ಮಂಗಳೂರು: ಕುಡಿಯಲು ನೀರು ಇಲ್ಲ, ಮಲಗಲು ಚಾಪೆ ಇಲ್ಲ, ಊಟ ರುಚಿ ಇಲ್ಲ, ಶೌಚಾಲಯ ಸರಿ ಇಲ್ಲ. ಗಬ್ಬಿನ ವಾತಾವರಣ , ಕೇಳುವವರಿಲ್ಲ. ಪ್ರಾಣಿಗಿಂತ ಕೀಳಾಗಿ ಕಾಣುವುದು, ಕಠೋರ ವರ್ತನೆ ಇವೆಲ್ಲವೂ ಸರ್ಕಾರಿ ಕ್ವಾರಂ ಟೈನ್ ಕೇಂದ್ರ ಗಳ ಸ್ಥಿತಿ. ಅವ್ಯವಸ್ಥೆ ಆಗರವಾಗಿದೆ. ಈಗಾಗಲೇ 1.1 ಲಕ್ಷ ಮಂದಿ ರಾಜ್ಯದಲ್ಲಿ ಕ್ವಾರಂ ಟೈನ್ ಗೆ ಒಳಗಾಗಿದ್ದಾರೆ. ಅವರಲ್ಲಿ ಎಷ್ಟು ಮಂದಿ ಶಾಲೆ, ಕಾಲೇಜು, ವಸತಿ ನಿಲಯ, ಛತ್ರಗಳಲ್ಲಿ ಇದ್ದಾರೆ ಮತ್ತು ಎಷ್ಟು ಮಂದಿ ಹೋಟೆಲ್ ಗಳಲ್ಲಿ ಇದ್ದಾರೆ ಎಂಬ ಅಂಕಿಅಂಶಗಳು ಇಲ್ಲ್. ಸಾಂಸ್ಥಿಕ ಕ್ವಾರಂ ಟೈನ್ ನಲ್ಲಿ ಇರುವವರು ಎಷ್ಟು?, ಮನೆ ಯಲ್ಲಿ ಕ್ವಾರಂ ಟೈನ್ ಮಾಡುವವರೆಷ್ಟು? ಎಂಬುವ ಅಂಕಿಅಂಶಗಳು ಸರ್ಕಾರದಲ್ಲಿ ಇಲ್ಲ. 14 ದಿನಗಳ ಕ್ವಾರಂ ಟೈನ್ ಮಾಡಿ ಅವಧಿ ಮುಗಿಸಿದ ನೂರಾರು ಮಂದಿ ತಪಾಸಣೆಯ ವರದಿ ಬಂದಿಲ್ಲ ಅಂತ ಅವರನ್ನು ಬಿಡುಗಡೆ ಗೊಳಿಸದೆ ಇಟ್ಟಿದ್ದಾರೆ. ಶೇಕಡಾ 40ಡಿಗ್ರಿ ಕ್ಕಿಂತ ಹೆಚ್ಚಿನ ಸುಡು ಬಿಸಿಲಿನ ತಾಪದಲ್ಲಿ ಬಡ ವಲಸಿಗರನ್ನೆಲ್ಲಾ ಒಂದೇ ಸ್ಥಳದಲ್ಲಿಟ್ಟು ಕ್ವಾರಂ ಟೈನ್ ಮಾಡುತ್ತಿದ್ದಾರೆ. ಕೆಲವು ಕ್ವಾರಂ ಟೈನ್ ಕೇಂದ್ರ ಗಳಿಂದ ಪಾಸಿಟಿವ್ ಕೇಸ್ ಗಳು ಬರುತ್ತಿವೆ. ಹಲವು ಆತ್ಮಹತ್ಯೆ ಪ್ರಕರಣಗಳು ಕ್ವಾರಂ ಟೈನ್ ಕೇಂದ್ರ ಗಳಲ್ಲಿ ನಡೆದಿವೆ,ಸಾವಿನ ಪ್ರಕರಣಗಳು ಕೂಡ ಬೆಳಕಿಗೆ ಬಂದಿವೆ. ಈಗಾಗಲೇ ಕ್ವಾರಂ ಟೈನ್ ನ ದಂಧೆ ಶುರುವಾಗಿದೆ. ಇದೆಲ್ಲಾಕ್ಕಿಂತ ಆತಂಕದ ವಿಷಯವು, ಸುಮಾರು 100 ಕ್ಕಿಂತ ಹೆಚ್ಚು ವಲಸಿಗರು ಗಡಿ ದಾಟಿ ಕ್ವಾರಂ ಟೈನ್ ಅನ್ನು ತಪ್ಪಿಸಿ ರಾಜ್ಯದೊಳಗೆ ಬಂದು ನಾಪತ್ತೆಯಾಗಿದ್ದಾರೆ. ಸರಕಾರದ ಧೋರಣೆ ಯಿಂದ ಕೊರೊನಾ ಹರಡುವಿಕೆ ಅದೀಗ ಸಾಮುದಾಯಿಕ ಪ್ರಸರಣದ ಅಂಚಿನಲ್ಲಿದೆ. ಸೋಂಕು ಹರಡುವಿಕೆ ಯ ಪ್ರಮಾಣವನ್ನು ನಿಯಂತ್ರಿಸುದರಲ್ಲಿ ಮತ್ತು ಕ್ವಾರಂ ಟೈನ್ ಅನ್ನು ವ್ಯವಸ್ಥಿತವಾಗಿ, ಸಮರ್ಪಕವಾಗಿ ನಿರ್ವಹಿಸುದರಲ್ಲಿ ಸರ್ಕಾರವು ಸಂಪೂರ್ಣವಾಗಿ ವಿಫಲವಾಗಿದೆ. ಇದರ ನೈತಿಕ ಹೊಣೆ ಹೊತ್ತು ಆರೋಗ್ಯ ಸಚಿವರಾದ ರಾಮುಲು ಅವರು ರಾಜೀನಾಮೆ ನೀಡಬೇಕೆಂದು ಕಾಂಗ್ರೆಸ್ ಪಕ್ಷವು ಆಗ್ರಹಿಸುತ್ತದೆ.
ನೆರೆಹೊರೆಯ ರಾಜ್ಯಗಳಲ್ಲಿರುವ 1.9 ಲಕ್ಷ ಮಂದಿ ಕನ್ನಡಿಗರು ಬರುವವರಿದ್ದಾರೆ. ಅವರ ಕ್ವಾರಂ ಟೈನ್ ಗೆ ಯಾವ ಸಿದ್ದತೆಯನ್ನು ಸರ್ಕಾರವು ಮಾಡಿದೆ.? ತೀರಾ ಸಂಕಷ್ಟಕ್ಕೆ ಗುರಿಯಾದವರು,ಲಾಕ್ ಡೌನ್ ನಿಂದ ಕೆಲಸಗಳನ್ನು ಕಳೆದುಕೊಂಡವರು.ಅವರಿಗಾಗಿ ಯಾವ ರೀತಿಯ ವ್ಯವಸ್ಥೆ ಯನ್ನು ಸರ್ಕಾರವು ಮಾಡಿದೆ? ಈ ಸರಕಾರಕ್ಕೆ ಜನ ಸಾಮಾನ್ಯರ ಬಗ್ಗೆ ಯಾವುದೇ ರೀತಿಯ ಕಾಳಜಿಯಾಗಲಿ, ಕಳಕಳಿಯಾಗಲಿ ಕಿಂಚಿತ್ತೂ ಇಲ್ಲ. ರಾಜ್ಯದ ಜನರ ಅಮೂಲ್ಯವಾದ ಜೀವವನ್ನು ಉಳಿಸುವುದು, ಅವರ ಬದುಕನ್ನು ಸಂರಕ್ಷಿಸುವುದು ಯಾವುದೇ ಪ್ರಜಾಸತ್ತಾತ್ಮಕ ಸರ್ಕಾರದ ಸರ್ವೋಚ್ಚ ಪ್ರಾಥಮಿಕ ಕರ್ತವ್ಯ ವಾಗಿದೆ.ಅದನ್ನು ಬಿಟ್ಟು ಸರ್ಕಾರವು ಆರ್ಥಿಕ ಪ್ಯಾಕೇಜ್ ಗಳನ್ನು ಘೋಷಿಸುವ ಕೀಳು ಮಟ್ಟದ ರಾಜಕೀಯವನ್ನು ಮಾಡುತ್ತಿದೆ. ಸರ್ಕಾರದ ಪಾರ್ಶ್ವವಾಯು ನೀತಿ ರಾಜ್ಯವನ್ನು ಅದ್ವಾನ ಪರಿಸ್ಥಿತಿಗೆ ತಂದು ನಿಲ್ಲಿಸಿದೆ.
ರಾಷ್ಟ್ರೀಯ ವಿಪತ್ತು ಕಾಯಿದೆ ಪ್ರಕಾರ ಕ್ವಾರಂ ಟೈನ್ ನ ವೆಚ್ಚ ವನ್ನು ಸಂಪೂರ್ಣ ವಾಗಿ ಸರ್ಕಾರವು ವಹಿಸಬೇಕು. ಕಾಯಿದೆಯು ನಿರ್ಧರಿಸಿದ ಗುಣಮಟ್ಟದ ವ್ಯವಸ್ಥೆ ಯನ್ನು ನೀಡುದರಲ್ಲಿ ಸರ್ಕಾರವು ಎಡವಿದೆ. ಆಂದ್ರಪ್ರದೇಶದ ಸರ್ಕಾರವು ನೆರೆಹೊರೆಯ ರಾಜ್ಯದಿಂದ ಬಂದ ವಲಸಿಗರನ್ನು ಸೇರಿದಂತೆ ಗಲ್ಪ್ ನಿಂದ ಬಂದ ತೆಲುಗರಿಗೆ ಉಚಿತ ಕ್ವಾರಂ ಟೈನ್ ವ್ಯವಸ್ಥೆ ಯನ್ನು ಮಾಡಿದೆ. ಬಿಜೆಪಿ ಆಡಳಿತರೂಢ ಸರಕಾರವು ಧಾರ್ಮಿಕ ದತ್ತಿ ಇಲಾಖೆ ಮೂಲಕ ತನ್ನ ಸ್ವಾಧೀನದ ದೇವಸ್ಥಾನಗಳಿಂದ ಫಂಡನ್ನು ಸಂಗ್ರಹಿಸಿ ದೆ. ಅಲ್ಲದೆ ಇತರ ಖಾಸಗಿ ದೇವಸ್ಥಾನಗಳಿಂದಲೂ ಕೋವಿಡ್ ಗಾಗಿ ಹಣವನ್ನು ದೇಣಿಗೆ ರೂಪದಲ್ಲಿ ಸಂಗ್ರಹಿಸಿದೆ. ದಾನಿಗಳು ಕೊಟ್ಟಿದಾರೆ. ವಿಪತ್ತು ಪ್ರಾಧಿಕಾರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣಕಾಸಿನ ವ್ಯವಸ್ಥೆ ಇದೆ. ಸರಕಾರವುಈಗ ಕ್ವಾರಂ ಟೈನ್ ಕೇಂದ್ರಗಳನ್ನು ನಿರ್ವಹಿಸಲು ಯಾರ ಹಣವನ್ನು ಯಾವ ಹಣವನ್ನು ಉಪಯೋಗಿಸುತ್ತಿದೆ? ಸರ್ಕಾರದ ಅಧೀನದ ದೇವಸ್ಥಾನಗಳ ಫಂಡನ್ನು ಕ್ವಾರಂ ಟೈನ್ ಕೇಂದ್ರಗಳನ್ನು ನಡೆಸಲು ವೆಚ್ಚ ಮಾಡಿದಾದರೆ ಅದನ್ನು ಬಹಿರಂಗ ಪಡಿಸ ಬೇಕಾಗಿದೆ. ಗುಣಮಟ್ಟದ ಕ್ವಾರಂ ಟೈನ್ ವ್ಯವಸ್ಥೆಯು ಇಲ್ಲದ ಕಾರಣ ವಿಪತ್ತು ಪ್ರಾಧಿಕಾರದ ಫಂಡ್ ವಿನಿಯೋಗವಾಗಿಲ್ಲ. ಹಾಗಾದರೆ ವಿಪತ್ತು ಪ್ರಾಧಿಕಾರದ ಹಣ ಎಲ್ಲಿ ಹೋಗಿದೆ. ಸರಕಾರವು ದಿವಾಳಿ ಸ್ಥಿತಿ ಯಲ್ಲಿ ಇದೆಯೇ? ಸಾರ್ವಜನಿಕರಲ್ಲಿ ಗೊಂದಲವಿದೆ. ಸರ್ಕಾರವು ಸ್ಪಷ್ಟ ಮಾಹಿತಿಯನ್ನು ನೀಡಬೇಕು ಎಂದು ಕಾಂಗ್ರೆಸ್ ಪಕ್ಷವು ಒತ್ತಾಯ ಪಡಿಸುತ್ತದೆ.
