ಮಂಗಳೂರು: ಆಟೋ ರಿಕ್ಷಾ ದರ ಪರಿಷ್ಕರಣೆಯ ಮೀಟರ್  ಸತ್ಯಾಪನೆ ಮತ್ತು ತೂಕ ಮಾಪನ ಶಾಸ್ತ್ರ ಇಲಾಖೆಯ ಧ್ರಡೀಕರಣ ಮಾಡುವ ಪ್ರಕ್ರಿಯೆಯಲ್ಲಿ ತಾಂತ್ರಿಕ ಡೀಲರ್ ಗಳು ದುಬಾರಿ ವೆಚ್ಚ ನಿಗದಿಪಡಿಸಿರುವುದನ್ನು ಆಕ್ಷೇಪ ವ್ಯಕ್ತಪಡಿಸಿ  ಎಸ್ಡಿಟಿಯು ಅಧೀನದಲ್ಲಿರುವ ಸೋಷಿಯಲ್‍ ಡೆಮಾಕ್ರೆಟಿಕ್‍ ಆಟೋ ಚಾಲಕರ ಯೂನಿಯನ್ ಮಂಗಳೂರು ನಗರ ಸಮಿತಿ ವತಿಯಿಂದ ದ.ಕ ಜಿಲ್ಲಾಧಿಕಾರಿ ಮತ್ತು ಸಾರಿಗೆ ಇಲಾಖೆ ಅಧಿಕಾರಿಗೆ ಮನವಿ ಸಲ್ಲಿಸಲಾಯಿತು. 

               ಪರಿಷ್ಕ್ರತ ಆಟೋರಿಕ್ಷಾ ದರ ಅನ್ವಯವಾಗುವಂತೆ ಆಟೋರಿಕ್ಷಾ ಮೀಟರ್‍ದರವನ್ನು ಸತ್ಯಾಪನೆ ಮಾಡಿ ಸಂಬಂಧಪ್ಪಟ್ಟ ಇಲಾಖೆಯಿಂದ ಧ್ರಡೀಕರಿಸಿ ಮರು ಸಂಗ್ರಹ ಮಾಡುವ ಪ್ರಕ್ರಿಯೆಗೆ ತಾಂತ್ರಿಕ ಡೀಲರ್ ಗಳು ಪ್ರತೀ ಆಟೋರಿಕ್ಷಾಗಳಿಗೆ  550 ರೂಪಾಯಿ ವೆಚ್ಚ ನಿಗದಿ ಪಡಿಸಿದ್ದಾರೆ, ಲಾಕ್‍ಡೌನ್ ನಿಂದ ಕಂಗೆಟ್ಟ ಶ್ರಮಿಕ  ವರ್ಗ ಆಟೋರಿಕ್ಷಾಚಾಲಕರಿಗೆ ಈ ವೆಚ್ಚ ಭರಿಸಲು ಅಸಾದ್ಯವಾಗುತ್ತಿದ್ದು ಸಾರಿಗೆ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾಧಿಕಾರಿಗಳು ರಿಕ್ಷಾಚಾಲಕರ ಸಂಕಷ್ಟವನ್ನುಅರ್ಥಮಾಡಿ ಈ ಪ್ರಕ್ರಿಯೆಗೆ ಕನಿಷ್ಠ ದರ ನಿಗದಿಪಡಿಸಲು ಆದೇಶ ಹೊರಡಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ, ಎಸ್ಡಿಟಿಯು ಜಿಲ್ಲಾಧ್ಯಕ್ಷ ಕಾದರ್‍ ಫರಂಗಿಪೇಟೆ, ಜಿಲ್ಲಾ ಸಮಿತಿ ಸದಸ್ಯ ನೌಫಲ್ ಕುದ್ರೋಳಿ, ನಗರ ಸಮಿತಿ ಅಧ್ಯಕ್ಷ ಮಜೀದ್ ಉಳ್ಳಾಲ, ಕಾರ್ಯದರ್ಶಿ ಶೆರೀಫ್‍ ಕುತ್ತಾರ್, ಸದಸ್ಯರಾದ ಹರ್ಷಾದ್ ಕುದ್ರೋಳಿ, ಇಲ್ಯಾಸ್‍ ಬೆಂಗರೆ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು