಜಾರವರು 10.00 ಘಂಟೆಗೆ ಬಲಿಪೂಜೆಯನ್ನು ನೆರವೇರಿಸಿದರು. ಚರ್ಚಿನ ಪ್ರಧಾನ ಗುರುಗಳು ವಂ| ಫಾ| ವಿಲಿಯಂ ಮಿನೇಜಸ್, ಇತರ್‍ ಯಾಜಕರು ಅಂತೆಯೇ ಚರ್ಚಿನ ಭಕ್ತ ಸಮುದಾಯ ಬಲಿಪೂಜೆಗೆ ಹಾಜರಿದ್ದರು.