ಮಂಗಳೂರು :ದ.ಕ.ಜಿಲ್ಲೆಯಲ್ಲಿ ಸಾವಿರಾರು ಕಾರ್ಮಿಕರು ಗುಜರಾತ್, ಉತ್ತರ ಪ್ರದೇಶ, ಜಾರ್ಖಂಡ್, ಬಿಹಾರ ಮೊದಲಾದ ರಾಜ್ಯಗಳಿಂದ ಬಂದು ಕೋವಿಡ್-19 ಕಾರಣಗಳಿಗಾಗಿ ಅವರವರ ಜಿಲ್ಲೆಗಳಿಗೆ ತೆರಳು ಸಾಧ್ಯವಾಗದೇ ಇನ್ನೂ ಬೀದಿಯಲ್ಲಿರುವುದು ಕಂಡುಬಂದಿದೆ. ಅವರಿಗೆ ಸೂಕ್ತ ವ್ಯವಸ್ಥೆಯನ್ನು ಮಾಡಲು ರಾಜ್ಯ ಸರ್ಕಾರ ಕೂಡಲೇ ಕ್ರಮಕೈಗೊಳ್ಳಬೇಕು. ರೈಲುಗಳ ವ್ಯವಸ್ಥೆಯನ್ನು ಮಾಡುವಂತೆ ಕೂಡಲೇ ಕ್ರಮಕೈಗೊಳ್ಳಬೆಕು, ಹೊರ ರಾಜ್ಯಗಳಿಂದ ಕರ್ನಾಟಕ್ಕೆ ಆಗಮಿಸುವ ಅದರಲ್ಲೂ ಕರಾವಳಿ ಜಿಲ್ಲೆಗಳಿಗೆ ಆಗಮಿಸಲು ಅರ್ಜಿ ಸಲ್ಲಿಸಿರುವ ಸುಮಾರು 50 ಸಾವಿರಕ್ಕೂ ಅಧಿಕ ಮುಂಬೈ ಮತ್ತು ನೆರೆ ರಾಜ್ಯಗಳಲ್ಲಿರುವ ಕನ್ನಡಿಗರಿಗೆ ಯಾವುದೇ ವ್ಯವಸ್ಥೆಯನ್ನು ಮಾಡದೇ ಆ ಭಾಗದಲ್ಲಿ ವಾಸಿಸುತ್ತಿರುವ ನಮ್ಮ ಕನ್ನಡಿಗರು ಅನಾಥರಾಗಿದ್ದಾರೆ. ಅಲ್ಲದೇ ಆಕ್ರೋಶಕ್ಕೂ ಒಳಗಾಗಿದ್ದಾರೆ. ಕೇಂದ್ರ ಸರ್ಕಾರವು ಹೊರ ರಾಜ್ಯಗಳಿಂದ ತವರು ಜಿಲ್ಲೆಗಳಿಗೆ / ರಾಜ್ಯಗಳಿಗೆ ತೆರಳಲು ಯಾವುದೇ ಅಡ್ಡಿ ಇಲ್ಲವೆಂದು ಘೋಷಣೆ ಮಾಡಿದ್ದರು, ಇವರೆಗೆ ಕರಾವಳಿ ಜಿಲ್ಲೆಗಳಿಗೆ ಆಗಮಿಸಲು ಈ ಭಾಗ ಜಿಲ್ಲಾಡಳಿತಗಳು ಅವಕಾಶ ನೀಡುತ್ತಿಲ್ಲ. ಈ ಬಗ್ಗೆ ಕೂಡಲೇ ಕ್ರಮತೆಗೆದುಕೊಳ್ಳಬೇಕೆಂದು ಕೋರುತ್ತೇವೆ.