ಮಂಗಳೂರು:- ಲೈಟ್ ಹೌಸ್ ಹಿಲ್ ರಸ್ತೆಯನ್ನು ಸೆಪ್ಟೆಂಬರ್ 22 ರ ಮಂಗಳವಾರ 'ಮುಲ್ಕಿ ಸುಂದರ್ ರಾಮ್ ಶೆಟ್ಟಿ ಅವರ ಹೆಸರಿನಲ್ಲಿ 'ಮುಲ್ಕಿ ಸುಂದರ್ ರಾಮ್ ಶೆಟ್ಟಿ ರಸ್ತೆ' ಎಂದು ಮರುನಾಮಕರಣ ಮಾಡಲಾಯಿತು. ಈ ಕಾರಣದಿಂದಾಗಿ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯವರು  ವಿರೋಧ ವ್ಯಕ್ತ ಪಡಿಸಿದ್ದಾರೆ.

 ಫಾ. ಮೆಲ್ವಿನ್ ಪಿಂಟೊ ಎಸ್ .ಜೆ ಸಂತ ಅಲೋಶಿಯಸ್ ಕಾಲೇಜಿನ ರೆಕ್ಟರ್ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, "ಹಂಪನ್ ಕಟ್ಟಾದಿಂದ ಲೈಟ್ ಹೌಸ್ ರೋಡ್ ಮೂಲಕ ಅಂಬೆಡ್ಕರ್ ವೃತ್ತದ ವರೆಗೆ ಮುಲ್ಕಿ ಸುಂದರ ರಾಮ್ ಶೆಟ್ಟಿ ಎ೦ದು ಮರುನಾಮಕರಣ ಮಾಡಿದ ಸುದ್ಧಿಯು ಪ್ರತಿಯೊಬ್ಬರ ಮನಸ್ಸಿನಲ್ಲಿ ಅಶಾಧ ಮನೋಭಾವನೆ ವ್ಯಕ್ತವಾಗಿದೆ. ಈ ಘೋಷಣೆಯ ನಿರ್ಧಾರವು ಸಂತ ಅಲೋಶಿಯಸ್ ವಿಧ್ಯಾ ಸಂಸ್ಥೆಯ ಸಾವಿರಾರು ಅಭಿಮಾನಿಗಳ ಭಾವನೆಗಳನ್ನು ನೋಯಿಸಿದೆ".

"ಈ ರಸ್ತೆಗೆ 1976ರಲ್ಲಿ ಮಂಗಳೂರು ಮಹಾನಗರ ಪಾಲಿಕೆಯು  ಬ್ಲೇಸಿಯಸ್ ಡಿ ಸೋಜಾ ಅವರ ಅಧ್ಯಕ್ಷತೆಯಲ್ಲಿ ನಾಮಕರಣ ಮಾಡಿತ್ತು. ಈ ರಸ್ತೆಯ ಹೆಸರನ್ನು`ಮೂಲ್ಕಿ ಸುಂದರರಾಮ ಶೆಟ್ತಿರಸ್ತೆ’ಎಂದು ಮರು ನಾಮಕರಣ ಮಾಡುವಂತೆ 24-05-2017  ರಂದು ಹೊರಡಿಸಲಾದ ರಾಜ್ಯ ಸರ್ಕಾರದ ಆದೇಶಕ್ಕೆ 01-07-2017 ರಂದು ('ಸ್ಟೇ') ತಡೆಯ ಆದೇಶವನ್ನು  ತರುವಲ್ಲಿ ಸಂತ ಅಲೋಶಿಯಸ್ ಕಾಲೇಜಿನ ಆಡಳಿತ ಮಂಡಳಿಯು ಯಶಸ್ವಿಯಾಗಿದೆ".

"ಈ ಕೊರೊನಾದಂತಂಹ ಆತಂಕದ ಸಮಯಲ್ಲಿ ಕಾನೂನು ಪ್ರಕ್ರಿಯೆಗಳನ್ನು ತಪ್ಪಿಸುವ ಹಾಗೂ ಮೌನ ನಿರ್ಧಾರವು ಅಸಮಧಾನವನ್ನು ಉಂಟು ಮಾಡುವುದರಲ್ಲಿ ಯಾವುದೇ ಸಂಶಯವಿಲ್ಲ. ಈ ಕೊರೊನಾ ಸಮಯವು ಜನರ ಸಮನ್ವಯಕ್ಕೆ ಒಂದು ಅವಕಾಶವಾಗಬೇಕು ಮತ್ತು ಜನರಲ್ಲಿ ಒಗ್ಗಟ್ಟನ್ನು ಪ್ರದರ್ಶಿಸುವ ಸಮಯವಾಗಬೇಕಾಗಿತ್ತು. ಆದರೆ ಅನಿರೀಕ್ಷಿತ ನಿರ್ಧಾರ ವಿವಾದಕ್ಕೆ ಒಳಗಾಗಿದೆ. ಎಂಬುದು ಸಾಬಿತುಪಡಿಸುತ್ತದೆ".

 ಫಾ. ಮೆಲ್ವಿನ್ ಪಿಂಟೊ ಎಸ್ ಜೆ, ಡಾ ಆಲ್ವಿನ್ ಡೆಸ್ಸಾ, ಡಾ.ಡೆನ್ನಿಸ್ ಫೆರ್ನಾಂ ಡಿಸ್, ಗ್ಯಾವಿನ್ ಆಬ್ನರ್ ಪಿಂಟೊ, ಕಾಲೇಜಿನ ನಿದೇಶಕರು, ಸಿಬ್ಬಂದಿ ವರ್ಗದವರು ,ಪತ್ರಿಕಾಗೋಷ್ಟಿಯಲ್ಲಿ ಮತ್ತಿತ್ತರು ಉಪಸ್ಥಿತರಿದ್ದರು.