ಮಂಗಳೂರು: ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಮಂಡಳಿ, ಭಾರತ ಸರ್ಕಾರ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರ್ಕಾರ ಇವರ ಸಹಯೋಗದೊಂದಿಗೆ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ರಾಜ್ಯದಲ್ಲಿ ಮಕ್ಕಳ ವಿಜ್ಞಾನ ಸಮಾವೇಶವನ್ನು ಸಂಘಟಿಸುತ್ತಿದೆ ಎಂದು ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ತಿಳಿಸಿರುತ್ತಾರೆ.
ಭವಿಷ್ಯದ ಬಾಲವಿಜ್ಞಾನಿಗಳನ್ನು ರೂಪಿಸಲು ನೆರವಾಗಿರುವ ಸಮಾವೇಶದಲ್ಲಿ ವಿದ್ಯಾರ್ಥಿಗಳು ಸಮಾವೇಶದ ಪ್ರಸಕ್ತ ವರ್ಷದ ಕೇಂದ್ರ ವಿಷಯವಾದ ಸ್ವಚ್ಚ ಹಸಿರು ಮತ್ತು ಆರೋಗ್ಯವಂತ ರಾಷ್ಟ್ರಕ್ಕಾಗಿ ವಿಜ್ಞಾನ, ತಂತ್ರಜ್ಞಾನ ಮತ್ತು ಆವಿಷ್ಕಾರಗಳು ಎಂಬ ವಿಷಯದಡಿ ತಮ್ಮ ಮಾರ್ಗದರ್ಶಿ ಶಿಕ್ಷಕರ ಮಾರ್ಗದರ್ಶನದಲ್ಲಿ ತಾವೇ ಸ್ವತಃ ರೂಪಿಸಿರುವ ವೈಜ್ಞಾನಿಕ ವಿಶ್ಲೇಷನೆ ಅವಲೋಕನಸದಿಂದ ಅಧ್ಯಯನ ಕೈಗೊಂಡು ಯೋಜನಾ ವರದಿಯನ್ನು ಮಂಡಿಸಬೇಕಾಗುತ್ತದೆ. ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದ ಮುಖ್ಯ ಉದ್ದೇಶ 10-17 ವಯೋಮಾನದ ಮಕ್ಕಳಿಗೆ ಸೂಕ್ತ ವೇದಿಕೆಯನ್ನು ಒದಗಿಸಿಕೊಡುವುದು. ಭವಿಷ್ಯದ ಬಾಲವಿಜ್ಞಾನಿಗಳನ್ನು ರೂಪಿಸಲು ನೆರವಾಗುವುದಿದೆ. ಈ ಸಮಾವೇಶದಲ್ಲಿ 10ರಿಂದ 17 ವಯೋಮಾನದ ಯಾವುದೇ ಮಾಧ್ಯಮದಲ್ಲಿ ಓದುತ್ತಿರುವ ವಿದ್ಯಾಥಿಗಳು ಭಾಗವಹಿಸಬಹುದಾಗಿದ್ದು, ಒಂದು ತಂಡದಲ್ಲಿ ಇಬ್ಬರು ವಿದ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ಈ ಸಮಾವೇಶದಲ್ಲಿ ಶಾಲೆ ಬಿಟ್ಟ ಮಕ್ಕಳೂ ಸಹ ಭಾಗವಹಿಸಬಹುದಾಗಿದೆ. ಸಮಾವೇಶವು ಜಿಲ್ಲಾಮಟ್ಟ, ರಾಜ್ಯಮಟ್ಟ ಹಾಗೂ ರಾಷ್ಟ್ರ ಮಟ್ಟ 3 ಹಂತದಲ್ಲಿ ನಡೆಯಲಿದ್ದು, 10ರಿಂದ 14 ವಯೋಮಾನದ ವಿಭಾಗದಲ್ಲಿ ಇರಬಹುದಾಗಿದೆ.