ಸರ್ಕಾರದ ಮೊದಲ ಆದ್ಯತೆ ಏನು? ಕರ್ನಾಟಕದ ಆರುವರೆ ಕೋಟಿ ಕನ್ನಡಿಗರ ಜೀವ, ಬದುಕು ಸರ್ಕಾರದ ಮೊದಲ ಆದ್ಯತೆಯಾದರೆ ಕ್ವಾರಂ ಟೈನ್ ವ್ಯವಸ್ಥೆಯ ಕುರಿತು ಪ್ರತಿಪಕ್ಷಗಳ ಸಭೆಯನ್ನು ಏರ್ಪಡಿಸಿ ಮಾತಾಡಿ. ಜೂನ್ ನಲ್ಲಿ ಲಾಕ್ ಡೌನ್ ಅನ್ನು ಇನ್ನಷ್ಟು ಹೆಚ್ಚಿನ ರೀತಿಯಲ್ಲಿ ಸಡಿಲಿಕೆಯನ್ನು ಸರ್ಕಾರವು ಮಾಡುದರಿಂದ ಪರಿಸ್ಥಿತಿಯು ಕೈ ಮೀರುವ ಸಾದ್ಯತೆ ಇದೆ. ಪೂರ್ಣ ಪ್ರಮಾಣದ ಅಂತರರಾಜ್ಯ ವಾಹನ ಸಾಗಟವು ದೊಡ್ದ ಸವಾಲಾಗಿಪರಿಣಮಿಸಲಿದೆ. ಎಲ್ಲಾ ಪ್ರಾರ್ಥನಾಮಂದಿರಗಳು ತೆರೆಯಲಿದೆ.ಸಾಮೂಹಿಕ ಪ್ರಯತ್ನ ದಿಂದ ಮಾತ್ರ ಕೊರೊನಾವನ್ನು ತಡೆಗಟ್ಟಲು ಸಾದ್ಯ. ವಲಸೆ ಕಾರ್ಮಿಕರ ವಿಷಯದಲ್ಲಿ ಅವರ ಪ್ರಯಾಣ ವೆಚ್ಚವನ್ನು ಭರಿಸಿ, ತವರಿಗೆ ಕಳುಹಿಸುವ ದೊಡ್ಡ ಪ್ರಮಾಣದ ಪ್ರಯತ್ನವನ್ನು ಕಾಂಗ್ರೆಸ್ ಪಕ್ಷವು ಮಾಡಿ ತೋರಿಸಿದೆ. ಇವತ್ತು ಆಡಳಿತ ಪಕ್ಷ ಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಪಂಚಾಯತುಗಳು, ಜಿಲ್ಲಾ ಪಂಚಾಯತ್ ಗಳು, ಪುರಸಭೆಗಳು, ನಗರಸಭೆಗಳು,ನಗರಪಾಲಿಕೆಗಳು ಪ್ರತಿಪಕ್ಷ ಗಳ ಕೈಯಲ್ಲಿ ಇವೆ. ಮುಂದಿನ ದಿನಗಳಲ್ಲಿ ಲಕ್ಷಾಂತರ ಜನರು ರಾಜ್ಯ ಕ್ಕೆ ಬರಲಿದ್ದಾರೆ. ಅವರಿಗೆಲ್ಲಾ ಕ್ವಾರಂ ಟೈನ್ ಮಾಡಿ, ನಿಗಾವಹಿಸುವುದು ಸುಲಭದ ಮಾತಲ್ಲ. ಸರಕಾರವು ಈ ನಿಟ್ಟಿನಲ್ಲಿ ಕೂಡಲೇ ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ಪಕ್ಷವು ಹೇಳುತ್ತದೆ.
