ಮಂಗಳೂರು :ಕರಾವಳಿ ಅಭಿವೃದ್ಧಿ ಪ್ರಾಧಿಕಾರ 2017-18ನೇ ಸಾಲಿನ ಕ್ರಿಯಾಯೋಜನೆಯಲ್ಲಿ ಅನುಮೋದನೆಗೊಂಡ ಮಂಗಳೂರು ತಾಲೂಕಿನ ಮೂಡಬಿದಿರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬಟ್ಟೆ ಬಸ್ ನಿಲ್ದಾಣಕ್ಕೆ ಕಾಂಕ್ರೀಟ್ ಆವರಣ ನಿರ್ಮಾಣ ಕಾಮಗಾರಿ (ಅಂದಾಜು ಮೊತ್ತ ರೂ. 40.00 ಲಕ್ಷ)ಗೆ ಶಂಕು ಸ್ಥಾಪನೆಯನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಮಾನ್ಯ ಅಧ್ಯಕ್ಷರಾದ ಮಟ್ಟಾರು ರತ್ನಾಕರ ಹೆಗ್ಡೆ ಇತ್ತೀಚೆಗೆ ಇವರು ನೇರವೇರಿಸಿದರು.

ಕಾರ್ಯಕ್ರಮದ ಅಧ್ಯಕ್ಷ ಸ್ಥಾನವಹಿಸಿದ ಸ್ಥಳೀಯ ಶಾಸಕರಾದ ಶ್ರೀ ಉಮಾನಾಥ ಕೋಟ್ಯಾನ್ ಇವರು ಮಾತನಾಡುತ್ತಾ, ಬಚ್ಚೆ ಪ್ರದೇಶವು ಒಂದು ಬೆಳೆಯುವ ಪಟ್ಟಣವಾಗಿದ್ದು, ಈ ಪ್ರದೇಶದ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ವತಿಯಿಂದ ಒದಗಿಸಬೇಕೆಂದು ವಿನಂತಿಸಿದರು. ಶ್ರೀ ಮಟ್ಟಾರು ರತ್ನಾಕರ ಹೆಗ್ಡೆ, ಅಧ್ಯಕ್ಷರು ಇವರು ಮಾತನಾಡುತ್ತಾ, ಮುಂದಿನ ದಿನಗಳಲ್ಲಿ ಅನುದಾನದ ಲಭ್ಯತೆಯ ಆಧಾರದ ಮೇಲೆ ಅನುದಾನವನ್ನು ಒದಗಿಸುವ ಭರವಸೆಯನ್ನು ನೀಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ್ ಸದಸ್ಯರಾದ  ವಸಂತಿ ಕಿಶೋರ್, ತಾಲೂಕು ಪಂಚಾಯತ್ ಸದಸ್ಯರಾದ ಉಷಾ ಸುವರ್ಣ, ಬಜ್ಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ  ರೋಝ ಮಥಾಯಿಸ್, ಉಪಾಧ್ಯಕ್ಷರಾದ  ಮಹಮ್ಮದ್ ಶರೀಫ್, ಸ್ಥಳೀಯ ಗ್ರಾಮ ಪಂಚಾಯತ್ ಸದಸ್ಯರಾದ  ಕೆ. ಸುಧಾಕರ ಕಾಮತ್, ಲೋಕೇಶ್ ಪೂಜಾರಿ, ಸುರೇಂದ್ರ ಪೆರ್ಗಡೆ, ಸುಮಾ ಶೆಟ್ಟಿ, ಯಶೋಧ, ಕೆ. ಚಂದ್ರಕಾಂತ್ ವಲಯಾಧಿಕಾರಿ, ರಾಜೇಂದ್ರ ಕಲ್ಬಾವಿ, ಯೋಜನಾ ನಿರ್ದೇಶಕರು, ದ.ಕ ಜಿಲ್ಲಾ ನಿರ್ಮಿತಿ ಕೇಂದ್ರ, ಶರತ್, ಅಭಿಯಂತರರು, ದ.ಕ ಜಿಲ್ಲಾ ನಿರ್ಮಿತಿ ಕೇಂದ್ರ, ಸಾರ್ವಜನಿಕರು ಸ್ಥಳದಲ್ಲಿ ಉಪಸ್ಥಿತರಿದ್ದರು.