ಮಂಗಳೂರು:  ಮಂಗಳೂರು ವಿಶ್ವವಿದ್ಯಾಲಯ ಜನರ ಪರವಾಗಿ ಕೆಲಸ ಮಾಡಲಿದೆ. ವಿಶ್ವವಿದ್ಯಾಲಯವು ತನ್ನ ವ್ಯಾಪ್ತಿಯ ಜನರ ಬೇಡಿಕೆಗಳಿಗೆ ಸ್ಪಂದಿಸಲಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯ ಕುಲಪತಿ ಪ್ರೊ ಪಿ.ಎಸ್ ಯಡಪಡಿತ್ತಾಯ ಹೇಳಿದ್ದಾರೆ.

ಕರ್ನಾಟಕ ಗಡಿಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಸಹಯೋಗದಲ್ಲಿ ಎಸ್ಎಸ್ ಸಿಡಿಎಫ್ ಮಂಗಳೂರು ಪುರಭವನ ಆಯೋಜಿಸಿರುವ ಮೂರು ದಿನಗಳ ಸಂಸ್ಕೃತಿ ಸಂಭ್ರಮ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇದೇ ಸಂದರ್ಭಧಲ್ಲಿ ಯಶೋಧ ಕರನಿಂಗ ಬರೆದಿರುವ ಪ್ರಸಾರ ಭಾರತಿಯ ಮಾಜಿ ಅಧ್ಯಕ್ಷೆ ಮೃಣಾಲ್ ಪಾಂಡೆ ಅವರ ಕರಿತಾದ ಎರಡು ಕೃತಿಗಳ ಲೋಕಾರ್ಪಣೆ ಮಾಡಲಾಯಿತು.

ಅರಿವು ನೀಡುವ ಯಾವುದೇ ಕಾರ್ಯಕ್ರಮಕ್ಕೂ ವಿಶ್ವವಿದ್ಯಾಲಯವು ಬೆಂಬಲಿಗನಾಗಿ ನಿಲ್ಲುತ್ತದೆ.  ವಿಶ್ವವಿದ್ಯಾನಿಲಯವನ್ನು ವಿಭಿನ್ನವಾಗಿ ರೂಪಿಸಬೇಕು, ಇತರರಿಗಿಂತ ಭಿನ್ನವಾಗಿ ಕೆಲವಸ ಮಾಡಬೇಕು ಹಾಗೂ ಅದು ಜನರ ಆಶೋತ್ತರಗಳಿಗೆ ಸ್ಪಂದಿಸಬೇಕು ಎಂಬುದು ತನ್ನ ಮೂಲ ಆಶಯವಾಗಿದೆ ಎಂದು ಕುಲಪತಿ ಪ್ರೊ. ಯಡಪಡಿತ್ತಾಯ ಹೇಳಿದರು.

ಎಸ್ಎಸ್ ಸಿಡಿಎಫ್ ಸಾಮಾಜಿಕ ಕಾಳಜಿ ಮತ್ತು ಜವಾಬ್ದಾರಿಯಿಂದ ಕೆಲಸ ಮಾಡುತ್ತಿದೆ.  ಸಂಸ್ಥೆಯ ಮುಂದಿನ ಕೆಲಸ ಕಾರ್ಯ ಗಳಿಗೆ ಮಂಗಳೂರು ವಿಶ್ವವಿದ್ಯಾನಿಲಯ ಸಂಪೂರ್ಣ ಸಹಕಾರ ನೀಡಲಿದೆ ಎಂದು ಹೇಳಿದರು.