ಜಿಲ್ಲಾ ಹಂತದ ಸಮಾವೇಶದಲ್ಲಿ ಮಂಡನೆಯಾಗುವ ಅತ್ಯುತ್ತಮವಾದ 10 ಯೋಜನೆಗಳನ್ನು ಪ್ರತಿ ಜಿಲ್ಲೆಯಿಂದ ರಾಜ್ಯಮಟ್ಟಕ್ಕೆ ಆಯ್ಕೆ ಮಾಡಲಾಗುವುದು. ರಾಜ್ಯಮಟ್ಟದಲ್ಲಿ ಒಟ್ಟು 300 ಯೋಜನೆಗಳನ್ನು ವಿದ್ಯಾರ್ಥಿಗಳು ಮಂಡಿಸಲಿದ್ದು, ಇದರಲ್ಲಿ ಅತ್ಯುತ್ತಮವಾದ 30 ಯೋಜನೆಗಳನ್ನು ರಾಷ್ಟ್ರಮಟ್ಟದ ಸ್ಪರ್ಧೆಗೆ ಕಳುಹಿಸಲಾಗುವುದು. ಈ ಬಾರಿಯ ರಾಜ್ಯಮಟ್ಟದ ಸಮಾವೇಶವು ಡಿಸೆಂಬರ್ 16, 18 ರಂದು ಮಂಡ್ಯ ಜಿಲ್ಲೆಯ ಶ್ರೀ ಆದಿ ಚುಂಚನಗಿರಿ ಮಹಾಕ್ಷೇತ್ರ ಇಲ್ಲಿ ಸಂಘಟಿಸಲಾಗುತ್ತಿದ್ದು, ರಾಷ್ಟ್ರಮಟ್ಟದ ಸಮಾವೇಶವು ಡಿಸೆಂಬರ್ 27-31ರಂದು ಕೇರಳ ರಾಜ್ಯದ ತಿರುವನಂತಪುರದಲ್ಲಿ ಆಯೋಜನೆಗೊಳ್ಳಲಿದೆ. ರಾಷ್ಟ್ರಮಟ್ಟದ ಸಮಾವೇಶದಲ್ಲಿ ಅಂದಾಜು 1300 ಯೋಜನೆಗಳನ್ನು ರಾಷ್ಟ್ರಾದ್ಯಂತ ಆಗಮಿಸುವ ಬಾಲವಿಜ್ಞಾನಿಗಳು ಮಂಡಿಸಲಿದ್ದಾರೆ.
ಸಮಾವೇಶದಲ್ಲಿ ಭಾಗವಹಿಸಲು ಇಚ್ಚಿಸುವ ವಿದ್ಯಾರ್ಥಿಗಳು ಎನ್.ಸಿ.ಎಸ್.ಟಿ.ಸಿ. ವೆಬ್‍ಸೈಟ್ http://www.ncsc-india.in ನ್ನು ಉಚಿತವಾಗಿ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ. ವಿದ್ಯಾರ್ಥಿಗಳು ಮೊಬೈಲ್ ಮೂಲಕವು ನೋಂದಾವಣಿ ಮಾಡಿ ಫಾರ್ಮ್-ಎ ನ್ನು ಪಡೆದುಕೊಳ್ಳಬಹುದು. ಪ್ರಸ್ತುತ 27ನೇ ಮಕ್ಕಳ ವಿಜ್ಞಾನ ಸಮಾವೇಶದ ಯೋಜನಾ ಸಾರಾಂಶ ಪುಸ್ತಕ ವಿಜ್ಞಾನ ಪರಿಷತ್ತಿನ ವೆಬ್‍ಸೈಟ್‍ನಲ್ಲಿ ಅಭ್ಯವಿದ್ದು, www.krvp.org ಆಸಕ್ತ ವಿದ್ಯಾರ್ಥಿಗಳು ಡೌನ್‍ಲೋಡ್ ಮಾಡಿಕೊಳ್ಳಬಹುದು.
ಹೆಚ್ಚಿನ ಮಾಹಿತಿಗಾಗಿ ವಿಜ್ಞಾನ ಪರಿಷತ್ತಿನ ದೂರವಾಣಿ ಸಂಖ್ಯೆ : 080-26718939, 9483549159 ಹಾಗೂ ಸಮಾವೇಶದ ರಾಜ್ಯ ಸಂಯೋಜಕಾರದ ಸಿ. ಕೃಷ್ಣೇಗೌಡ ಮೊ.ಸಂ : 9036989384, ರಾಜ್ಯ ಶೈಕ್ಷಣಿಕ ಸಂಯೋಜಕರಾದ ಎಸ್.ಎಂ ಕೊಟ್ರು ಸ್ವಾಮಿ ಮೊ.ಸಂ : 9449628680, ಯೋಜನಾ ಸಹಾಯಕರಾದ ಪ್ರಭು ಎಸ್, ಮಠ ಮೊ.ಸಂ : 9448569245ನ್ನು ಸಂಪರ್ಕಿಸಬೇಕು ಎಂದು ಗೌರವ ಕಾರ್ಯದರ್ಶಿ ಗಿರೀಶ ಕಡ್ಲೇವಾಡ ತಿಳಿಸಿದ್ದಾರೆ.