ಮಂಗಳೂರು:ಮಂಗಳೂರಿನ ನಗರದ ಕಾರ್ಸ್ಟ್ರೀಟಿನ ಬಹುದೊಡ್ಡ ಕಾಂಪ್ಲೆಕ್ಸ್ ಗಳ ಮಧ್ಯೆ ಅದೊಂದು ಕತ್ತಲ ಕೋನೆಯಂತಿರುವ ಪುಟ್ಟ ಮನೆ,ಗಂಡ ಹೆಂಡತಿ ಎರಡು ಮಕ್ಕಳಿರುವ ಚಂದದ ಸಂಸಾರ, ದೂರದೂರಿನಿಂದ ಬಂದು ಮಂಗಳೂರು ಮಹಾನಗರದಲ್ಲಿ ಕಟ್ಟಡ ಕೆಲಸಗಳನ್ನು ಮಾಡಿಕೊಂಡು ಸಂಸಾರ ಸಾಗಿಸುತ್ತಿದ್ದರು, ಆದರೆ ಕೊರೋನ ಮಹಾಮಾರಿಯಿಂದಾಗಿ ಕೆಲಸ ಕಳೆದುಕೊಂಡವರಲ್ಲಿ ಇವರೂ ಒಬ್ಬರು. ಕೆಲಸವಿಲ್ಲ, ದುಡ್ಡಿಲ್ಲದಿದ್ದರೂ ತಮ್ಮ ಊರಿಗೆ ಸಾಗಲು ಇವರಿಗೆ ಆಸಾಧ್ಯ, ಏಕೆಂದರೆ ಅವರ ಸಣ್ಣ ಮಗುವೊಂದು ಆನಾರೋಗ್ಯದಿಂದ ಬಳಲುತ್ತಿದೆ ಆ ಮಗುವಿನ ಆರೋಗ್ಯದ ಆರೈಕೆಗಾಗಿ ಅವರು ಈ ಮಹಾನಗರದಲ್ಲಿ ಕೆಲಸವಿಲ್ಲದೇ ಉನ್ನಲು ಅನ್ನವಿಲದೇ ಇದ್ದಾಗ ಅವರಿಗೆ ದೇವನು ತೋರಿಸಿಕೊಟ್ಟವರೇ ಪ್ರೀಮಸ್ & ಅಲ್ಫಾಝ್ ನೇತೃತ್ವದ ಟೀಂ ಮಿಥುನ್ ರೈ ಮೂಲಕ ವಲಸೆ ಕಾರ್ಮಿಕರಿಗೆ ಊಟ ನೀಡುವ ವೇಳೆ ಈ ಕುಟುಂಬಕ್ಕೂ ಊಟ ನೀಡುತಿದ್ದರು, ಈಗ ಊಟ ಮಾತ್ರವಲ್ಲ ಇಡೀ ಕುಟುಂಬಕ್ಕೆ ಬೆನ್ನೆಲುಬಾಗಿ ನಿಂತಿದೆ ಪ್ರೀಮಸ್ & ಅಲ್ಫಾಝ್ ನೇತೃತ್ವದ ಟೀಂ ಮಿಥುನ್ ರೈ. ಆ ಕುಟುಂಬದ ಆದಾಯಕ್ಕಾಗಿ ಕೈಗಾಡಿಯ ವ್ಯವಸ್ಥೆ ಮಾಡಿ ವ್ಯಾಪಾರಕ್ಕಾಗಿ ತರಕಾರಿ ಅಥವಾ ಹಣ್ಣುಗಳನ್ನು ಸ್ವತಃ ಅವರೇ ಮಾಡಿಕೊಟ್ಟಿದ್ದಾರೆ, ಪ್ರತಿ ಸಮಯ ಆ ಮನೆಗೆ ಭೇಟಿ ನೀಡಿ ಅವರೊಂದಿಗೆ ವಿಚಾರ ಮಾಡಿ ಮಗುವಿನ ಆರೋಗ್ಯವನ್ನು ವಿಚಾರಿಸುತ್ತಿದೆ ಟೀಂ ಮಿಥುನ್ ರೈ.