ಲಾಕ್ ಡೌನ್ ಸಡಿಲಿಕೆಯಿಂದ ದಿನ ಹೋದ ಹಾಗೆ ಸಾಮಾಜಿಕ ಅಂತರ ಪಾಲನೆ ಮತ್ತು ಮಾಸ್ಕ್ ಧಾರಣೆ ಗಣನೀಯವಾಗಿ ಕಡಿಮೆಯಾಗುತ್ತಿದೆ. ಸೋಂಕು ಪೀಡಿತರ ಪ್ರಾಥಮಿಕ, ದ್ವಿತೀಯ ಸಂಪರ್ಕದಿಂದ ಹರಡುತ್ತಿರುವ ಕೊರೊನಾ ಸೋಂಕು ಇದೀಗ ಯಾವುದೇ ಪ್ರವಾಸದ ಹಿನ್ನೆಲೆ ಇಲ್ಲದೆ ಅಲ್ಲಲ್ಲಿ ಕಾಣಿಸಿಕೊಳ್ಳಲು ಆರಂಭಿಸಿದೆ. ಹಾಗೆಯೇ ಸರ್ಕಾರವು ಕೂಡ ಇದೀಗ ಮದುವೆ, ಮುಂಜಿ ಇತ್ಯಾದಿ ಇನ್ನಿತರ ಕಾರ್ಯಕ್ರಮಗಳಿಗೆ ನಡೆಸಲು ಅನುಮತಿಯನ್ನು ನೀಡಲಾಗಿದೆ. ಪ್ರಾರ್ಥನಾ ಮಂದಿರ ಗಳು ತೆರೆಯಲಿವೆ. ಕೋವಿಡ್19 ಸ್ಪೋಟ ಗೊಳ್ಳುವ ಎಲ್ಲಾ ಸಾದ್ಯತೆ ಗಳು ಇವೆ. ನಾಳೆ ಕರ್ನಾಟಕ ರಾಜ್ಯವು ಇಟೆಲಿ, ಸ್ಪೇನ್ ,ಅಮೇರಿಕಾ ದೇಶಗಳ ಪರಿಸ್ಥಿತಿಗೆ ಬಂದರೆ ಅದಕ್ಕೆ ಸರ್ಕಾರವೇ ನೇರಾ ಹೊಣೆ ಎಂದು ಕಾಂಗ್ರೆಸ್ ಪಕ್ಷ ವು ಎಚ್ಚರಿಕೆ ನೀಡುತ್ತದೆ.
