ಮಂಗಳೂರು: ಕರ್ನಾಟಕ ಸರಕಾರದ ಕೌಶಲ್ಯಾಭಿವೃದ್ದಿ ಉದ್ಯಮ ಶೀಲತೆ ಮತ್ತು ಜೀವನೋಪಾಯ ಇಲಾಖಾ ಆದೇಶದಂತೆ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯ ಹಾಗೂ ಕರ್ನಾಟಕ ಜರ್ಮನ್ ಮಲ್ಟಿ ಸ್ಕಿಲ್ ಡೆವಲಪ್‍ಮೆಂಟ್ ಸೆಂಟರ್ ಮುಖಾಂತರ ಅನುಷ್ಠಾನಗೊಂಡಿರುವ ಕೌಶಲ್ಯ ಕರ್ನಾಟಕ ಯೋಜನೆಯಡಿ ಅರ್ಹ ಅಭ್ಯರ್ಥಿಗಳಿಗಾಗಿ ಸಿಸ್ಕೊ ಸರ್ಟಿಫೈಡ್ ನೆಟ್‍ವರ್ಕ್ ಅಸೋಸಿಯೇಟ್, ಸಿಸ್ಕೊ ಐ.ಟಿ. ಎಸೆನ್ಸಿಯಲ್ಸ್, ಬೇಸಿಕ್ ವೆಲ್ಡಿಂಗ್, ಟಿಗ್ ವೆಲ್ಡಿಂಗ್, ಮಿಗ್ ವೆಲ್ಡಿಂಗ್, ರೆಫ್ರಿಜರೇಶನ್ ಮತ್ತು ಏರ್ ಕಂಡೀಷನಿಂಗ್ ಟೆಕ್ನಿಷಿಯನ್, ಟ್ಯಾಲಿ ER P 9 ಕೋರ್ಸ್‍ಗಳಲ್ಲಿ ಉಚಿತ ಅಲ್ಪಾವಧಿ ತರಬೇತಿಯನ್ನು ಮಂಗಳೂರಿನ ಕದ್ರಿಹಿಲ್ಸ್‍ನಲ್ಲಿರುವ ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆಯಲ್ಲಿ ನೀಡಲಾಗುತ್ತಿದ್ದು, ಆಸಕ್ತರು ಕೆ.ಜಿ.ಟಿ.ಟಿ.ಐ. ಕಚೇರಿಯಿಂದ ಅರ್ಜಿಯನ್ನು ಕೂಡಲೇ ಪಡೆದು ಭರ್ತಿಗೊಳಿಸಿ ತರಬೇತಿಗೆ ನೊಂದಾಯಿಸಿಕೊಳ್ಳಬೇಕು.  

ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0824-2211477ನ್ನು ಸಂಪರ್ಕಿಸಬೇಕು ಎಂದು  ನಿರ್ದೇಶಕರ ಕಚೇರಿ, ಕರ್ನಾಟಕ ಜರ್ಮನ್ ತಾಂತ್ರಿಕ ತರಬೇತಿ ಸಂಸ್ಥೆ ಮಂಗಳೂರು ತಿಳಿಸಿದ್ದಾರೆ.