ವಿದ್ಯಾರ್ಥಿಗಳ ಆರೋಗ್ಯವನ್ನು ಅಪಾಯದ ಅಂಚಿನಲ್ಲಿಟ್ಟು ಎಸ್ ಎಸ್ ಎಲ್ ಸಿ ಪರೀಕ್ಷೆ ಯನ್ನು ಮಾಡುವಂತಹ ಹಠಮಾರಿತನ ಸರ್ಕಾರಕ್ಕೆ ಯಾಕೆ ಬೇಕು? ಎಲ್ಲವೂ ತಿಳಿಯಾದ ಮೇಲೆ ಸರ್ಕಾರವು ಕೋವಿಡ್ ಮೇಲೆ ಕನಿಷ್ಠ ನಿಯಂತ್ರಣ ಸಾಧಿಸಿದ ನಂತರ ಎಸ್ಸೆಸ್ಸೆಲ್ಸಿ ಪರೀಕ್ಷೆ ನಡೆಸುದನ್ನು ಬಿಟ್ಟು ಯಾರದೋ ಮಾತು ಕೇಳಿ ಮಾಡುವುದು ಆತುರದ ಹೆಜ್ಜೆಯಾಗಿದೆ.ಅತ್ಮಘಾತುಕ ಕ್ರಮವಾಗಿದೆ.
ಕೊರೊನಾ ಸೋಂಕು ನಿರ್ಬಂಧ ದಲ್ಲಿ ಜೂನ್ ತಿಂಗಳ ಬಹಳ ನಿರ್ಣಯಕ ವೆಂದು ಹಲವು ಸಾಂಕ್ರಾಮಿಕ ರೋಗ ತಜ್ಞರು ಈಗಾಗಲೇ ಹೇಳಿದ್ದಾರೆ.
ದೇಶದಲ್ಲಿ ಮಹಾಮಾರಿ ಕೊರೋನಾ ವೈರಸ್ ಪ್ರಕರಣಗಳು ಬರುವ ಜೂನ್-ಜುಲೈನಲ್ಲಿ ಗರಿಷ್ಠ ಮಟ್ಟಕ್ಕೆ ಹೋಗಲಿದೆ ಎಂದು ಭಾರತದ ಉನ್ನತ ವೈದ್ಯಕೀಯ ಸಂಸ್ಥೆಯಾದ ಏಮ್ಸ್ ಹೇಳಿ
ಕೋವಿಡ್ ಸೋಂಕು ಪ್ರಕರಣಗಳು ಇದೀಗ ಗ್ರಾಮೀಣ ಪ್ರದೇಶಗಳಲ್ಲಿ ಕಾಣತೊಡಗಿದೆ. ವಿದ್ಯಾರ್ಥಿಗಳು ಮತ್ತು ಪೋಷಕರು ಆತಂಕದಲ್ಲಿ ಇದ್ದಾರೆ. ಪರೀಕ್ಷೆಯು ಈ ಸಂಧರ್ಭದಲ್ಲಿ ವಿದ್ಯಾರ್ಥಿಗಳಿಗೆ, ಹದಿನೈದು ವರ್ಷ ವಯಸ್ಸಿನ ಮಕ್ಕಳಿಗೆ ದೊಡ್ಡ ಪ್ರಮಾಣದ ಹಿಂಸೆ. ಸಚಿವರು ಮಕ್ಕಳ ಹಿತದೃಷ್ಟಿಯಿಂದ ಪರೀಕ್ಷೆ ಮಾಡುವುದು ಅಂತ ಹೇಳುತ್ತಾರೆ ಆದರೆ ಮಕ್ಕಳ ಬಗೆ ಅವರ ಕಾಳಜಿ ಸಾಲದು. ಪರೀಕ್ಷೆಗೆ ಕೂತು ಕೊಳ್ಳುವವರಲ್ಲಿ ಬಾರಿ ಸಂಖ್ಯೆಯಲ್ಲಿ ಬಡವರ ಮಕ್ಕಳು ಇದ್ದಾರೆ. ಅವರ ಭವಿಷ್ಯತ್ತಿನ ಬಗ್ಗೆ ಸರಕಾರಕ್ಕೆ ಯಾಗಲಿ ಸಚಿವರಿಗೆಯಾಗಲಿ ಚಿಂತೆ ಇಲ್ಲ.